Friday, April 10, 2026
Google search engine

Homeರಾಜ್ಯಸುದ್ದಿಜಾಲಬೆಂಗಳೂರಿನಲ್ಲಿ ಝೋಂಬಿ ಡ್ರಗ್ಸ್ ಆತಂಕ: ಪೊಲೀಸ್ ಇಲಾಖೆ ಸ್ಪಷ್ಟನೆ

ಬೆಂಗಳೂರಿನಲ್ಲಿ ಝೋಂಬಿ ಡ್ರಗ್ಸ್ ಆತಂಕ: ಪೊಲೀಸ್ ಇಲಾಖೆ ಸ್ಪಷ್ಟನೆ

ಬೆಂಗಳೂರು ನಗರದಲ್ಲಿ ‘ಝೋಂಬಿ ಡ್ರಗ್’ ಬಳಕೆಯಾಗುತ್ತಿರುವ ಬಗ್ಗೆ ಆತಂಕ ಸೃಷ್ಟಿಯಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್‌ ಆಗಿತ್ತು. ಇದಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸ್‌ ಇಲಾಕೆ ಸ್ಟಷ್ಟನೆ ನೀಡಿದೆ.

ನಶೆಯಲ್ಲಿರುವ ವ್ಯಕ್ತಿಯೊಬ್ಬ ಒಂದೇ ಸ್ಥಳದಲ್ಲಿ ಗಂಟೆಗಟ್ಟಲೆ, ಮೈ ಮೇಲೆ ಪ್ರಜ್ಞೆ ಇಲ್ಲದ ಸ್ಥಿಯಲ್ಲಿ ನಿಂತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿವೆ.

ಕೆಲವರು ಇದನ್ನು ಜೈಲಜೈನ್ (xylazine) ಎಂಬ ಮದ್ದಿರಬಹುದು ಅಥವಾ ಇತರ ಡ್ರಗ್ಸ್ ಪ್ರಭಾವ ಇರಬಹುದು ಎಂದು ಹೇಳಿ ಹಂಚಿಕೊಂಡಿದ್ದರು. ಇದರ ಪರಿಣಾಮವಾಗಿ ನಗರದಲ್ಲಿ ಹೊಸ ರೀತಿಯ ಅಪಾಯಕಾರಿ ಡ್ರಗ್ ಪ್ರವೇಶಿಸಿದೆ ಎಂಬ ವದಂತಿ ಹರಡಿತ್ತು.

ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಬೆಂಗಳೂರು ಈಶಾನ್ಯ ವಿಭಾಗದ ಪೊಲೀಸರು, ತಕ್ಷಣ ತನಿಖೆ ಆರಂಭಿಸಿ, ವೀಡಿಯೋದಲ್ಲಿರುವ ವ್ಯಕ್ತಿಯನ್ನು ಪತ್ತೆ ಹಚ್ಚಿದ್ದಾರೆ. ನಂತರ ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ, ಯಾವುದೇ ರೀತಿಯ ಮಾದಕ ಪದಾರ್ಥಗಳು ಅಥವಾ ಡ್ರಗ್ಸ್ ಅವನ ದೇಹದಲ್ಲಿ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಈ ಕುರಿತು ಸ್ಪಷ್ಟನೆ ನೀಡಿ, ಆ ವ್ಯಕ್ತಿ ಬೆಂಗಳೂರಿನವನು ಅಲ್ಲ. ಹೊರ ರಾಜ್ಯದಿಂದ ಬಂದಿದ್ದ ಆತ ಕೆಲ ಆರೋಗ್ಯ ಸಮಸ್ಯೆ ಇದ್ದಿದ್ದರಿಂದ ಆತ ಔಷಧಿಗಳನ್ನು ಸೇವಿಸಿದ್ದ. ಅದರ ಜೊತೆಗೆ ಸ್ವಲ್ಪ ಪ್ರಮಾಣದ ಮದ್ಯ ಸೇವಿಸಿದ್ದರಿಂದ ದೇಹದ ಸಮತೋಲನ ಕಳೆದುಕೊಂಡು ವಿಚಿತ್ರವಾಗಿ ವರ್ತಿಸಿದ್ದಾನೆ. ಇದಕ್ಕೆ ಡ್ರಗ್ಸ್‌ಗೆ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾರೆ.

ಇದೇ ವೇಳೆ, ಸಾಮಾಜಿಕ ಜಾಲತಾಣಗಳಲ್ಲಿ ಪರಿಶೀಲಿಸದೇ ಇಂತಹ ವೀಡಿಯೋಗಳನ್ನು ಹಂಚುವುದು ಗಂಭೀರ ಪರಿಣಾಮ ಉಂಟುಮಾಡುತ್ತದೆ. ಯಾವುದೇ ವೀಡಿಯೋವನ್ನು ಅಪ್ಲೋಡ್ ಮಾಡುವ ಮೊದಲು ಅದರ ನೈಜತೆಯನ್ನು ಖಚಿತಪಡಿಸಿಕೊಳ್ಳಬೇಕು. ಇನ್ನು ಮುಂದೆ ತಪ್ಪು ಮಾಹಿತಿಯನ್ನು ಹರಡುವವರು ಮಾತ್ರವಲ್ಲ, ಅದನ್ನು ಹಂಚುವವರ ಮೇಲೂ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಸಧ್ಯ ವೀಡಿಯೋವನ್ನು ಮೊದಲು ಚಿತ್ರೀಕರಿಸಿ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿದ್ದ ವ್ಯಕ್ತಿಯನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದ್ದು, ಸಂಬಂಧಿಸಿದವರಿಗೂ ನೋಟಿಸ್ ನೀಡಲಾಗುವುದು ಎಂದು ತಿಲಿಸಿದ್ದಾರೆ.

RELATED ARTICLES
- Advertisment -
Google search engine

Most Popular