Saturday, April 11, 2026
Google search engine

Homeಸಿನಿಮಾಜೋಂಬಿ ಡ್ರಗ್ಸ್ ಕೇಸ್​​: ನಟ ದುನಿಯಾ ವಿಜಯ್ ಸೇರಿ 20 ಮಂದಿಗೆ ನೋಟಿಸ್‌ ?

ಜೋಂಬಿ ಡ್ರಗ್ಸ್ ಕೇಸ್​​: ನಟ ದುನಿಯಾ ವಿಜಯ್ ಸೇರಿ 20 ಮಂದಿಗೆ ನೋಟಿಸ್‌ ?

ಬೆಂಗಳೂರು: ಇತ್ತೀಚಿಗೆ ಝಾಂಬಿ ಡ್ರಗ್ಸ್‌ ಕುರಿತು ಯುವಕನೊಬ್ಬ ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋವೊಂದನ್ನ ಶೇರ್‌ ಮಾಡಿದ್ದ ಆ ವಿಡಿಯೋವನ್ನ ಸ್ಚತಃ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದ ನಟ ದುನಿಯಾ ವಿಜಯ್‌ಗೆ ಇದೀಗ ಕಾನೂನು ಸಂಕಷ್ಟ ಎದುರಾಗಿದೆ.

ಅಪಯಕಾರಿ ಝಾಂಬಿ ಡ್ರಗ್ಸ್ ಬೆಂಗಳೂರಿಗೆ ಲಗ್ಗೆ ಇಟ್ಟಿದೆ ಎನ್ನುವ ವಿಡಿಯೋವನ್ನು ಯುವಕನೊಬ್ಬ ತನ್ನ ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದ. ಯುವಕನ ವಿಡಿಯೋ ಪೂರ್ವಾಪರ ಪರಿಶೀಲಿಸದೇ ನಟ ದುನಿಯಾ ವಿಜಯ್ ಶೇರ್ ಮಾಡಿಕೊಂಡಿದ್ದರು. ನಾನು ಸಿನಿಮಾ ಮಾಡಿ ಡ್ರಗ್ಸ್ ಬಗ್ಗೆ ಮಾಹಿತಿ ನೀಡುವ ಕೆಲಸ ಮಾಡಿದ್ದೆ. ಪೊಲೀಸರು ಸರಿಯಾದ ಕ್ರಮ ಕೈಗೊಳ್ಳಲಿಲ್ಲ ಎಂದು ದುನಿಯಾ ವಿಜಯ್ ವಿಡಿಯೋ ಶೇರ್ ಮಾಡಿದ್ದರು. ಆ ವಿಡಿಯೋ ಈಗ ನಟನಿಗೆ ಸಂಕಷ್ಟ ತಂದೊಡ್ಡಿದೆ.

ಝಾಂಬಿ ವಿಡಿಯೋ ಬಗ್ಗೆ ಅಪಪ್ರಚಾರ ಮಾಡಿದ್ದ ಯುವಕನನ್ನ ಪೊಲೀಸರು ಅರೆಸ್ಟ್‌ ಮಾಡಿದ್ದರು.ಬಳಿಕ ಆತ ಕ್ಷಮೆ ಕೇಳಿದ್ದರಿಂದ ಆತನನ್ನ ಬಿಡುಗಡೆ ಸಹ ಮಾಡಲಾಯಿತು.

ಆದರೆ ಆರೋಪಿ ಹೇಮಂತ್ ವಿಡಿಯೋ ಶೇರ್ ಮಾಡಿದ್ದ 20ಕ್ಕೂ ಹೆಚ್ಚು ಮಂದಿಗೆ ನೋಟಿಸ್ ಕೊಟ್ಟು ‌ವಿಚಾರಣೆಗೆ ಕರೆಯಲು ಪೊಲೀಸರು ಮುಂದಾಗಿದ್ದಾರೆ. 20 ಮಂದಿಯಲ್ಲಿ ನಟ ದುನಿಯಾ ವಿಜಯ್‌ಗೂ ನೋಟಿಸ್ ಕೊಟ್ಟು ಸ್ಪಷ್ಟನೆ ಕೇಳಲು ಬಾಗಲೂರು ಪೊಲೀಸರು ಮುಂದಾಗಿದ್ದಾರೆ. ಸಧ್ಯ ನಟ ದುನಿಯಾ ವಿಜಯ್ ಹೊರ ರಾಜ್ಯದಲ್ಲಿರುವ ಮಾಹಿತಿ ಪಡೆದಿರುವ ಪೊಲೀಸರು ವಾಟ್ಸಪ್ ಮೂಲಕ ನೋಟಿಸ್ ಕೊಟ್ಟು ವಿಚಾರಣೆಗೆ ಕರೆದು ಸ್ಪಷ್ಟನೆ ಪಡೆಯಲು ಸಿದ್ಧತೆ ನಡೆಸಿದ್ದಾರೆ. 

RELATED ARTICLES
- Advertisment -
Google search engine

Most Popular