ನವದೆಹಲಿ : ಐಪಿಎಲ್ 2026ರಲ್ಲಿ ಇಂದು ಕ್ರಿಕೆಟ್ ಪ್ರಿಯರಿಗೆ ಭರ್ಜರಿ ಮನರಂಜನೆ ಕಾದಿದೆ. ಏಪ್ರಿಲ್ 19 ರಂದು ಎರಡು ಪ್ರಮುಖ ಪಂದ್ಯಗಳು ನಡೆಯಲಿದ್ದು, ಕೋಲ್ಕತ್ತಾ ನೈಟ್ ರೈಡರ್ಸ್ vs ರಾಜಸ್ಥಾನ್ ರಾಯಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ vs ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಪಂದ್ಯ 1: ಕೋಲ್ಕತ್ತಾ ನೈಟ್ ರೈಡರ್ಸ್ vs ರಾಜಸ್ಥಾನ್ ರಾಯಲ್ಸ್
ಸಮಯ: ಮಧ್ಯಾಹ್ನ 3:30
ಸ್ಥಳ: ಈಡನ್ ಗಾರ್ಡನ್ಸ್, ಕೋಲ್ಕತ್ತಾ
ಮುಖಾಮುಖಿ ಮತ್ತು ಫಾರ್ಮ್:
ಕೋಲ್ಕತ್ತಾ ನೈಟ್ ರೈಡರ್ಸ್ (KKR) ಈ ಸೀಸನ್ ನಲ್ಲಿ ಆಡಿದ 6 ಪಂದ್ಯಗಳಲ್ಲೂ ಸೋಲನ್ನನುಭವಿಸಿ ಸಂಕಷ್ಟದಲ್ಲಿದೆ. ಮತ್ತೊಂದೆಡೆ, ರಾಜಸ್ಥಾನ್ ರಾಯಲ್ಸ್ (RR) ಕೇವಲ ಒಂದು ಪಂದ್ಯವನ್ನು ಮಾತ್ರ ಸೋತು ಭರ್ಜರಿ ಫಾರ್ಮ್ನಲ್ಲಿದೆ. ಇತಿಹಾಸ ನೋಡಿದರೆ, ಇತ್ತೀಚಿನ 4 ಪಂದ್ಯಗಳಲ್ಲಿ ಈಡನ್ ಗಾರ್ಡನ್ಸ್ನಲ್ಲಿ ರಾಜಸ್ಥಾನ್ 3 ಬಾರಿ ಕೆಕೆಆರ್ ಅನ್ನು ಸೋಲಿಸಿದೆ.
ಪಿಚ್ ವರದಿ : ಈಡನ್ ಗಾರ್ಡನ್ಸ್ ಬ್ಯಾಟಿಂಗ್ಗೆ ಪೂರಕವಾಗಿದೆ. ಇಬ್ಬನಿ (Dew) ಪ್ರಮುಖ ಪಾತ್ರ ವಹಿಸುವುದರಿಂದ ಟಾಸ್ ಗೆದ್ದ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು.
ಸಂಭಾವ್ಯ ಪ್ಲೇಯಿಂಗ್-11:
KKR: ಟಿಮ್ ಸೈಫರ್ಟ್, ಅಜಿಂಕ್ಯ ರಹಾನೆ (ನಾಯಕ), ಕ್ಯಾಮರೂನ್ ಗ್ರೀನ್, ಅಂಗಕ್ರಿಶ್ ರಘುವಂಶಿ, ರೋವ್ಮನ್ ಪೊವೆಲ್, ರಿಂಕು ಸಿಂಗ್, ರಮಣದೀಪ್ ಸಿಂಗ್, ಅನುಕುಲ್ ರಾಯ್, ಸುನಿಲ್ ನರೈನ್, ವರುಣ್ ಚಕ್ರವರ್ತಿ, ಕಾರ್ತಿಕ್ ತ್ಯಾಗಿ.
RR: ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್, ರಿಯಾನ್ ಪರಾಗ್ (ನಾಯಕ), ಲುವಾನ್-ಡ್ರೆ ಪ್ರಿಟೋರಿಯಸ್, ಡೊನೊವನ್ ಫೆರೇರಾ, ರವೀಂದ್ರ ಜಡೇಜಾ, ಜೋಫ್ರಾ ಆರ್ಚರ್, ನಾಂದ್ರೆ ಬರ್ಗರ್, ಸಂದೀಪ್ ಶರ್ಮಾ, ರವಿ ಬಿಷ್ಣೋಯ್, ತುಷಾರ್ ದೇಶಪಾಂಡೆ.
ಪಂದ್ಯ 2: ಲಕ್ನೋ ಸೂಪರ್ ಜೈಂಟ್ಸ್ vs ಪಂಜಾಬ್ ಕಿಂಗ್ಸ್
ಸಮಯ: ಸಂಜೆ 7:30
ಸ್ಥಳ: ನ್ಯೂ ಚಂಡೀಗಢ ಸ್ಟೇಡಿಯಂ
ಮುಖಾಮುಖಿ ಮತ್ತು ಫಾರ್ಮ್:
ಪಂಜಾಬ್ ಕಿಂಗ್ಸ್ (PBKS) ಈ ಸೀಸನ್ನಲ್ಲಿ ಇದುವರೆಗೆ ಅಜೇಯವಾಗಿದ್ದು ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನದಲ್ಲಿದೆ. ಲಕ್ನೋ ಸೂಪರ್ ಜೈಂಟ್ಸ್ (LSG) 7ನೇ ಸ್ಥಾನದಲ್ಲಿದ್ದು, ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಸಮಸ್ಯೆಯನ್ನು ಎದುರಿಸುತ್ತಿದೆ. ಉಭಯ ತಂಡಗಳ ಮುಖಾಮುಖಿಯಲ್ಲಿ ತಲಾ 3 ಪಂದ್ಯಗಳನ್ನು ಗೆದ್ದಿದ್ದು ಸಮಬಲ ಹೊಂದಿವೆ.
ಪಿಚ್ ವರದಿ : ನ್ಯೂ ಚಂಡೀಗಢದ ಮೈದಾನ ಹೈ-ಸ್ಕೋರಿಂಗ್ ಪಂದ್ಯಕ್ಕೆ ಹೆಸರುವಾಸಿ. ಕಳೆದ ಪಂದ್ಯದಲ್ಲಿ ಪಂಜಾಬ್ ಇಲ್ಲಿ 220 ರನ್ಗಳ ಗುರಿಯನ್ನು ಬೆನ್ನಟ್ಟಿತ್ತು. ಹೀಗಾಗಿ ರನ್ ಮಳೆ ನಿರೀಕ್ಷಿಸಬಹುದು.
ಸಂಭಾವ್ಯ ಪ್ಲೇಯಿಂಗ್-11:
PBKS: ಪ್ರಭ್ಸಿಮ್ರನ್ ಸಿಂಗ್, ಪ್ರಿಯಾಂಶ್ ಆರ್ಯ, ಕೂಪರ್ ಕೊನೊಲಿ, ಶ್ರೇಯಸ್ ಅಯ್ಯರ್ (ನಾಯಕ), ಮಾರ್ಕಸ್ ಸ್ಟೋಯಿನಿಸ್, ಶಶಾಂಕ್ ಸಿಂಗ್, ಮಾರ್ಕೊ ಜಾನ್ಸೆನ್, ಅರ್ಶ್ದೀಪ್ ಸಿಂಗ್, ವಿಜಯ್ ಕುಮಾರ್ ವೈಶಾಖ್, ಕ್ಸೇವಿಯರ್ ಬಾರ್ಟ್ಲೆಟ್, ಯುಜ್ವೇಂದ್ರ ಚಹಾಲ್.
LSG: ಮಿಚೆಲ್ ಮಾರ್ಷ್, ಏಡನ್ ಮಾರ್ಕ್ರಾಮ್, ರಿಷಬ್ ಪಂತ್ (ನಾಯಕ), ನಿಕೋಲಸ್ ಪೂರನ್, ಆಯುಷ್ ಬಡೋನಿ, ಜಾರ್ಜ್ ಲಿಂಡೆ, ಅಬ್ದುಲ್ ಸಮದ್, ಅವೇಶ್ ಖಾನ್, ಪ್ರಿನ್ಸ್ ಯಾದವ್, ಮೊಹಮ್ಮದ್ ಶಮಿ (ಏಜೆನ್ಸಿಸ್)



