Monday, March 9, 2026
Google search engine

Homeರಾಜ್ಯಬೆಂಗಳೂರು ಪಾಲಿಕೆ ಚುನಾವಣೆ: 369 ವಾರ್ಡ್‌ಗಳಿಗೆ ಅಂತಿಮ ಮೀಸಲಾತಿ ಪಟ್ಟಿ ಪ್ರಕಟ

ಬೆಂಗಳೂರು ಪಾಲಿಕೆ ಚುನಾವಣೆ: 369 ವಾರ್ಡ್‌ಗಳಿಗೆ ಅಂತಿಮ ಮೀಸಲಾತಿ ಪಟ್ಟಿ ಪ್ರಕಟ

ಬೆಂಗಳೂರು: ನಗರದ ಐದು ನಗರ ಪಾಲಿಕೆಗಳನ್ನು ಒಳಗೊಂಡಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ 369 ವಾರ್ಡ್‌ಗಳಿಗೆ ವಾರ್ಡ್‌ವಾರು ಅಂತಿಮ ಮೀಸಲಾತಿ ಪಟ್ಟಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ನೀಡುವ ಮೂಲಕ ಸಾಮಾಜಿಕ ನ್ಯಾಯಕ್ಕೆ ವಿಶೇಷ ಒತ್ತು ನೀಡಲಾಗಿದೆ.

ಈ ಹಿಂದೆ ಪ್ರಕಟಿಸಿದ್ದ ಕರಡು ಮೀಸಲಾತಿ ಪಟ್ಟಿಗೆ ಬಂದಿದ್ದ ನೂರಾರು ಆಕ್ಷೇಪಣೆಗಳನ್ನು ಅಧಿಕಾರಿಗಳು ಪರಿಶೀಲಿಸಿ, ಅಗತ್ಯ ತಿದ್ದುಪಡಿಗಳೊಂದಿಗೆ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. ಒಟ್ಟು 369 ವಾರ್ಡ್‌ಗಳ ಪೈಕಿ 176 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಕರಡು ಪಟ್ಟಿಯಲ್ಲಿ ಕಂಡುಬಂದಿದ್ದ ಕೆಲವು ಅಸಮತೋಲನಗಳನ್ನು ಸರಿಪಡಿಸಿ, ಸಮರ್ಪಕವಾಗಿ ಮೀಸಲಾತಿ ಹಂಚಿಕೆ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಅಂತಿಮ ಪಟ್ಟಿಯ ಪ್ರಕಾರ 198 ವಾರ್ಡ್‌ಗಳನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದೆ. ಹಾಗೆಯೇ 43 ವಾರ್ಡ್‌ಗಳನ್ನು ಪರಿಶಿಷ್ಟ ಜಾತಿಗೆ, ಏಳು ವಾರ್ಡ್‌ಗಳನ್ನು ಪರಿಶಿಷ್ಟ ಪಂಗಡಕ್ಕೆ, 97 ವಾರ್ಡ್‌ಗಳನ್ನು ಹಿಂದುಳಿದ ವರ್ಗ ಎ ಗೆ ಹಾಗೂ 24 ವಾರ್ಡ್‌ಗಳನ್ನು ಹಿಂದುಳಿದ ವರ್ಗ ಬಿ ಗೆ ಮೀಸಲಿಡಲಾಗಿದೆ.

2011ರ ಜನಗಣತಿ ಆಧಾರವಾಗಿ ಜನವರಿ 8ರಂದು ಕರಡು ಮೀಸಲಾತಿ ಪಟ್ಟಿ ಪ್ರಕಟಿಸಲಾಗಿತ್ತು. ಜನವರಿ 23ರವರೆಗೆ ಸಾರ್ವಜನಿಕರಿಂದ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಬಳಿಕ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ರಚಿಸಲಾದ ಸಮಿತಿ ಆಕ್ಷೇಪಣೆಗಳನ್ನು ಪರಿಶೀಲಿಸಿ ಕೆಲವು ತಿದ್ದುಪಡಿಗಳನ್ನು ಶಿಫಾರಸು ಮಾಡಿತು. ಸಮಿತಿ ನೀಡಿದ ಅಂತಿಮ ಶಿಫಾರಸಿಗೆ ಸರ್ಕಾರ ಅನುಮೋದನೆ ನೀಡಿದ್ದು, ಇದರಿಂದ ಬಹುಕಾಲದಿಂದ ಮುಂದೂಡಿಕೆಯಾಗಿದ್ದ ಮಹಾನಗರ ಪಾಲಿಕೆ ಚುನಾವಣೆಗೆ ಮತ್ತೊಂದು ಮಹತ್ವದ ಹೆಜ್ಜೆ ಮುಂದಿಟ್ಟಂತಾಗಿದೆ.

RELATED ARTICLES
- Advertisment -
Google search engine

Most Popular