Tuesday, March 24, 2026
Google search engine

Homeರಾಜ್ಯಸುದ್ದಿಜಾಲಶಾಸಕ ಎ.ಆರ್‌.ಕೆ ಹುಟ್ಟುಹಬ್ಬ : ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಶಾಸಕ ಎ.ಆರ್‌.ಕೆ ಹುಟ್ಟುಹಬ್ಬ : ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಚಾಮರಾಜನಗರ : ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಆರ್.ಕೃಷ್ಣಮೂರ್ತಿ ಅವರ 65 ವರ್ಷದ ಹುಟ್ಟುಹಬ್ಬದ ಅಂಗವಾಗಿ ಅವರ ಅಭಿಮಾನಿಗಳ ಬಳಗದಿಂದ ನಗರದ ಜಿಲ್ಲಾ ಅಸ್ಪತ್ರೆಯಲ್ಲಿರುವ ತಾಯಿ ಮತ್ತು ಮಗು ಅಸ್ಪತ್ರೆಯ ವಿಭಾಗದಲ್ಲಿರುವ ಒಳ ರೋಗಿಗಳಿಗೆ ಹಣ್ಣು ಹಂಪಲು, ಬ್ರೆಡ್ ವಿತರಣೆ ಮಾಡಲಾಯಿತು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ ಅಸ್ಪತ್ರೆಯಲ್ಲಿರುವ ಬಾಣಂತಿಯರು ಹಾಗೂ ರೋಗಿಗಳಿಗೆ ಹಣ್ಣು ಹಂಪಲು ಬ್ರೇಡ್ ನೀಡಿ ನಂತರ ಮಾತನಾಡಿದ ಅವರು, ಕೊಳ್ಳೇಗಾಲ ಕ್ಷೇತ್ರದ ಜನಪ್ರಿಯ ಶಾಸಕರಾದ ಎ.ಆರ್.ಕೃಷ್ಣಮೂರ್ತಿ ಅವರು 65ನೇ ವರ್ಷಕ್ಕೆ ಕಾಲಿಟ್ಟುತ್ತಿರುವ ಈ ಸುಸಂದರ್ಭದಲ್ಲಿ ಭಗವಂತ ಅವರಿಗೆ ಆಯುಷ್ಯು ಆರೋಗ್ಯವನ್ನು ಕೊಟ್ಟು, ಇನ್ನು ಹೆಚ್ಚಿನ ರಾಜಕೀಯ ಅಧಿಕಾರವನ್ನು ನೀಡಲಿ. ಅವರ ತಂದೆಯವರಾದ ಬಿ.ರಾಚಯ್ಯನವರಂತೆ ಜನ ಸೇವೆ ಮಾಡುವ ಅವಕಾಶವನ್ನು ಕಲ್ಪಿಸಿಕೊಡಲಿ ಎಂದು ಪ್ರಾರ್ಥಿಸಿದರು.

ನಂತರ ಅಭಿಮಾನಿಗಳ ಬಳಗದ ಅಧ್ಯಕ್ಷ ಹಾಗೂ ತಾ.ಪಂ.ಮಾಜಿ ಅಧ್ಯಕ್ಷ ಆರ್.ಮಹದೇವ್ ಮಾತನಾಡಿ, ಜನಪ್ರಿಯ ಶಾಸಕರು, ಸ್ನೇಹಜೀವಿಗಳಾದ ಎ.ಆರ್.ಕೃಷ್ಣಮುರ್ತಿ ಅವರು ಜನ್ಮ ದಿನದಂದು ಸರ್ಕಾರಿ ಅಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಿಸುವ ಮೂಲಕ ಆಚರಣೆ ಮಾಡುತ್ತಿದ್ದೇವೆ. ಸಜ್ಜನರು, ದಕ್ಷ ಪ್ರಾಮಾಣಿಕ ರಾಜಕಾರಣಿಗಳಾದ ಎ.ಆರ್.ಕೃಷ್ಣಮೂರ್ತಿ ಅವರು ಈಗಾಗಲೇ ಕ್ಷೇತ್ರದ ಅಭಿವೃದ್ದಿಯಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡಿದ್ದಾರೆ. ಅವರಿಗೆ ಭಗವಂತ ಸಚಿವರಾಗುವ ಅವಕಾಶ ಕರುಣಿಸಲಿ. ಮಾಜಿ ರಾಜ್ಯಪಾಲರಾದ ದಿ.ಬಿ.ರಾಚಯ್ಯ ಅವರ ಪುತ್ರರಾದ ಕೃಷ್ಣಮೂರ್ತಿ ಅವರು ಇನ್ನು ಹೆಚ್ಚಿನ ಜನ ಸೇವೆಯನ್ನು ಮಾಡುವ ಮೂಲಕ ಬಡವರು ಹಾಗೂ ದೀನ ದಲಿತರ ಪ್ರಗತಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಸರ್ಜನ್ ಡಾ.ಚಿನ್ನಬೋವಿ, ಹೆರಿಗೆ ವಿಭಾಗದ ಡಾ.ಪ್ರದೀಪ್, ಜಿ.ಪಂ.ಮಾಜಿ ಉಪಾಧ್ಯಕ್ಷ ಅಯ್ಯನಪುರ ಶಿವಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್.ಗುರುಸ್ವಾಮಿ, ಸಿದ್ದಯ್ಯನಪುರ ಗೋವಿಂದರಾಜು, ಗ್ಯಾರಂಟಿ ಸಮಿತಿಯ ಅಧ್ಯಕ್ಷ ನಲ್ಲೂರು ಸೋಮೇಶ್ವರ್, ಎಪಿಎಂಸಿ ನಿರ್ದೇಶಕ ಅಲೂರು ಪ್ರದೀಪ್, ಮುಖಂಡರಾದ ಹೊಸಹಳ್ಳಿ ಮಧುಸೂಧನ್, ನಾಗೇಂದ್ರನಾಯಕ್, ತೌಸಿಫ್, ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಹೆಬ್ಬಸೂರು ಮಧು, ಹೆಬ್ಬಸೂರು ರಂಗಸ್ವಾಮಿ, ವೀರಭದ್ರಸ್ವಾಮಿ, ಕರಿನಂಜನಪುರಸ್ವಾಮಿ, ಮಾಜಿ ನಗರಸಭಾ ಸದಸ್ಯ ಆರ್.ಪಿ.ನಂಜುಂಡಸ್ವಾಮಿ, ಮಸಣಾಪುರ ಅಶೋಕ್ ಸಿದ್ದ ಕೋಟಂಬಳ್ಳಿ, ಹೊಂಗನೂರು ಮಹದೇವ್ ರಂಗಸ್ವಾಮಿ ದಡದಹಳ್ಳಿ ಮೂರ್ತಿ, ಅಪ್ಪು, ಹೊಂಗನೂರು ಮಹದೇವ್, ಮಣಿಕಂಠ ಮೊದಲಾದವರು ಇದ್ದರು.

RELATED ARTICLES
- Advertisment -
Google search engine

Most Popular