Wednesday, March 25, 2026
Google search engine

Homeಅಪರಾಧಕಳ್ಳತನ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿಗೆ ಶಿಕ್ಷೆ ಪ್ರಕಟ

ಕಳ್ಳತನ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿಗೆ ಶಿಕ್ಷೆ ಪ್ರಕಟ

ಕಳ್ಳತನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕೋರ್ಟ್ ಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಗೆ ಸುಳ್ಯ ಕೋರ್ಟ್ ಶಿಕ್ಷೆ ಪ್ರಕಟ ಮಾಡಿದೆ.
ತುಮಕೂರಿನ ಅಶ್ವನ್ ಗೌಡ ಜೆಪಿ, ಶಿಕ್ಷೆಗೊಳಗಾದ ವ್ಯಕ್ತಿ.
ದಿನಾಂಕ 16/05/2018 ರಂದು ರಾತ್ರಿ ಸುಳ್ಯ ಪೊಲೀಸ್ ಠಾಣಾ ಅ ಕ್ರ ಸಂಖ್ಯೆ: 25/2018, U/s 379 of IPC ಪ್ರಕರಣದಲ್ಲಿ ಆರೋಪಿಯಾಗಿದ್ದ ತುಮಕೂರು ನಿವಾಸಿ ಅಶ್ವನ್ ಗೌಡ ಜೆ ಪಿ ಎಂಬಾತನು ಅಪರಾಧ ಎಸಗಿರುವುದು ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಸಾಬೀತಾಗಿತ್ತು. ಹೀಗಾಗಿ ಆರೋಪಿಯನ್ನು‌ ನ್ಯಾಯಾಲಯವು PO Act (Probation of Offender Act) ರಲ್ಲಿ ಬಿಡುಗಡೆ ಮಾಡಿತ್ತು. ಆದರೆ ಅಸಾಮಿಯು ಆ ಬಳಿಕ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದರಿಂದ ವಾರೆಂಟ್ ಜಾರಿಯಾಗಿತ್ತು. ಸುಬ್ರಹ್ಮಣ್ಯ ಪೊಲೀಸರ ತಂಡವು ತುಮಕೂರು ಗುಂಗೂರುಮಳೆ ಎಂಬಲ್ಲಿ ಆರೋಪಿಯನ್ನು ದಸ್ತಗಿರಿ ಮಾಡಿ Prl CJ and JMFC ನ್ಯಾಯಾಲಯ ಸುಳ್ಯದ ಮುಂದೆ ಹಾಜರುಪಡಿಸಿತ್ತು. ಇದೇ ವೇಳೆ ನ್ಯಾಯಾಲಯದ ನ್ಯಾಯಾಧೀಶರಾದ ಶಿವಣ್ಣ ಹೆಚ್ ಆರ್ ರವರು ಆರೋಪಿಗೆ ಕಲಂ 380 IPC ಅಡಿಯಲ್ಲಿ ಒಂದು ವರ್ಷ ಸಾದಾರಣ ಸಜೆಯನ್ನು ಹಾಗೂ 1000 ರೂ ದಂಡವನ್ನು ವಿಧಿಸಿದ್ದು ಒಂದು ವೇಳೆ ದಂಡ ಪಾವತಿಸದಿದ್ದರೆ 10 ದಿನಗಳ ಸಜೆಯನ್ನು ನೀಡಿ ಆದೇಶ ಹೊರಡಿಸಿದ್ದಾರೆ.
ಈ ಪ್ರಕರಣದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಪ್ರೀತಿ ಎಮ್ ಸಿ ರವರು ಸಮರ್ಥವಾಗಿ ವಾದಮಂಡನೆ ನಡೆಸಿರುತ್ತಾರೆ.

RELATED ARTICLES
- Advertisment -
Google search engine

Most Popular