Saturday, March 28, 2026
Google search engine

Homeರಾಜಕೀಯಮೋದಿ ಇಸ್ರೇಲ್ ಹೋಗಿ ಬಂದ ಮರುದಿನವೇ ಯುದ್ಧ: ಎಂ.ಬಿ.ಪಾಟೀಲ್ ವ್ಯಂಗ್ಯ

ಮೋದಿ ಇಸ್ರೇಲ್ ಹೋಗಿ ಬಂದ ಮರುದಿನವೇ ಯುದ್ಧ: ಎಂ.ಬಿ.ಪಾಟೀಲ್ ವ್ಯಂಗ್ಯ

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್‌ಗೆ ಪ್ರವಾಸ ಹೋಗಿದ್ದರು, ಫಾದರ್‌ ಲ್ಯಾಂಡ್‌ ಅಂತ ಹೊಗಳಿದ್ದರು. ಅವರು ಹೋಗಿ ಬಂದ ಮರುದಿನವೇ ಯುದ್ಧ ಶುರುವಾಯ್ತು ಎಂದು ಸಚಿವ ಎಂ.ಬಿ ಪಾಟೀಲ್‌ ಹೇಳಿದರು.

ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ರಾಜ್ಯದಲ್ಲಿ ತೈಲ ಕೊರತೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ತೈಲ ಕೊರತೆಯಿಂದ ಕೈಗಾರಿಕೆಗಳಿಗೂ ಬಹಳ ಕಷ್ಟವಾಗಿದೆ. ಪ್ರಧಾನಿ ಮೋದಿ ಇಸ್ರೇಲ್‌ಗೆ ಹೋಗಿದ್ದರು. ಫಾದರ್ ಲ್ಯಾಂಡ್ ಅಂತ ಹೊಗಳಿದ್ದರೂ ಅವರು ಹೋಗಿಬಂದ ಮರುದಿನವೇ ಯುದ್ಧ ಶುರುವಾಯ್ತು ಎಂದು ತಿವಿದರು.

ಇರಾನ್‌ನವರು ನಮ್ಮ ಹಡಗುಗಳನ್ನ ಬಿಟ್ಟಿದ್ದಾರೆ. ಇಂಡಿಯಾದವರು ನಮ್ಮ ಸ್ನೇಹಿತರು ಅಂತ ಹೇಳಿದ್ದರು. ನಾವು ಎಡವಿರಬಹುದು, ಆದರೆ ಇರಾನ್‌ನವರು ಎಡವಿಲ್ಲ. ಎಲ್‌ಪಿಜಿ ಕೊಟ್ಟು ಸಹಕಾರ ಮಾಡಿದ್ದಾರೆ. ಅವರು ಕೊಡದಿದ್ದರೆ ಏನಾಗ್ತಿತ್ತು? ನಾವು ಕೂಡ ಚರಂಡಿಯಲ್ಲಿ ಗ್ಯಾಸ್‌ ಮಾಡಬೇಕಿತ್ತು ಎಂದು ಲೇವಡಿ ಮಾಡಿದರು.

ಮುಂದುವರಿದು ಇರಾನ್‌ ನಮ್ಮ ಮಿತ್ರರಾಷ್ಟ್ರ. ಇವತ್ತು ನಮಗೆ ಯಾವುದನ್ನೂ ನಿಲ್ಲಿಸಿಲ್ಲ. ಮೋದಿ ಅವರ ವಿದೇಶಾಂಗ ನೀತಿ ವಿಫಲವಾಗಿದೆ. ಏಕೆಂದರೆ ಮೋದಿಯವರದ್ದೇ ಪ್ರತ್ಯೇಕ ವಿದೇಶಾಂಗ ನೀತಿಯಾಗಿದ್ದು, ಇರಾನ್‌ ಭಾರತದ ಮಿತ್ರರಾಷ್ಟ್ರವಾಗಿದ್ದಕ್ಕೆ ನಮ್ಮ ಹಡಗುಗಳನ್ನ ಬಿಡುತ್ತಿದ್ದಾರೆ. ಇಲ್ಲದಿದ್ದರೇ ನಮ್ಮ ಗತಿ ಏನಾಗ್ತಿತ್ತು? ಎಂದು ಕಳವಳ ವ್ಯಕ್ತಪಡಿಸಿದರು.

RELATED ARTICLES
- Advertisment -
Google search engine

Most Popular