ಬೆಂಗಳೂರು : ದ್ವಿಭಾಷಾ ಸೂತ್ರ ಅಳವಡಿಕೆಗೆ ನಮ್ಮ ಸರ್ಕಾರ ಒತ್ತು ನೀಡುತ್ತಿದೆ. ನಾವು ತೆಗೆದುಕೊಳ್ಳುವ ಯಾವ ನಿರ್ಧಾರಗಳು ಕೂಡ ಮಕ್ಕಳ ಹಿತದೃಷ್ಟಿಗೆ ತೊಂದರೆಯಾಗಬಾರದು, ಅವರ ಭವಿಷ್ಯಕ್ಕೆ ಮಾರಕವಾಗಬಾರದು, ಮಕ್ಕಳ ಶಿಕ್ಷಣಕ್ಕೆ ಒತ್ತಡ ಬೀಳಬಾರದು ಎಂದು ಗ್ರೇಡಿಂಗ್ ವ್ಯವಸ್ಥೆ ತಂದಿದ್ದೇವೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ದ್ವಿಭಾಷಾ ಸೂತ್ರ ಅಳವಡಿಕೆಗೆ ಒತ್ತು ನೀಡಲಾಗುತ್ತದೆ. ನಮ್ಮ ಭಾಷೆ, ನೆಲ-ಜಲಗಳನ್ನು ನಮ್ಮ ಪೂರ್ವಿಕರು ಕಾಪಾಡಿಕೊಂಡು ಬಂದಿದ್ದಾರೆ. ಗೋಕಾಕ್ ಚಳವಳಿಯಂತಹ ಚಳವಳಿಗಳಿಂದ ನಮಗೆ ಅನುಕೂಲ ಆಗಿದೆ. ನಮ್ಮ ರಾಜ್ಯದ ಮಕ್ಕಳ ಹಿತದೃಷ್ಟಿಯಿಂದ ನಾವು ಈ ನಿಯಮ ಜಾರಿಗೆ ತಂದಿದ್ದೇವೆ ಎಂದು ಹತ್ತನೇ ತರಗತಿಯಲ್ಲಿ ಮೂರನೇ ಭಾಷೆಗೆ ಗ್ರೇಡಿಂಗ್ ನೀಡುವ ರಾಜ್ಯ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು.
ಅಧಿವೇಶನ ಮುಗಿದ ಬಳಿಕ ಮಾಡೋಣ ಅಂದುಕೊಂಡಿದ್ದೀವಿ. ಬೇರೆ ಬೇರೆ ಭಾಷೆ ದ್ವೇಷ ಮಾಡಬಾರದು. ಬೇರೆ ಭಾಷೆ ಹೇರಬಾರದು ಮಕ್ಕಳ ಮೇಲೆ ಒತ್ತಡ ಹಾಕಬಾರದು ದ್ವಿಭಾಷಾ ಸೂತ್ರ ಅಳವಡಿಕೆಯಿಂದ ಬಹಳ ಸಂತೋಷ ಆಗಿದೆ. ಸಾಹಿತಿ ಕನ್ನಡ ಪರ ಸಂಘಟನೆಗಳು ಮನವಿ ಮಾಡಿದ್ದವು. ಅವರ ಜೊತೆ ಚರ್ಚೆಮಾಡಿ ನಾವು ತೀರ್ಮಾನ ಮಾಡಿದ್ದೇವೆ. ಸಿಎಂ ಸಿದ್ದರಾಮಯ್ಯ ಜೊತೆ ಮಾತಾಡಿದ್ದೇವೆ ಎಂದರು.
ಈಗ ತಂದಿರುವ ಗ್ರೇಡಿಂಗ್ ವ್ಯವಸ್ಥೆ ಬಗ್ಗೆ ವಿಶಾಲವಾಗಿ ಚರ್ಚೆಯಾಗುತ್ತದೆ. ವಿಧಾನಸಭೆ ಅಧಿವೇಶನದಲ್ಲಿ ಮಂಡಿಸುತ್ತೇವೆ. ವಿಧಾನ ಪರಿಷತ್ ನಲ್ಲಿ ಒಪ್ಪಿಗೆ ಪಡೆದ ನಂತರವೇ ಕಾನೂನು ಜಾರಿಗೆ ಬರುವುದು ಎಂದರು.
ರಾಜ್ಯದ ಮಕ್ಕಳಿಗೆ ಒಳ್ಳೆಯದಾಗಬೇಕು ಅಷ್ಟೆ ಸರ್ಕಾರ ಹೆದರಿದ್ಯ ಅಂತಾ ಸುರೇಶ್ ಕುಮಾರ್ ಪ್ರಶ್ನಿಸಿದರು. ಶಿಕ್ಷಣ ಸಚಿವರಾಗಿದ್ದ ಸುರೇಶ್ ಕುಮಾರ್ ಅವರು ಅರ್ಥ ಮಾಡಿಕೊಳ್ಳಬೇಕು. ಕನ್ನಡಿಗರು ಸಾವಿರ ಭಾಷೆ ಕಲಿಯಲಿ, ಆದರೆ ಕನ್ನಡವನ್ನು ಕಡ್ಡಾಯವಾಗಿ ಓದಲಿ ಎಂದರು.
ಬಿವೈ ವಿಜಯೇಂದ್ರ ಪೋಸ್ಟ್ ಮಾಡಿದ್ದು ನೋಡಿದ್ದೇನೆ ಬಿಎಸ್ ವೈಗೆ ಇದ್ದ ಕನ್ನಡ ಅಭಿಮಾನ ವಿಜಯೇಂದ್ರ ಅರ್ಥ ಮಾಡಿಕೊಂಡರೆ ಒಳ್ಳೆಯದು ಎಂದರು.



