ಗೇರುಕಟ್ಟೆ ಎಂಬಲ್ಲಿಂದ ಬೆಳ್ತಂಗಡಿ ಕಡೆ ಸಂಚರಿಸುತ್ತಿದ್ದ ಸರಕಾರಿ ಬಸ್ ನ ಬಾಗಿಲು ಇದ್ದಕ್ಕಿದ್ದಂತೆ ತೆರೆದು ಇಬ್ಬರು ವಿದ್ಯಾರ್ಥಿನಿಯರು ರಸ್ತೆಗೆ ಬಿದ್ದ ಘಟನೆ ಇಂದು ಗೇರುಕಟ್ಟೆಯ ರೇಷ್ಮೆ ರೋಡ್ ಬಳಿ ನಡೆದಿದೆ.
ಒಂದೇ ಮನೆಯ ಇಬ್ಬರು ವಿದ್ಯಾರ್ಥಿನಿಯರು ರಸ್ತೆಗೆ ಬಿದ್ದು ಗಾಯಗೊಂಡುವರಾಗಿದ್ದಾರೆ. ಓರ್ವೆ ಬೆಳ್ತಂಗಡಿ ಖಾಸಗಿ ಕಾಲೇಜಿನ ಪಿಯುಸಿ ವಿದ್ಯಾರ್ಥಿನಿಯಾಗಿದ್ದು ಮತ್ತೋರ್ವಳು ಎಸ್.ಎಸ್.ಎಲ್.ಸಿ. ವಿದ್ಯಾರ್ಥಿನಿಯಾಗಿದ್ದು , ಪಬ್ಲಿಕ್ ಪರೀಕ್ಷೆ ಬರೆಯುವುದಕ್ಕಾಗಿ ಈ ಬಸ್ ನಲ್ಲಿ ತೆರಳಿದ್ದಳು. ಬಸ್ ನಲ್ಲಿ ಅಧಿಕ ಸಂಖ್ಯೆಯ ಪ್ರಯಾಣಿಕರು ಇದ್ದ ಕಾರಣ, ಓವರ್ ಲೋಡ್ ಆಗಿ ಈ ಘಟನೆ ನಡೆದಿರಬಹುದು ಎನ್ನಲಾಗಿದೆ. ಗಾಯಗೊಂಡ ವಿದ್ಯಾರ್ಥಿನಿಯರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.



