Saturday, April 4, 2026
Google search engine

Homeರಾಜಕೀಯವಿರೋಧಿಗಳ ಹೇಳಿಕೆಗಳಿಗೆ ಆಕ್ಷೇಪ : ದ್ವೇಷ ರಾಜಕಾರಣ ಸಹಿಸಲಾಗದು : ಸಿಎಂ ಸಿದ್ದರಾಮಯ್ಯ

ವಿರೋಧಿಗಳ ಹೇಳಿಕೆಗಳಿಗೆ ಆಕ್ಷೇಪ : ದ್ವೇಷ ರಾಜಕಾರಣ ಸಹಿಸಲಾಗದು : ಸಿಎಂ ಸಿದ್ದರಾಮಯ್ಯ

ಬಾಗಲಕೋಟೆ : ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಪ್ರಚಾರ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಪಕ್ಷ ನಾಯಕರ ಹೇಳಿಕೆಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಸಭ್ಯ ಪದ ಬಳಸಿದ ಬಿಜೆಪಿ ನಾಯಕ ಪ್ರತಾಪ್ ಸಿಂಹಗೆ ಟಾಂಗ್ ಕೊಟ್ಟ ಅವರು, ಬಿಜೆಪಿ ಪರ ಪ್ರಚಾರದ ವೇಳೆ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿದ್ದ ಹೇಳಿಕೆಗಳನ್ನೂ ಖಂಡಿಸಿದರು. ಕಾಂಗ್ರೆಸ್ ಸರ್ಕಾರ ನೀಡಿರುವ ಐದು ಗ್ಯಾರಂಟಿಗಳು ಮತ್ತು ಸಾಮಾಜಿಕ ಬದ್ಧತೆಯ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿ ಮತ ಕೇಳುವುದಾಗಿ ಹೇಳಿದರು.

ಬಸನಗೌಡ ಪಾಟೀಲ್ ಯತ್ನಾಳ್ ನೀಡಿದ್ದ, ತಾವು ಮುಖ್ಯಮಂತ್ರಿಯಾದರೆ ಮಹಿಳೆಯರಿಗೆ 3000 ರೂ. ನೀಡುವುದಾಗಿ ಮತ್ತು ಕಲ್ಲು ತೂರಾಟ ನಡೆಸಿದರೆ ಅಂತಹ ಮತ್ತು ಅಕ್ರಮವಾಗಿ ಕಟ್ಟಿದ ಮಸೀದಿಯನ್ನು ಬುಲ್ಡೋಜರ್ ಮೂಲಕ ಕೆಡವುವೆವು ಹೇಳಿಕೆಯನ್ನು ಸಿದ್ದರಾಮಯ್ಯ ಖಂಡಿಸಿದರು. ಇಂತಹ ಹೇಳಿಕೆಗಳು ಸಾಮಾನ್ಯ ಜ್ಞಾನಕ್ಕೆ ವಿರುದ್ಧವಾಗಿವೆ ಮತ್ತು ರಾಜಕೀಯ ವ್ಯಕ್ತಿಗಳಿಗೆ ಅಸಮಂಜಸವಾಗಿವೆ ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟರು. ಮುಸಲ್ಮಾನರು ಭಾರತದ ಜನಸಂಖ್ಯೆಯಲ್ಲಿ ಹೆಚ್ಚಿನ ಪಾಲು ಹೊಂದಿದ್ದು, ಅವರನ್ನು ದೇಶದಿಂದ ಹೊರಹಾಕಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ದ್ವೇಷದ ರಾಜಕಾರಣ ಸಹಿಸಲಾಗದು ಎಂದರು.

RELATED ARTICLES
- Advertisment -
Google search engine

Most Popular