ಚಾಮರಾಜನಗರ : ಜೈ ಭೀಮ್ ಕ್ರಿಕೆಟ್ ಕ್ಲಬ್ ವತಿಯಿಂದ ನಗರದಲ್ಲಿ ಜೈ ಭೀಮ್ ಕಪ್ ಕ್ರಿಕೆಟ್ ಪಂದ್ಯಾವಳಿ ನಡೆಯಿತು.
ನಗರದ ಶ್ರೀಸಿದ್ದಾರ್ಥ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಗೆ ಪ್ರಥಮ ದರ್ಜೆ ಗುತ್ತಿಗೆದಾರ ಓಲೆ ಮಹದೇವ್ ಹಾಗೂ ನಿವೃತ್ತ ಪಿಯು ಡಿಡಿ ಮಂಜು ಕೋಡಿಉಗನೆ ಚಾಲನೆ ನೀಡಿದರು. ವೇದಿಕೆ ಕಾರ್ಯಕ್ರಮದಲ್ಲಿ ನಿವೃತ್ತ ಪಿಯು ಡಿಡಿ ಮಂಜು ಕೋಡಿಉಗನೆ ಮಾತನಾಡಿ, ಜಿಲ್ಲೆಯ ಪರಿಶಿಷ್ಟ ಜನಾಂಗದ ಆಟಗಾರರನ್ನು ಗುರುತಿಸಿ ಕ್ರಿಕೆಟ್ ಪಂದ್ಯಾವಳಿ ನಡೆಸುತ್ತಿರುವುದು ಸಂತಸದ ವಿಚಾರ. ಅಂಬೇಡ್ಕರ್ ಅವರ ಹೆಸರಿನಲ್ಲಿ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಪಂದ್ಯಾವಳಿ ಆಯೋಜಿಸಿರುವುದು ಖುಷಿಯ ವಿಚಾರ. ಮುಂದಿನ ದಿನಗಳಲ್ಲಿ ಎಲ್ಲ ವರ್ಗದ ಆಟಗಾರರು ಸೇರುವಂತೆ ಪಂದ್ಯಾವಳಿ ಆಯೋಜಿಸುವಂತೆ ಸಲಹೆ ನೀಡಿದರು.

ಪ್ರಥಮ ದರ್ಜೆ ಗುತ್ತಿಗೆದಾರರಾದ ಓಲೆ ಮಹದೇವ್ ಮಾತನಾಡಿ, ಕ್ರೀಡಾಪಟುಗಳು ಸೋಲು ಗೆಲುವನ್ನು ಸಮಾನವಾಗಿ ತೆಗೆದುಕೊಳ್ಳಬೇಕು. ಉತ್ತಮವಾಗಿ ಆಟ ಆಡುವ ಮೂಲಕ ಗೆಲುವು ಸಾಧಿಸುವಂತೆ ಕರೆ ನೀಡಿದರು.
ಇದಕ್ಕೂ ಮುನ್ನ ಗಣ್ಯರು ನಗರದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬಳಿಕ ಬೈಕ್‌ಗಳ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ರ್ಯಾಲಿ ನಡೆಸಲಾಯಿತು.
ಕ್ರಿಕೆಟ್ ಪಂದ್ಯಾವಳಿಯಲ್ಲಿ 10 ತಂಡಗಳು ಭಾಗವಹಿಸಿದ್ದು ಪ್ರಥಮ ಬಹುಮಾನ 1 ಲಕ್ಷ, ದ್ವಿತೀಯ ಬಹುಮಾನ 50 ಸಾವಿರ ಇರಲಿದೆ. ಈ ಸಂದರ್ಭದಲ್ಲಿ ಆಯೋಜಕರಾದ ಲೋಕೇಶ್, ಮಲ್ಲೇಶ್, ಹರೀಶ್, ಶಿವಕುಮಾರ್, ಮುಖಂಡರಾದ ಮಹದೇವಯ್ಯ, ಮೂರ್ತಿ, ಸಿದ್ದರಾಜು, ದೊರೆಸ್ವಾಮಿ, ಮಂಜುನಾಥ್, ಪ್ರಶಾಂತ್, ಸಂತೋಷ್‌ಕುಮಾರ್, ಸೋಮೇಶ್ವರ, ಮೋಹನ್ ಹಾಗೂ ಜೈ ಭೀಮ್ ಕ್ರಿಕೆಟ್ ಕ್ಲಬ್‌ನ ಪದಾಧಿಕಾರಿಗಳು ಹಾಜರಿದ್ದರು.



