Sunday, April 5, 2026
Google search engine

Homeಸ್ಥಳೀಯ ಅಸ್ಪೃಶ್ಯತೆ ಯನ್ನು ಹೋಗಲಾಡಿಸುವಲ್ಲಿ ಬಾಬೂಜಿ ಕೊಡುಗೆ ಅಪಾರ  :   ಡಾ. ಕುಮಾರ

 ಅಸ್ಪೃಶ್ಯತೆ ಯನ್ನು ಹೋಗಲಾಡಿಸುವಲ್ಲಿ ಬಾಬೂಜಿ ಕೊಡುಗೆ ಅಪಾರ  :   ಡಾ. ಕುಮಾರ

ಮಂಡ್ಯ :  ಡಾ. ಬಾಬೂ ಜಗಜೀವನ್ ರಾಂ ಅವರ ಚಿಂತನೆಗಳನ್ನು, ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ಅವರ ಚಿಂತನೆ, ಆದರ್ಶ, ಮೌಲ್ಯಗಳನ್ನು ತಿಳಿಸುವಂತಹ ಕೆಲಸವಾಗಬೇಕು ಎಂದು ಜಿಲ್ಲಾಧಿಕಾರಿ ಡಾ. ಕುಮಾರ   ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜಕಲ್ಯಾಣ ಇಲಾಖೆ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ   ಡಾ. ಬಿ.ಆರ್.ಅಂಬೇಡ್ಕರ್ ಅವರ ಭವನದಲ್ಲಿ ನಡೆದ ಹಸಿರು ಕ್ರಾಂತಿಯ ಹರಿಕಾರ ಭಾರತದ ಮಾಜಿ ಉಪ ಪ್ರಧಾನಿ ಡಾ. ಬಾಬೂ ಜಗಜೀವನ್ ರಾಂ ಅವರ 119ನೇ ಜನ್ಮದಿನಾಚರಣೆ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ದೀಪ ಬೆಳಗಿಸಿ ಮಹನೀಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಡಾ.ಬಾಬೂ ಜಗಜೀವನ್ ರಾಂ ಮತ್ತು ಡಾ. ಬಿ.ಆರ್ ಅಂಬೇಡ್ಕರ್ ಅವರು ಸಮಾಜದಲ್ಲಿ ಜಾತೀಯತೆ ಮತ್ತು ಅಸ್ಪೃಶ್ಯತೆ , ಅಸಮಾನತೆ, ಶೋಷಣೆ ವಿರುದ್ಧ ಸಾಮಾಜಿಕ ಪರಿಕಲ್ಪನೆಯ  ಮೂಲಕ ಶೋಷಿತರ ಪರವಾಗಿ ಸಾಮಾಜಿಕ ಪರವಾಗಿ ಶ್ರಮಿಸಿದವರು ಇಬ್ಬರು ಮಹನೀಯರು ಎಂದು ತಿಳಿಸಿದರು.

ಸಾಮಾಜಿಕ ಸಮಾನತೆ  ಮತ್ತು  ಅಸ್ಪೃಶ್ಯತೆ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಬಾಬೂಜಿ ಅವರು ಜಾತಿ ಪದ್ಧತಿ ಮತ್ತು ಅಸ್ಪೃಶ್ಯತೆಯನ್ನು ನಿರ್ಮೂಲನೆ ಮಾಡಲು ಹೋರಾಡಿದರು. ದೇವಸ್ಥಾನಗಳಿಗೆ ಪ್ರವೇಶ ಮತ್ತು ಸಾರ್ವಜನಿಕ ಬಾವಿಗಳಿಂದ ನೀರು ಪಡೆಯುವ ಹಕ್ಕಿಗಾಗಿ ಅವರು ದ್ವನಿ ಎತ್ತಿದ್ದರು   ಎಂದು ತಿಳಿಸಿದರು.

ಡಾ. ಬಾಬೂ ಜಗಜೀವನ್ ರಾಂ ಅವರ  ಚೇತನ ಶಕ್ತಿ ವಿಶೇಷವಾದದ್ದು,ಇವರು 198 ಏಪ್ರಿಲ್ 5 ರಂದು ಶೋಷಿತ ಕುಟುಂಬದಲ್ಲಿ ಜನಿಸಿದವರು. ಇವರು ದಲಿತರ ಶೋಷಣೆ ವಿರುದ್ಧ ಶೋಷಿತರ ಪರವಾಗಿ ಹಾಗೂ ಸಾಮಾಜಿಕ ನ್ಯಾಯದ ಪರವಾಗಿ ಧ್ವನಿಯತ್ತಿದವರು. ಬಾಬೂಜಿ ಅವರು ಸ್ವಾತಂತ್ರ ಹೋರಾಟಗಾರರಷ್ಟೆ ಅಲ್ಲದೇ, ಸಮಾಜ ಸೇವಕರೂ ಆಗಿದ್ದರು. ಇವರು ಸಚಿವರಾಗಿ, ಭಾರತದ ಉಪ ಪ್ರಧಾನಿಯಾಗಿ, ಹಸಿರು ಕ್ರಾಂತಿ ಹರಿಕಾರರಾಗಿ ಹೊರಹೊಮ್ಮಿದ್ದರು. ಅವರು ಕಾರ್ಮಿಕ ಕ್ಷೇತ್ರದಲ್ಲಿ ಕೈಗೊಂಡ ನಿರ್ಣಯಗಳು ಇಂದಿಗೂ ಸ್ಮರಣೀಯವಾಗಿವೆ’ಎಂದು ತಿಳಿಸಿದರು.

1952 ರಲ್ಲಿ ಪ್ರಥಮ ಚುನಾವಣೆಯಾದ ನಂತರ ಬಾಬೂಜಿ   ಅತಿ ಹೆಚ್ಚು ಅವಧಿಗೆ ಸತತವಾಗಿ ಸಂಸದರಾಗಿ ಕಾರ್ಯನಿರ್ವಹಿಸಿರುತ್ತಾರೆ. ಇವರು ಕೃಷಿ ಸಚಿವರಾಗಿ, ರಕ್ಷಣಾ ಸಚಿವರಾಗಿ, ಕಾರ್ಮಿಕ ಸಚಿವರಾಗಿ, ರೈಲ್ವೆ ಸಾರಿಗೆ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ ಎಂದು ತಿಳಿಸಿದರು.

ಭಾರತದಲ್ಲಿ ಹಸಿರು ಕ್ರಾಂತಿಯನ್ನು ಉತ್ತೇಜಿಸಿ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಕಾರಣರು ಹಾಗೂ  ಕಾರ್ಮಿಕರಿಗೆ ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ ಕಾರ್ಮಿಕರಿಗೆ ಕಲ್ಯಾಣ ಕ್ರಾಂತಿಯನ್ನು ಹಾಕಿಕೊಟ್ಟವರು. ಕಾರ್ಮಿಕರಿಗಾಗಿ ಹಲವು ಕಾರ್ಮಿಕ ಕಾಯ್ದೆಗಳನ್ನು ತಂದವರು ಡಾ. ಬಾಬು ಜಗಜೀವನ್ ರಾಂ ಅವರನ್ನು ಕಾರ್ಮಿಕರ ಕಾಯ್ದೆಗಳ ಶಿಲ್ಪಿ ಎಂದು ಸಹ ಕರೆಯುತ್ತಾರೆ ಎಂದು ತಿಳಿಸಿದರು.

ಮಂಡ್ಯ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ  ಮಂಜು  ಮಾತನಾಡಿ ಬಾಬೂಜಿ’ ಎಂದು ಜನಪ್ರಿಯರಾಗಿರುವ ಡಾ. ಬಾಬು ಜಗಜೀವನ್ ರಾಂ ಅವರು ಭಾರತದ ಮಾಜಿ ಉಪ ಪ್ರಧಾನಿ ಮತ್ತು ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಅವರು ದಲಿತ ಸಮುದಾಯದ ನಾಯಕರಾಗಿ, ಅಸ್ಪೃಶ್ಯತೆಯ ವಿರುದ್ಧ ಹೋರಾಡಿ ಸಾಮಾಜಿಕ ಸಮಾನತೆಗಾಗಿ ಶ್ರಮಿಸಿದರು. ಭಾರತ ಸರ್ಕಾರದ ವಿವಿಧ ಸಚಿವ ಸ್ಥಾನಗಳಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಕೀರ್ತಿ ಅವರಿಗೆ ಸಲ್ಲಿಸುತ್ತದೆ ಎಂದು  ತಿಳಿಸಿದರು.

ಬಾಬೂಜಿ’ ಎಂದೇ ಜನಪ್ರಿಯವಾಗಿರುವ ದಲಿತ ನಾಯಕ ಜಗಜೀವನ್ ರಾಮ್ ಅವರು 1908 ರ ಏಪ್ರಿಲ್ 5 ರಂದು ಬಿಹಾರದಲ್ಲಿ ಜನಿಸಿದರು . ಇವರು ಜಾತಿ ವ್ಯವಸ್ಥೆ ಹೋಗಲಾಡಿಸುವ ನಿಟ್ಟಿನಲ್ಲಿ ಸಾಮಾಜಿಕವಾಗಿ ಅಸ್ಪೃಶ್ಯತೆ ಹಾಗೂ ಸಾಮಾಜಿಕ ನ್ಯಾಯದ ಪರವಾಗಿ ಹೋರಾಟ ಮಾಡಿದ ಇವರ ಕೊಡುಗೆ ಅಪಾರ ಎಂದು ತಿಳಿಸಿದರು.

ಬಾಬೂಜಿ ಅವರ ಸಾಮಾಜಿಕ ಚಿಂತನೆಗಳು, ಆದರ್ಶ ಮೌಲ್ಯಗಳನ್ನು ಮುಂದಿನ ಪೀಳಿಗೆಯು ಅಳವಡಿಸಿಕೊಂಡು  ಜಾತೀಯತೆ, ತಾರತಮ್ಯವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಬದುಕಬೇಕು ಎಂದು ತಿಳಿಸಿದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಡಾ. ಬಾಬು ಜಗಜೀವನ್ ರಾಂ ಅವರ 119ನೇ ಜನ್ಮದಿನಾಚರಣೆಯನ್ನು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದ ಉದ್ಯಾನವನದಲ್ಲಿರುವ ಅವರ ಪ್ರತಿಮೆಗೆ ಮಂಡ್ಯ ವಿಧಾನ ಸಭಾ ಕ್ಷೇತ್ರದ ಶಾಸಕ  ಪಿ. ರವಿಕುಮಾರ್ ಅವರು ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿ ಡಾ.ಬಾಬು ಜಗಜೀವನ್ ರಾಂ ಅವರ ಬೆಳ್ಳಿರಥ ಮೆರವಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಅಪರ  ಪೊಲೀಸ್ ಅಧೀಕ್ಷಕ  ತಿಮ್ಮಯ್ಯ, ಉಪ ವಿಭಾಗ  ಅಧಿಕಾರಿ ಶಿವಮೂರ್ತಿ, ತಹಶೀಲ್ದಾರ್ ವಿಶ್ವನಾಥ್ ,  ಮುಡಾ ಅಧ್ಯಕ್ಷ  ಬಿ. ಪಿ. ಪ್ರಕಾಶ್, ಮುಖಂಡರುಗಳಾದ ಚಂದ್ರಶೇಖರ್, ಕೃಷ್ಣ, ಪಾಪಯ್ಯ,ಅನ್ನದಾನಿ, ಟಿ. ಸಿ. ಗುರಪ್ಪ   ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular