Monday, April 6, 2026
Google search engine

Homeರಾಜಕೀಯಹಿಂದೂ, ಮುಸ್ಲೀಂ ಮತದಾರರಿಗೆ ಹಣ ಹಂಚಿಕೆ : ಕಾಂಗ್ರೆಸ್ ವಿರುದ್ಧ ನಾರಾಯಣಸ್ವಾಮಿ ಗಂಭೀರ ಆರೋಪ

ಹಿಂದೂ, ಮುಸ್ಲೀಂ ಮತದಾರರಿಗೆ ಹಣ ಹಂಚಿಕೆ : ಕಾಂಗ್ರೆಸ್ ವಿರುದ್ಧ ನಾರಾಯಣಸ್ವಾಮಿ ಗಂಭೀರ ಆರೋಪ

ದಾವಣಗೆರೆ :  ದಾವಣಗೆರೆ ಉಪ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಿಂದೂಗಳಿಗೆ 5 ರಿಂದ 6 ಸಾವಿರ, ಮುಸ್ಲೀಮರಿಗೆ 10 ಸಾವಿರ ರೂ. ಹಣ ನಿಗದಿ ಮಾಡಿ ಹಂಚುತ್ತಿದ್ದಾರೆ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಸಿಎಂ ಸಿದ್ದರಾಮಯ್ಯಗೆ ಬೈಎಲೆಕ್ಷನ್ ನಲ್ಲಿ ಸೋಲುವ ಭಯ ಕಾಡುತ್ತಿದೆ.  ಪ್ರಚಾರ ಮುಗಿಸಿ ಬೆಂಗಳೂರಿಗೆ ಹೋದರೇ ಮತ್ತೆ ಸಿಎಂ ಆಗಿ ದಾವಣಗೆರೆಗೆ ಬರಲ್ಲ. ಆಪತ್ತು ಬಂದಾಗ ಮಾತ್ರ ಸಿಎಂ ಸಿದ್ದರಾಮಯ್ಯ ಅಹಿಂದ ನೆನಪಾಗುತ್ತಾರೆ ದಾವಣಗೆರೆ ಬಂದರೆ ಅಹಿಂದಗೆ ಮತ ನೀಡಬೇಡಿ ಎನ್ನುತ್ತಾರೆ. ಬಾಗಲಕೋಟೆಗೆ ಪ್ರಚಾರಕ್ಕೆ ಹೋದರೆ ಅಹಿಂದಗೆ ಮತಹಾಕಿ ಅಂತಾರೆ ದಾವಣಗೆರೆಯಲ್ಲಿ ಹಿಂದೂಗಳ ಮತಕ್ಕೆ  5ರಿಂದ 7 ಸಾವಿರ,  ಮುಸ್ಲೀಂ ಜನರಿಗೆ ಪ್ರತಿ ಮತಕ್ಕೆ 10 ಸಾವಿರ ರೂ. ನಿಗದಿಯಾಗಿದೆ ಎಂದು ಆರೋಪಿಸಿದರು.

ಒಳಮೀಸಲಾತಿ ಗೊಂದಲಕ್ಕೆ  ಸಚಿವ ಹೆಚ್ ಸಿ ಮಹದೇವಪ್ಪ ಕಾರಣ. ವರದಿ ಕೊಟ್ಟಾಗ ಸುಮ್ಮನಿದ್ದು ಈಗ ಗೊಂದಲ ಮಾಡಿದರೆ ಹೇಗೆ?  ಒಳಮೀಸಲಾತಿ ವಿಚಾರದಲ್ಕಿ ಬಿಜೆಪಿ ತಪ್ಪು ಏನಿಲ್ಲ ಎಂದರು.

RELATED ARTICLES
- Advertisment -
Google search engine

Most Popular