ಶ್ರೀರಂಗಪಟ್ಟಣ : ಇಲ್ಲಿನ ಚಂದ್ರವನ ಆಶ್ರಮದಲ್ಲಿನ ‘ಆದಿ ಆರೋಗ್ಯ ಆಶ್ರಮ ಆಯುರ್ವೇದ ಆಸ್ಪತ್ರೆ’ಯ ‘ಫುಡ್‌ಕೋರ್ಟ್’ನ್ನು ಕರ್ನಾಟಕ ರಾಜ್ಯ ಪತ್ತಿನ ಸಹಕಾರ ಸಂಘಗಳ ಮಹಾಮಂಡಳ ನಿ. ಬೆಂಗಳೂರು ಮಾಜಿ ಅಧ್ಯಕ್ಷರು, ಕರ್ನಾಟಕ ರಾಜ್ಯ ಮಹಿಳಾ ಸಹಕಾರ ಮಹಾಮಂಡಳ ನಿ.ದ ಅಧ್ಯಕ್ಷರು, ಲಕ್ಷ್ಮಿ ಮಹಿಳಾ ವಿವಿಧ್ದೋದ್ದೇಶ ಸಹಕಾರ ಸಂಘ ನಿ. ಹುಣಸೂರು ಅಧ್ಯಕ್ಷರು ಹಾಗೂ ಮೈಸೂರಿನ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ. ಲಲಿತಾ ಜಿ.ಟಿ. ದೇವೇಗೌಡ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಸಮಾಜದ ಜನತೆಯ ಆರೋಗ್ಯದ ಹಿತದೃಷ್ಟಿಯಿಂದ ನಡೆಸುತ್ತಿರುವ ಈ ಸ್ವಾಸ್ಥ್ಯ ಶಿಬಿರವು ತ್ರಿನೇತ್ರ ಶ್ರೀಗಳವರ ಸಾನಿಧ್ಯದಲ್ಲಿ ಅತ್ಯಂತ ಅಚ್ಚುಕಟ್ಟಾಗಿ ನಡೆಯುತ್ತಿದೆ. ಇಂತಹ ಅತ್ಯುತ್ತಮ ಶಿಬಿರದ ಪ್ರಯೋಜನವನ್ನು ಎಲ್ಲರೂ ಪಡೆದುಕೊಂಡು ತಮ್ಮ ಜೀವನವನ್ನು ಸುಖಮಯವಾಗಿಸಬೇಕು. ಮನುಷ್ಯ ತನ್ನ ಕಾರ್ಯಗಳ ಜಂಜಾಟದಲ್ಲಿ ದಿನನಿತ್ಯ ಜೀವನದಲ್ಲಿ ತನ್ನ ಶರೀರದ ಆರೋಗ್ಯವನ್ನು ಕಾಪಾಡಿಕೊಳ್ಳುವುದನ್ನು ಮರೆಯುತ್ತಿದ್ದಾನೆ. ನಮ್ಮ ಮಾನಸಿಕ ಮತ್ತು ದೈಹಿಕ ಒತ್ತಡಗಳನ್ನು ನಿವಾರಣೆ ಮಾಡಲು ಹಾಗೂ ಆರೋಗ್ಯಯುತ ಜೀವನವನ್ನು ಪಡೆಯಬೇಕಾದರೆ ಇಂತಹ ಸ್ವಾಸ್ಥ್ಯ ಶಿಬಿರದ ಅತ್ಯಾವಶ್ಯಕತೆ ಇದೆ ಎಂದು ತಿಳಿಸಿದರು.
ಇವರ ಸಮಾಜ ಸುಧಾರಣಾ ಸೇವೆಯನ್ನು ಪರಿಗಣಿಸಿ ಶ್ರೀಮಠದ ವತಿಯಿಂದ ಡಾ. ಶ್ರೀ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮಿಗಳು ಮತ್ತು ಹುಕ್ಕೇರಿಯ ಶ್ರೀ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವದಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಪಾಂಡವಪುರ ತಹಶೀಲ್ದಾರರಾದ ಬಸಪ್ಪ ರೆಡ್ಡಪ್ಪ ರೋಣದ, ಆಶ್ರಮದ ಆಡಳಿತಾಧಿಕಾರಿಗಳಾದ ಚಿಕ್ಕತಿಮ್ಮಯ್ಯ, ಕಾರ್ಯದರ್ಶಿಗಳಾದ ಟಿ.ಪಿ. ಶಿವಕುಮಾರ್, ಶಶಿಕಲಾ ಅಮೃತೇಶ್‌ಮತ್ತಿತರರು ಉಪಸ್ಥಿತರಿದ್ದರು.



