Friday, April 10, 2026
Google search engine

Homeದೇಶಚಾರ್ ಧಾಮ್ ಯಾತ್ರೆ 2026: ಭಕ್ತರ ಸುರಕ್ಷತೆಗೆ ಸಿಎಂ ಪುಷ್ಕರ್ ಸಿಂಗ್ 'ಮಾಸ್ಟರ್ ಪ್ಲಾನ್'

ಚಾರ್ ಧಾಮ್ ಯಾತ್ರೆ 2026: ಭಕ್ತರ ಸುರಕ್ಷತೆಗೆ ಸಿಎಂ ಪುಷ್ಕರ್ ಸಿಂಗ್ ‘ಮಾಸ್ಟರ್ ಪ್ಲಾನ್’

ಡೆಹ್ರಾಡೂನ್: ಉತ್ತರಾಖಂಡ್‌ನ ಪವಿತ್ರ ಚಾರ್ ಧಾಮ್ ಯಾತ್ರೆಯನ್ನು ಈ ಬಾರಿ ಹೆಚ್ಚು ಸುಸಜ್ಜಿತ ಮತ್ತು ಸುರಕ್ಷಿತವಾಗಿಸಲು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಬೃಹತ್ ಯೋಜನೆಯನ್ನು ಘೋಷಿಸಿದ್ದಾರೆ.

2026ರ ಯಾತ್ರಾ ಅವಧಿಯಲ್ಲಿ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ತಡೆಯಲು ತಂತ್ರಜ್ಞಾನ ಮತ್ತು ಆರೋಗ್ಯ ಸೇವೆಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಈ ಕುರಿತು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ನಡೆಸಿದ ಉನ್ನತ ಮಟ್ಟದ ಸಭೆಯ ಪ್ರಮುಖ ನಿರ್ಧಾರಗಳು ಇಲ್ಲಿವೆ:

1. ಆರೋಗ್ಯ ಸೇವೆಗಳ ಬಲವರ್ಧನೆ : ಯಾತ್ರಾ ಮಾರ್ಗದುದ್ದಕ್ಕೂ ಭಕ್ತರ ಆರೋಗ್ಯ ರಕ್ಷಣೆಗಾಗಿ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಹೆಚ್ಚುವರಿ ವೈದ್ಯಕೀಯ ಘಟಕಗಳು ಮತ್ತು ತಾತ್ಕಾಲಿಕ ಆಸ್ಪತ್ರೆಗಳನ್ನ ಸ್ಥಾಪಿಸಲಾಗಿದೆ. ಯಾತ್ರಾರ್ಥಿಗಳ ಜೊತೆಗೆ, ಯಾತ್ರೆಯಲ್ಲಿ ಬಳಸಲಾಗುವ ಪ್ರಾಣಿಗಳ ಆರೋಗ್ಯಕ್ಕಾಗಿ ಪಶುವೈದ್ಯಕೀಯ ಸೌಲಭ್ಯಗಳನ್ನ ವಿಸ್ತರಣೆ ಮಾಡಲಾಗಿದೆ.

2. ಹೆಲಿಕಾಪ್ಟರ್ ಸೇವೆ

ಹೆಲಿಕಾಪ್ಟರ್ ಅಪಘಾತಗಳನ್ನು ತಡೆಯಲು ಮತ್ತು ಪಾರದರ್ಶಕತೆ ಕಾಯ್ದುಕೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸಂಸ್ಥೆಗಳು ಕೇವಲ ಲಾಭದ ಉದ್ದೇಶ ಹೊಂದಿರದೆ, ಭಕ್ತರ ಸುರಕ್ಷತೆಗೆ ಆದ್ಯತೆ ನೀಡಬೇಕು. ಇದರೊಟ್ಟಿಗೆ ತಾಂತ್ರಿಕ ತಪಾಸಣೆ ಮತ್ತು ಪೈಲಟ್‌ಗಳಿಗೆ ಕಡ್ಡಾಯ ವಿಶ್ರಾಂತಿ ನೀಡಬೇಕೆಂದು ಆದೇಶ ಹೊರಡಿಸಲಾಗಿದೆ.

3. ‘ಗ್ರೀನ್ ಅಂಡ್ ಕ್ಲೀನ್’ ಅಭಿಯಾನ

ಪರಿಸರ ಸಂರಕ್ಷಣೆಗಾಗಿ ಈ ಬಾರಿ ವಿಶೇಷ ಅಭಿಯಾನ ನಡೆಯಲಿದ್ದು, ಪ್ಲಾಸ್ಟಿಕ್ ಮುಕ್ತ ಯಾತ್ರೆಗೆ ಹೆಚ್ಚು ಆಧ್ಯತೆ ನೀಡಿದ್ದು, ಪ್ಲಾಸ್ಟಿಕ್ ಬಳಕೆಗೆ ಕಟ್ಟುನಿಟ್ಟಿನ ನಿಯಂತ್ರಣ. ಕಸ ಸಂಗ್ರಹಣೆಗೆ ವೈಜ್ಞಾನಿಕ ವ್ಯವಸ್ಥೆ ಮತ್ತು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

4. ಡಿಜಿಟಲ್ ತಂತ್ರಜ್ಞಾನ ಮತ್ತು AI ಕಣ್ಣಾವಲು

ಜನಸಂದಣಿಯನ್ನು ನಿರ್ವಹಿಸಲು ಈ ಬಾರಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಲಾಗುತ್ತಿದ್ದುಯ, ಎಐ ಆಧಾರಿತ ಕಣ್ಣಾವಲು ವ್ಯವಸ್ಥೆ ಮಾಡಲಾಗಿದೆ. ಸರಳ ನೋಂದಣಿಗಾಗಿ ಆನ್‌ಲೈನ್ ನೋಂದಣಿ ಪ್ರಕ್ರಿಯೆಯನ್ನ ಸರಳಗೊಳಿಸುವಿಕೆ ಮತ್ತು ಹೆಚ್ಚಿನ ಕೌಂಟರ್‌ಗಳ ಸ್ಥಾಪನೆ ಮಾಡಲಾಗಿದೆ.

5. ಅಗತ್ಯ ಸೇವೆಗಳ ಲಭ್ಯತೆ

ಯಾತ್ರಾರ್ಥಿಗಳಿಗೆ ಯಾವುದೇ ಹಂತದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದ್ದು, ಕುಡಿಯುವ ನೀರು, ಸುಸಜ್ಜಿತ ಶೌಚಾಲಯ ಮತ್ತು ತಂಗುದಾಣಗಳ ಅಭಿವೃದ್ಧಿ ಮಾಡಲಾಗಿದೆ.ಇದರ ಜೊತೆಗೆ LPG, ಪೆಟ್ರೋಲ್ ಮತ್ತು ಡೀಸೆಲ್‌ನಂತಹ ಅಗತ್ಯ ಇಂಧನಗಳ ನಿರಂತರ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ.

RELATED ARTICLES
- Advertisment -
Google search engine

Most Popular