Saturday, April 11, 2026
Google search engine

Homeದೇಶಇಸ್ಲಾಮಾಬಾದ್‌ನಲ್ಲಿ ಅಮೆರಿಕ–ಇರಾನ್ ಶಾಂತಿ ಮಾತುಕತೆ

ಇಸ್ಲಾಮಾಬಾದ್‌ನಲ್ಲಿ ಅಮೆರಿಕ–ಇರಾನ್ ಶಾಂತಿ ಮಾತುಕತೆ

ಇಸ್ಲಾಮಾಬಾದ್‌: ಮಧ್ಯಪ್ರಾಚ್ಯದಲ್ಲಿ ದೀರ್ಘಕಾಲದಿಂದ ನಡೆಯುತ್ತಿರುವ ಸಂಘರ್ಷಕ್ಕೆ ಅಂತ್ಯ ಹಾಡುವ ಉದ್ದೇಶದಿಂದ ಇಸ್ಲಾಮಾಬಾದ್ ನಲ್ಲಿ ಶನಿವಾರ ಮಹತ್ವದ ಅಮೆರಿಕ–ಇರಾನ್ ಶಾಂತಿ ಮಾತುಕತೆಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಭದ್ರತೆ ಸೇರಿದಂತೆ ವ್ಯಾಪಕ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.

ಮೊಹಮ್ಮದ್ ಬಕರ್ ಖಲೀಬಾಫ್ ನೇತೃತ್ವದ ಇರಾನ್ ನಿಯೋಗವು ಶುಕ್ರವಾರ ರಾತ್ರಿ ಇಸ್ಲಾಮಾಬಾದ್‌ಗೆ ಆಗಮಿಸಿದ್ದು, ಇದು ಸಂಘರ್ಷ ನಿವಾರಣೆಯತ್ತ ಪ್ರಮುಖ ರಾಜತಾಂತ್ರಿಕ ಹಂತವಾಗಿ ಪರಿಗಣಿಸಲಾಗಿದೆ. ಅಮೆರಿಕವು ಇರಾನ್‌ನ ಪೂರ್ವಭಾವಿ ಷರತ್ತುಗಳನ್ನು ಒಪ್ಪಿಕೊಂಡರೆ ಮಾತ್ರ ಮಾತುಕತೆ ಮುಂದುವರಿಯಲಿದೆ ಎಂದು ಇರಾನಿನ ಮಾಧ್ಯಮಗಳು ತಿಳಿಸಿವೆ.

ನಿಯೋಗದಲ್ಲಿ ವಿದೇಶಾಂಗ ಸಚಿವರು, ರಕ್ಷಣಾ ಮಂಡಳಿ ಅಧಿಕಾರಿಗಳು, ಕೇಂದ್ರ ಬ್ಯಾಂಕ್ ಗವರ್ನರ್ ಹಾಗೂ ಸಂಸದರು ಸೇರಿದ್ದಾರೆ. ಇನ್ನೊಂದೆಡೆ ಜೆ ಡಿ ವ್ಯಾನ್ಸ್ ನೇತೃತ್ವದ ಅಮೆರಿಕದ ನಿಯೋಗವು ಸ್ಟೀವ್ ವಿಟ್ಕಾಫ್ ಮತ್ತು ಜೇರೆಡ್ ಕುಶ್ನರ್ ಜೊತೆ ಮಾತುಕತೆಗೆ ಬಂದಿದೆ.

ಈ ಮಹತ್ವದ ರಾಜತಾಂತ್ರಿಕ ಸಭೆಗಾಗಿ ಇಸ್ಲಾಮಾಬಾದ್‌ನಲ್ಲಿ 10,000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮಾತುಕತೆ ನಡೆಯಲಿರುವ ರೆಡ್‌ ಝೋನ್‌ ಅನ್ನು ಸಂಪೂರ್ಣ ವಾಗಿ ಸೀಲ್‌ ಮಾಡಲಾಗಿದ್ದು, ಪ್ರವೇಶ ಮತ್ತು ನಿರ್ಗಮನ ದಾರಿಗಳಲ್ಲಿ ವಿಶೇಷ ಚೆಕ್‌ಪೋಸ್ಟ್‌ ಗಳನ್ನು ಸ್ಥಾಪಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಖೀÌ, “ಈ ಜಾಗತಿಕ ಮಾತುಕತೆಗೆ ಆತಿಥ್ಯ ವಹಿಸುತ್ತಿರುವುದು ಪಾಕ್‌ಗೆ ಸಂದ ಗೌರವ’ ಎಂದು ನಖ್ವಿ ಬಣ್ಣಿಸಿದ್ದಾರೆ.

RELATED ARTICLES
- Advertisment -
Google search engine

Most Popular