ಬೆಂಗಳೂರು: ಬೆಂಗಳೂರು-ಮುಂಬೈ (Bengaluru-Mumbai) ವಂದೇ ಭಾರತ್ ಸ್ಲೀಪರ್ ರೈಲು ಸಂಚಾರಕ್ಕೆ (Vande Bharat Sleeper Train) ಗ್ರೀನ್ ಸಿಗ್ನಲ್ ಸಿಕ್ಕಿದ್ದು. ಶೀಘ್ರವೇ ಕಾರ್ಯರೂಪಕ್ಕೆ ಬರಲಿದೆ. ಈ ಸಂಬಂಧ ರೈಲ್ವೆ ಇಲಾಖೆ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.
ವಂದೇ ಭಾರತ್ ಸ್ಲೀಪರ್ ರೈಲಿಗಾಗಿ ಈ ಹಿಂದೆ ಸಂಸದ ಪಿ.ಸಿ.ಮೋಹನ್ ಬೇಡಿಕೆ ಇಟ್ಟಿದ್ದರು. ಸಂಸದರಿಗೆ ಪತ್ರ ಬರೆದು ಹೊಸ ಟ್ರೈನ್‌ಗೆ ಅನುಮತಿ ಸಿಕ್ಕ ಬಗ್ಗೆ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ಹಂಚಿಕೊಂಡಿದ್ದಾರೆ.
ಡಿಸೆಂಬರ್ 2 ರಂದು ನೈಋತ್ಯ ರೈಲ್ವೆಯ (SWR) ಸ್ಥಾಯಿ ಸಮಿತಿಯ ಅಧ್ಯಯನ ಭೇಟಿಯ ಸಂದರ್ಭದಲ್ಲಿ ಬೆಂಗಳೂರು ಕೇಂದ್ರ ಸಂಸದ ಪಿ.ಸಿ.ಮೋಹನ್ ಈ ವಿಷಯವನ್ನು ಪ್ರಸ್ತಾಪಿಸಿದ್ದರು. SMVT ಬೆಂಗಳೂರು ಮೂಲ/ಅಂತ್ಯ ನಿಲ್ದಾಣವಾಗಿ ವಂದೇ ಭಾರತ್ ಸ್ಲೀಪರ್ ರೈಲಿಗೆ ಅವರು ಒತ್ತಾಯಿಸಿದ್ದರು.
ಈಗ ಇರುವ ರೈಲುಗಳು 24-30 ಗಂಟೆಗಳನ್ನು ತೆಗೆದುಕೊಳ್ಳುತ್ತವೆ. ಆದರೆ, ಬಸ್‌ಗಳು 16-18 ಗಂಟೆಗಳನ್ನು ತೆಗೆದುಕೊಳ್ಳುತ್ತವೆ. ನಮಗೆ ಬಸ್‌ನಷ್ಟು ವೇಗದ ರೈಲು ಬೇಕು ಎಂದು ತಿಳಿಸಿದ್ದರು. ವಂದೇ ಭಾರತ್‌ಗೆ ಗ್ರೀನ್ ಸಿಗ್ನಲ್ ಸಿಕ್ಕಿರುವ ಬೆನ್ನೆಲೆ, ಬೆಂಗಳೂರಿನಿಂದ ಮುಂಬೈಗೆ ಪ್ರಯಾಣಿಸುವವರಿಗೆ ಸಂಚಾರ ಸುಗಮವಾಗಲಿದೆ.



