Saturday, April 11, 2026
Google search engine

Homeರಾಜ್ಯಸುದ್ದಿಜಾಲಬೆಂಗಳೂರಿನಲ್ಲಿ ಜೊಂಬಿ ಡ್ರಗ್ ವಿಡಿಯೋ ಹರಿಬಿಟ್ಟಿದ್ದ ವ್ಯಕ್ತಿ ಅರೆಸ್ಟ್‌

ಬೆಂಗಳೂರಿನಲ್ಲಿ ಜೊಂಬಿ ಡ್ರಗ್ ವಿಡಿಯೋ ಹರಿಬಿಟ್ಟಿದ್ದ ವ್ಯಕ್ತಿ ಅರೆಸ್ಟ್‌

ಬೆಂಗಳೂರು: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆತಂಕ ಮೂಡಿಸಿದ್ದ ಜೊಂಬಿ ಡ್ರಗ್ ಕುರಿತಾದ ವಿಡಿಯೋ ಸಂಬಂಧಿಸಿದಂತೆ ಅದು ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡುರುವ ಪೊಲೀಸರು, ಈ ವಿಡಿಯೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದ ವ್ಯಕ್ತಿಯನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

ಬಾಗಲೂರಿನ ನಿಟ್ಟೆ ಕಾಲೇಜು ಸಮೀಪ ವ್ಯಕ್ತಿಯೊಬ್ಬ ಅಸಹಜವಾಗಿ, ಅರೆ ಪ್ರಜ್ಞೆಯಿಂದ ವರ್ತಿಸುತ್ತಿರುವ ವಿಡಿಯೋವನ್ನ ವ್ಯಕ್ತಿಯೊಬ್ಬ ಚಿತ್ರೀಕರಿಸಿದ್ದ. ಅಷ್ಟೇ ಅಲ್ಲದೆ, ಇದು ಅಪಾಯಕಾರಿ ಜೊಂಬಿ ಡ್ರಗ್ ಪ್ರಭಾವ ಎಂದು ಕ್ಯಾಪ್ಟನ್ ಕೊಟ್ಟು ಸಾಮಾಜಿಕ ಜಾಲತಾನದಲ್ಲಿ ಹರಿಬಿಟ್ಟಿದ್ದ. ಈ ವಿಡಿಯೋ ನೋಡಿ ಸಾರ್ವಜನಿಕರು ಭಯಭೀತರಾಗಿದ್ದರು.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಬೆಂಗಳೂರು ನಗರ ಪೊಲೀಸರು ತನಿಖೆ ಕೈಗೆತ್ತಿಕೊಂಡರು. ವಿಡಿಯೋದಲ್ಲಿರುವ ವ್ಯಕ್ತಿಗೂ ಡ್ರಗ್ಸ್‌ಗೂ ಯಾವುದೇ ಸಂಬಂಧವಿಲ್ಲ, ಇದು ಕೇವಲ ಸುಳ್ಳು ಸುದ್ದಿ ಎಂದು ಪತ್ತೆಹಚ್ಚಿದ್ದಾರೆ. ಈ ಸಂಬಂಧ ವಿಡಿಯೋ ಹರಿಬಿಟ್ಟಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಬಿಎನ್ಎಸ್ (BNS) ಮತ್ತು ಐಟಿ ಕಾಯ್ದೆಯಡಿ ಆರೋಪಿಯ ಮೇಲೆ ಗಂಭೀರ ಕೇಸ್ ದಾಖಲಿಸಲಾಗಿದೆ.

ಲೈಕ್ಸ್ ಮತ್ತು ವ್ಯೂಸ್‌ಗಾಗಿ ಸುಳ್ಳು ಸುದ್ದಿ ಹರಡಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದರೆ ಕಠಿಣ ಶಿಕ್ಷೆ ಗ್ಯಾರಂಟಿ ಎಂದು ಪೊಲೀಸರು ಎಚ್ಚರಿಸಿದ್ದಾರೆ.

RELATED ARTICLES
- Advertisment -
Google search engine

Most Popular