Thursday, April 23, 2026
Google search engine

Homeಕ್ರೀಡೆಲಕ್ನೋ ತಂಡಕ್ಕೆ ಸತತ 4ನೇ ಸೋಲು : ಮೌನಕ್ಕೆ ಶರಣಾದ ನಾಯಕ ರಿಷಭ್ ಪಂತ್ ;...

ಲಕ್ನೋ ತಂಡಕ್ಕೆ ಸತತ 4ನೇ ಸೋಲು : ಮೌನಕ್ಕೆ ಶರಣಾದ ನಾಯಕ ರಿಷಭ್ ಪಂತ್ ; ಪ್ಲೇ ಆಫ್ ಹಾದಿ ಮತ್ತಷ್ಟು ಕಠಿಣ

ಲಕ್ನೋ : ಐಪಿಎಲ್ ಅಂಗಳದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ಸೋಲಿನ ಸರಣಿ ಮುಂದುವರಿಯುತ್ತಿದೆ. ಬುಧವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಲಕ್ನೋ ತಂಡ ಸೋಲನುಭವಿಸುವ ಮೂಲಕ ಸತತ ನಾಲ್ಕನೇ ಸೋಲಿನ ಮುಖಭಂಗಕ್ಕೆ ಒಳಗಾಗಿದೆ.

ಇಕಾನಾ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ 159 ರನ್‌ಗ ಳ ಗುರಿಯನ್ನು ನೀಡಿತು. ಸಾಧಾರಣ ಗುರಿಯನ್ನು ಬೆನ್ನಟ್ಟಿದ ಲಕ್ನೋ ತಂಡವು ಕೇವಲ 119 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲು ಕಂಡಿತು.

ಹೊಣೆಗೇಡಿತನ ತೋರಿದರೇ ರಿಷಭ್ ಪಂತ್?

ಬ್ಯಾಟಿಂಗ್‌ ನಲ್ಲಿ ನಾಯಕ ರಿಷಭ್ ಪಂತ್ ಅವರ ಪ್ರದರ್ಶನ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಆಯುಷ್ ಬದೋನಿ ರನ್ ಔಟ್ ಆದ ಬಳಿಕ ಕ್ರೀಸ್‌ ಗೆ ಬಂದ ಪಂತ್, ಪಿಚ್‌ ನ ಪರಿಸ್ಥಿತಿಯನ್ನು ಅರಿಯದೆ ಮೊದಲ ಚೆಂಡಿನಿಂದಲೇ ರನ್‌ ಗಳಿಸುವ ಸಾಹಸಕ್ಕೆ ಕೈಹಾಕಿದರು. ಮೊದಲ ಎರಡು ಎಸೆತಗಳಲ್ಲಿ ವಿಫಲರಾದರೂ, ಮೂರನೇ ಎಸೆತದಲ್ಲಿ ಅನಗತ್ಯವಾಗಿ ಬ್ಯಾಟ್ ಬೀಸಿ ವಿಕೆಟ್ ಕೀಪರ್ ಕೈಗೆ ಕ್ಯಾಚಿತ್ತು ಶೂನ್ಯಕ್ಕೆ ಔಟಾದರು.

ಸೋಲಿನ ನಂತರ ಪಂತ್ ಹೇಳಿದ್ದೇನು?

ಪಂದ್ಯದ ನಂತರ ಸೋಲಿಗೆ ಕಾರಣವೇನೆಂದು ಪ್ರಶ್ನಿಸಿದಾಗ, ಪಂತ್ ಬಳಿ ಸರಿಯಾದ ಉತ್ತರವಿರಲಿಲ್ಲ. ಅವರು ಹೇಳಿದ್ದಿಷ್ಟು. “ನನ್ನ ಬಳಿ ಇದಕ್ಕೆ ಉತ್ತರವಿಲ್ಲ. ನಮ್ಮ ಬ್ಯಾಟಿಂಗ್ ವಿಭಾಗವು ಕೈಕೊಟ್ಟಿದೆ. ತಂಡವಾಗಿ ನಾವೆಲ್ಲರೂ ನಿರಾಸೆಗೊಂಡಿದ್ದೇವೆ. ನಾವು ಪಂದ್ಯವನ್ನು ಇನ್ನಷ್ಟು ಆಳಕ್ಕೆ ಕೊಂಡೊಯ್ಯಬಹುದಿತ್ತು. ಇದಕ್ಕೆ ಯಾವುದೇ ನೆಪ ಹೇಳಲು ಸಾಧ್ಯವಿಲ್ಲ, ತಂಡದ ಬ್ಯಾಟರ್‌ ಗಳಾಗಿ ನಾವೇ ಜವಾಬ್ದಾರಿ ತೆಗೆದುಕೊಳ್ಳಬೇಕು.”

“ನಾವು ಧನಾತ್ಮಕ ಅಂಶಗಳತ್ತ ಗಮನ ಹರಿಸಬೇಕು ಮತ್ತು ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳಬೇಕು. ಸೀಸನ್‌ ನ ಉಳಿದ ಪಂದ್ಯಗಳಲ್ಲಿ ಪುಟಿದೇಳುವ ಶಕ್ತಿ ನಮಗಿದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಿಚೆಲ್ ಮಾರ್ಷ್ ಹೋರಾಟ : ಆರಂಭಿಕನಾಗಿ ಬಂದ ಮಿಚೆಲ್ ಮಾರ್ಷ್ 41 ಎಸೆತಗಳಲ್ಲಿ 55 ರನ್ ಗಳಿಸಿ ಏಕಾಂಗಿ ಹೋರಾಟ ನಡೆಸಿದರು.

ಶೂನ್ಯಕ್ಕೆ ಔಟ್ : ಲಕ್ನೋದ ಪ್ರಮುಖ ಆಟಗಾರರಾದ ಆಯುಷ್ ಬದೋನಿ, ರಿಷಭ್ ಪಂತ್ ಮತ್ತು ಏಡನ್ ಮಾರ್ಕ್ರಾಮ್ ಮೂವರೂ ಖಾತೆ ತೆರೆಯದೆ (Duck) ಔಟಾಗಿದ್ದು ತಂಡಕ್ಕೆ ದೊಡ್ಡ ಹೊಡೆತ ನೀಡಿತು.

ಪಾಯಿಂಟ್ಸ್ ಟೇಬಲ್ : ಲಕ್ನೋ ಆಡಿರುವ 7 ಪಂದ್ಯಗಳಲ್ಲಿ ಕೇವಲ 2ರಲ್ಲಿ ಗೆದ್ದು, 5ರಲ್ಲಿ ಸೋತಿದೆ. ಪ್ರಸ್ತುತ 4 ಅಂಕಗಳೊಂದಿಗೆ -1.277 ನೆಟ್ ರನ್ ರೇಟ್ ಹೊಂದಿದೆ.

ಪ್ಲೇ ಆಫ್ ಹಾದಿ ಕಠಿಣ

ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಈಗ ಪ್ಲೇ ಆಫ್ ಹಂತಕ್ಕೇರುವುದು ಸವಾಲಿನ ಕೆಲಸವಾಗಿದೆ. ಇನ್ನುಳಿದ 7 ಪಂದ್ಯಗಳಲ್ಲಿ ಕನಿಷ್ಠ 6 ಪಂದ್ಯಗಳನ್ನು ಗೆದ್ದರೆ ಮಾತ್ರ ತಂಡವು ಮುಂದಿನ ಹಂತಕ್ಕೆ ಹೋಗುವ ಸಾಧ್ಯತೆಯಿದೆ.‌ (ಏಜೆನ್ಸಿಸ್)

RELATED ARTICLES
- Advertisment -
Google search engine

Most Popular