ಅಹಮದಾಬಾದ್ : ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಐಪಿಎಲ್ 2026ರ ಫೈನಲ್‌ನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಸತತ ಎರಡನೇ ಬಾರಿಗೆ ಟ್ರೋಫಿ ಮುಡಿಗೇರಿಸಿಕೊಂಡಿದೆ. ಅತ್ಯುತ್ತಮ ಬೌಲಿಂಗ್ ಪ್ರದರ್ಶನದ ನೆರವಿನಿಂದ RCB ತಂಡವು ಗುಜರಾತ್ ಟೈಟನ್ಸ್ ಅನ್ನು 155 ರನ್‌ಗಳಿಗೆ ನಿಯಂತ್ರಿಸಿತು. ಈ ಗುರಿಯನ್ನು ಬೆನ್ನಟ್ಟಿದ ವಿರಾಟ್ ಕೊಹ್ಲಿ 75 ರನ್‌ಗಳ ಭರ್ಜರಿ ಇನ್ನಿಂಗ್ಸ್ ಆಡಿದರು. ಕೊಹ್ಲಿ ಫೈನಲ್ ಪಂದ್ಯದ ‘ಪ್ಲೇಯರ್ ಆಫ್ ದಿ ಮ್ಯಾಚ್’ ಪ್ರಶಸ್ತಿ ಪಡೆದರೆ, ವೈಭವ್ ಸೂರ್ಯವಂಶಿ ‘ಪ್ಲೇಯರ್ ಆಫ್ ದಿ ಟೂರ್ನಮೆಂಟ್’ ಆಗಿ ಆಯ್ಕೆಯಾದರು. ಅವರು ಆರೆಂಜ್ ಕ್ಯಾಪ್ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಹಾಗಾದರೆ ಯಾರಿಗೆ ಎಷ್ಟು ಬಹುಮಾನದ ಹಣ ಸಿಕ್ಕಿದೆ ಎಂಬ ವಿವರ ಇಲ್ಲಿದೆ:
ಚಾಂಪಿಯನ್ RCBಗೆ 20 ಕೋಟಿ ರೂಪಾಯಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಾಂಪಿಯನ್ ಆದ ಹಿನ್ನೆಲೆಯಲ್ಲಿ 20 ಕೋಟಿ ರೂಪಾಯಿ ಬಹುಮಾನದ ಹಣವನ್ನು ಪಡೆದುಕೊಂಡಿದೆ. ತಂಡವು ಸತತ ಎರಡನೇ ಬಾರಿಗೆ ಚಾಂಪಿಯನ್ ಆಗಿದ್ದು, ಎರಡೂ ಟ್ರೋಫಿಗಳನ್ನು ಒಂದೇ ಮೈದಾನದಲ್ಲಿ ಗೆದ್ದಿರುವುದು ವಿಶೇಷ. ಇನ್ನು ಫೈನಲ್‌ನಲ್ಲಿ ಸೋತ ಗುಜರಾತ್ ಟೈಟನ್ಸ್ ತಂಡಕ್ಕೆ 12.5 ಕೋಟಿ ರೂಪಾಯಿ ಲಭಿಸಿದೆ.
ಸಿಯೆರಾ ಕಾರ್ ಜೊತೆಗೆ ವೈಭವ್ ಸೂರ್ಯವಂಶಿಗೆ ಸಿಕ್ಕ ಹಣ ಎಷ್ಟು?
ವೈಭವ್ ಸೂರ್ಯವಂಶಿ ಆರೆಂಜ್ ಕ್ಯಾಪ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಇದರ ಜೊತೆಗೆ ಅವರಿಗೆ ‘ಮೋಸ್ಟ್ ವ್ಯಾಲ್ಯೂಯಬಲ್ ಪ್ಲೇಯರ್ ಆಫ್ ದಿ ಸೀಸನ್’, ‘ಎಮರ್ಜಿಂಗ್ ಪ್ಲೇಯರ್ ಆಫ್ ದಿ ಸೀಸನ್’, ‘ಸೂಪರ್ ಸ್ಟ್ರೈಕರ್ ಆಫ್ ದಿ ಸೀಸನ್’ ಮತ್ತು ‘ಅತಿ ಹೆಚ್ಚು ಸಿಕ್ಸರ್’ ಬಾರಿಸಿದ ಪ್ರಶಸ್ತಿಗಳು ಒಲಿದಿವೆ. ಅವರಿಗೆ ಸಿಯೆರಾ ಕಾರ್ (Sierra Car) ಜೊತೆಗೆ ಒಟ್ಟು 45 ಲಕ್ಷ ರೂಪಾಯಿ ಬಹುಮಾನದ ಹಣ ಸಿಕ್ಕಿದೆ.
- ವಿಜೇತರು (Winner) RCB ₹20 ಕೋಟಿ
- ರನ್ನರ್ ಅಪ್ (Runner-up) GT ₹12.5 ಕೋಟಿ
- ಮೋಸ್ಟ್ ವ್ಯಾಲ್ಯೂಯಬಲ್ ಪ್ಲೇಯರ್ ʼವೈಭವ್ ಸೂರ್ಯವಂಶಿʼ ₹15 ಲಕ್ಷ
- ಆರೆಂಜ್ ಕ್ಯಾಪ್ (Orange Cap) ʼವೈಭವ್ ಸೂರ್ಯವಂಶಿʼ ₹10 ಲಕ್ಷ
- ಪರ್ಪಲ್ ಕ್ಯಾಪ್ (Purple Cap) ʼಕಗಿಸೊ ರಬಾಡ ʼ ₹10 ಲಕ್ಷ
- ಎಮರ್ಜಿಂಗ್ ಪ್ಲೇಯರ್ ಆಫ್ ದಿ ಸೀಸನ್ ʼವೈಭವ್ ಸೂರ್ಯವಂಶಿʼ ₹10 ಲಕ್ಷ
- ಅತಿ ಹೆಚ್ಚು ಡಾಟ್ ಬಾಲ್ ಬೌಲಿಂಗ್ ʼಮೊಹಮ್ಮದ್ ಸಿರಾಜ್ʼ ₹10 ಲಕ್ಷ
- ಸೂಪರ್ ಸ್ಟ್ರೈಕರ್ ಆಫ್ ದಿ ಸೀಸನ್ ʼವೈಭವ್ ಸೂರ್ಯವಂಶಿʼ ಸಿಯೆರಾ ಕಾರ್ (Sierra Car)
- ಅತಿ ಹೆಚ್ಚು ಸಿಕ್ಸರ್ ʼವೈಭವ್ ಸೂರ್ಯವಂಶಿʼ ₹10 ಲಕ್ಷ
- ಅತಿ ಹೆಚ್ಚು ಬೌಂಡರಿ (ಫೋರ್) ʼಸಾಯಿ ಸುದರ್ಶನ್ʼ ₹10 ಲಕ್ಷ
- ಕ್ಯಾಚ್ ಆಫ್ ದಿ ಸೀಸನ್ ʼಮನೀಶ್ ಪಾಂಡೆʼ ₹10 ಲಕ್ಷ
- ಪ್ಲೇಯರ್ ಆಫ್ ದಿ ಫೈನಲ್ ʼವಿರಾಟ್ ಕೊಹ್ಲಿʼ ₹5 ಲಕ್ಷ
- ಪಿಚ್ ಮತ್ತು ಗ್ರೌಂಡ್ ಪ್ರಶಸ್ತಿ ಈಡನ್ ಗಾರ್ಡನ್ಸ್ ₹50 ಲಕ್ಷ
- ಪಿಚ್ ಮತ್ತು ಗ್ರೌಂಡ್ ಪ್ರಶಸ್ತಿ ಧರ್ಮಶಾಲಾ ₹25 ಲಕ್ಷ



