Thursday, April 30, 2026
Google search engine

Homeಸ್ಥಳೀಯಪೊಲೀಸರ ಮಕ್ಕಳಿಗೆ ಬೇಸಿಗೆ ಈಜು ತರಬೇತಿ ಶಿಬಿರಕ್ಕೆ ಚಾಲನೆ

ಪೊಲೀಸರ ಮಕ್ಕಳಿಗೆ ಬೇಸಿಗೆ ಈಜು ತರಬೇತಿ ಶಿಬಿರಕ್ಕೆ ಚಾಲನೆ

ಚಾಮರಾಜನಗರ‌ : ಜಿಲ್ಲಾ ಪೊಲೀಸ್ ಇಲಾಖೆಯ ಪೊಲೀಸ್ ಕಲ್ಯಾಣ ಕಾರ್ಯಕ್ರಮದಡಿ, ಜಿಲ್ಲಾ ಪೊಲೀಸ್ ಕವಾಯತು ಮೈದಾನದ ಆವರಣದಲ್ಲಿರುವ ಜಿಲ್ಲಾ ಪೊಲೀಸ್ ಈಜುಕೊಳದಲ್ಲಿ ಪೊಲೀಸ್ ಸಿಬ್ಬಂದಿಯ ಮಕ್ಕಳಿಗಾಗಿ “ಬೇಸಿಗೆ ಈಜು ತರಬೇತಿ ಶಿಬಿರ”ವನ್ನು ಉದ್ಘಾಟಿಸಿ ಚಾಲನೆ ನೀಡಲಾಯಿತು.

ಈ ಶಿಬಿರದ ಉದ್ದೇಶ ಮಕ್ಕಳಲ್ಲಿ ಈಜು ಕೌಶಲ್ಯವನ್ನು ಬೆಳೆಸುವುದರೊಂದಿಗೆ ದೈಹಿಕ ಕ್ಷಮತೆ ಹಾಗೂ ಆತ್ಮವಿಶ್ವಾಸವನ್ನು ವೃದ್ಧಿಸುವುದಾಗಿದೆ. ತರಬೇತಿ ಅವಧಿಯಲ್ಲಿ ಅನುಭವಸಂಪನ್ನ ತರಬೇತುದಾರರಿಂದ ಮಕ್ಕಳಿಗೆ ಸುರಕ್ಷಿತವಾಗಿ ಈಜುವ ವಿಧಾನಗಳ ಕುರಿತು ಮಾರ್ಗದರ್ಶನ ನೀಡಲಾಗುತ್ತದೆ.

ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದು, ಮಕ್ಕಳಿಗೆ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.

RELATED ARTICLES
- Advertisment -
Google search engine

Most Popular