Friday, May 1, 2026
Google search engine

Homeದೇಶವಾಣಿಜ್ಯ ಸಿಲಿಂಡರ್​ ಬಳಕೆದಾರರಿಗೆ ಶಾಕ್​: ಇಂದಿನಿಂದ ಮತ್ತೆ 993 ರೂ. ದರ ಏರಿಕೆ

ವಾಣಿಜ್ಯ ಸಿಲಿಂಡರ್​ ಬಳಕೆದಾರರಿಗೆ ಶಾಕ್​: ಇಂದಿನಿಂದ ಮತ್ತೆ 993 ರೂ. ದರ ಏರಿಕೆ

ನವದೆಹಲಿ: ಇಂದಿನಿಂದ ಅಂದರೆ ಮೇ 1ರಿಂದ ಜಾರಿಗೆ ಬರುವಂತೆ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 993 ರೂಪಾಯಿ ಏರಿಕೆ ಮಾಡಲಾಗಿದೆ. ಇದರಿಂದ ವಾಣಿಜ್ಯ ಸಿಲಿಂಡರ್​ ಬಳಕೆದಾರರಿಗೆ ದೊಡ್ಡ ಹೊಡೆತ ಬಿದ್ದಿದೆ.

ವಾಣಿಜ್ಯ ಗ್ಯಾಸ್ ಬೆಲೆ ಏರಿಕೆಯು ನೇರವಾಗಿ ಹೋಟೆಲ್, ರೆಸ್ಟೋರೆಂಟ್, ಕ್ಯಾಟರಿಂಗ್ ಮತ್ತು ಬೀದಿ ಬದಿಯ ಆಹಾರ ವ್ಯಾಪಾರಸ್ಥರ ಮೇಲೆ ಪರಿಣಾಮ ಬೀರಲಿದೆ. ಇಂಧನ ವೆಚ್ಚ ಹೆಚ್ಚಾದ ಕಾರಣ, ವ್ಯಾಪಾರಿಗಳು ಅನಿವಾರ್ಯವಾಗಿ ಆಹಾರ ಪದಾರ್ಥಗಳ ಬೆಲೆಯನ್ನು ಹೆಚ್ಚಿಸಬಹುದು. ಇದು ಅಂತಿಮವಾಗಿ ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕಲಿದೆ.

ಇಂಡಿಯನ್ ಆಯಿಲ್ ಬಿಡುಗಡೆ ಮಾಡಿರುವ ಹೊಸ ದರದ ಪಟ್ಟಿ ಇಂತಿದೆ:

ದೆಹಲಿ: ₹2,078.50 ಇದ್ದ ದರ ಈಗ ₹3,071.50 ಕ್ಕೆ ಏರಿಕೆಯಾಗಿದೆ.

ಕೋಲ್ಕತ್ತಾ: ಇಲ್ಲಿ ಅತಿ ಹೆಚ್ಚು ಅಂದರೆ ₹994 ಹೆಚ್ಚಳವಾಗಿದ್ದು, ಹೊಸ ದರ ₹3,202 ಆಗಿದೆ.

ಮುಂಬೈ: ವಾಣಿಜ್ಯ ಸಿಲಿಂಡರ್ ಬೆಲೆ ₹3,024 ತಲುಪಿದೆ.

ಚೆನ್ನೈ: ಸಿಲಿಂಡರ್ ಬೆಲೆ ₹3,237 ಕ್ಕೆ ಏರಿದೆ.

ಪಾಟ್ನಾ: ಇಲ್ಲಿ ವಾಣಿಜ್ಯ ಸಿಲಿಂಡರ್ ದರ ₹3,361 ಆಗಿದೆ.

ಇಂದಿನಿಂದ ಹೊಸ ವಿತರಣಾ ನಿಯಮ (OTP ಕಡ್ಡಾಯ)

ಬೆಲೆ ಏರಿಕೆಯ ಜೊತೆಗೆ, ಇಂದಿನಿಂದ (ಮೇ 1) ಗ್ಯಾಸ್ ವಿತರಣಾ ವ್ಯವಸ್ಥೆಯಲ್ಲಿ ಡೆಲಿವರಿ ಅಥೆಂಟಿಕೇಶನ್ ಕೋಡ್ (DAC) ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗಿದೆ.ಸಿಲಿಂಡರ್ ವಿತರಣೆ ಮಾಡುವಾಗ ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರಲಿದೆ.

ಈ ಕೋಡ್ ನೀಡದ ಹೊರತು ಸಿಲಿಂಡರ್ ವಿತರಣೆ ಪ್ರಕ್ರಿಯೆ ಪೂರ್ಣಗೊಳ್ಳುವುದಿಲ್ಲ.ಒಂದು ವೇಳೆ ನಿಮ್ಮ ಮೊಬೈಲ್ ಸಂಖ್ಯೆ ಅಪ್‌ಡೇಟ್ ಇಲ್ಲದಿದ್ದರೆ, ವಿತರಕರು ಸ್ಥಳದಲ್ಲೇ ಆ್ಯಪ್ ಮೂಲಕ ಸಂಖ್ಯೆಯನ್ನು ಅಪ್‌ಡೇಟ್ ಮಾಡಿ ಕೋಡ್ ಜನರೇಟ್ ಮಾಡಲು ಅವಕಾಶವಿದೆ.

RELATED ARTICLES
- Advertisment -
Google search engine

Most Popular