Saturday, May 2, 2026
Google search engine

Homeದೇಶಅನುಗ್ರಹ ನಾರಾಯಣ ದಾಸ್ ರಕ್ಷಣಾ ಲೇಖಾ ಮಹಾನಿಯಂತ್ರಕರಾಗಿ ಅಧಿಕಾರ ಸ್ವೀಕಾರ : ರಕ್ಷಣಾ ಹಣಕಾಸು ವಲಯಕ್ಕೆ...

ಅನುಗ್ರಹ ನಾರಾಯಣ ದಾಸ್ ರಕ್ಷಣಾ ಲೇಖಾ ಮಹಾನಿಯಂತ್ರಕರಾಗಿ ಅಧಿಕಾರ ಸ್ವೀಕಾರ : ರಕ್ಷಣಾ ಹಣಕಾಸು ವಲಯಕ್ಕೆ ಆನೆಬಲ

ನವದೆಹಲಿ : ಹಿರಿಯ ಐಡಿಎಎಸ್ (IDAS) ಅಧಿಕಾರಿ ಅನುಗ್ರಹ ನಾರಾಯಣ ದಾಸ್ ಅವರು ಮೇ 1, 2026 ರಂದು ರಕ್ಷಣಾ ಲೇಖಾ ಮಹಾನಿಯಂತ್ರಕರಾಗಿ (Controller General of Defence Accounts – CGDA) ಅಧಿಕಾರ ವಹಿಸಿಕೊಂಡಿದ್ದಾರೆ.

1991ರ ಬ್ಯಾಚ್‌ನ ಭಾರತೀಯ ರಕ್ಷಣಾ ಲೇಖಾ ಸೇವೆಯ ಅಧಿಕಾರಿಯಾಗಿರುವ ದಾಸ್ ಅವರು, ರಕ್ಷಣಾ ಹಣಕಾಸು ನಿರ್ವಹಣೆ ಮತ್ತು ಸಾರ್ವಜನಿಕ ಸೇವೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದ ಸುದೀರ್ಘ ಅನುಭವವನ್ನು ಹೊಂದಿದ್ದಾರೆ.

ಹಣಕಾಸು ನಿರ್ವಹಣೆಯಲ್ಲಿ ಪರಿಣಿತಿ

ತಮ್ಮ ವೃತ್ತಿಜೀವನದಲ್ಲಿ ಅನುಗ್ರಹ ನಾರಾಯಣ ದಾಸ್ ಅವರು ಖರೀದಿ ನೀತಿ, ಆಡಿಟ್ ವ್ಯವಸ್ಥೆ, ಬಜೆಟ್ ಮತ್ತು ವೆಚ್ಚದ ಮೇಲ್ವಿಚಾರಣೆಯಂತಹ ನಿರ್ಣಾಯಕ ಕ್ಷೇತ್ರಗಳಲ್ಲಿ ಅನೇಕ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದಾರೆ. ಇವರ ಈ ಪರಿಣತಿಯು ದೇಶದ ರಕ್ಷಣಾ ಹಣಕಾಸು ನಿರ್ವಹಣೆಯನ್ನು ಮತ್ತಷ್ಟು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ಪ್ರತಿಷ್ಠಿತ ಸಂಸ್ಥೆಗಳಲ್ಲಿ ಶಿಕ್ಷಣ ಮತ್ತು ತರಬೇತಿ

ಇವರು ಉತ್ಕಲ ವಿಶ್ವವಿದ್ಯಾಲಯ ಮತ್ತು ಲುಬ್ಲಿಯಾನಾ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯಾಗಿದ್ದಾರೆ. ಇದರ ಜೊತೆಗೆ, ಐಐಎಂ ಬೆಂಗಳೂರು (IIMB) ಮತ್ತು ಡ್ಯೂಕ್ ವಿಶ್ವವಿದ್ಯಾಲಯದಂತಹ ಪ್ರತಿಷ್ಠಿತ ಸಂಸ್ಥೆಗಳಿಂದ ಸುಧಾರಿತ ತರಬೇತಿಯನ್ನು ಪಡೆದಿದ್ದಾರೆ.

ಪ್ರಮುಖ ಜವಾಬ್ದಾರಿಗಳು

ಅನುಗ್ರಹ ನಾರಾಯಣ ದಾಸ್ ಅವರು ರಕ್ಷಣಾ ಸಚಿವಾಲಯ, ಸೇವಾ ಪ್ರಧಾನ ಕಚೇರಿಗಳು ಮತ್ತು ಫೀಲ್ಡ್ ಫಾರ್ಮೇಶನ್‌ಗಳಲ್ಲಿ ಹಲವಾರು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ.

ಜಲಸಂಪನ್ಮೂಲ ಸಚಿವಾಲಯ: ನಿರ್ದೇಶಕರು, ರಕ್ಷಣಾ ಸಚಿವಾಲಯ: ಹೆಚ್ಚುವರಿ ಹಣಕಾಸು ಸಲಹೆಗಾರ ಮತ್ತು ಜಂಟಿ ಕಾರ್ಯದರ್ಶಿ,ಸೇನಾ ಪ್ರಧಾನ ಕಚೇರಿ: ಪ್ರಧಾನ ಏಕೀಕೃತ ಹಣಕಾಸು ಸಲಹೆಗಾರ,CGDA ಪ್ರಧಾನ ಕಚೇರಿ: ರಕ್ಷಣಾ ಲೇಖಾ ವಿಶೇಷ ನಿಯಂತ್ರಕ ಮಹಾಲೇಖಾಪಾಲರು.

ಇವರ ನೇಮಕಾತಿಯಿಂದ ರಕ್ಷಣಾ ಹಣಕಾಸು ನಿರ್ವಹಣೆ, ಮೇಲ್ವಿಚಾರಣಾ ಕಾರ್ಯವಿಧಾನ ಮತ್ತು ಪಾರದರ್ಶಕತೆ ಮತ್ತಷ್ಟು ಸದೃಢಗೊಳ್ಳಲಿದೆ. ಇದು ರಕ್ಷಣಾ ವಲಯದಲ್ಲಿ ಹಣಕಾಸಿನ ಶಿಸ್ತು ಮತ್ತು ದಕ್ಷತೆಯನ್ನು ಹೆಚ್ಚಿಸಲಿದೆ ಎಂದು ನಿರೀಕ್ಷಿಸಲಾಗಿದೆ.

RELATED ARTICLES
- Advertisment -
Google search engine

Most Popular