Sunday, May 3, 2026
Google search engine

Homeದೇಶಜುಲೈವರೆಗೆ ಅಂತರರಾಷ್ಟ್ರೀಯ ವಿಮಾನಗಳ ಸಂಚಾರ ಕಡಿತಗೊಳಿಸಿದ ಏರ್ ಇಂಡಿಯಾ

ಜುಲೈವರೆಗೆ ಅಂತರರಾಷ್ಟ್ರೀಯ ವಿಮಾನಗಳ ಸಂಚಾರ ಕಡಿತಗೊಳಿಸಿದ ಏರ್ ಇಂಡಿಯಾ

ನವದೆಹಲಿ: ವಿಮಾನ ಇಂಧನ ಏರಿಕೆಯಾಗುತ್ತಿರುವ ಹಿನ್ನೆಲೆ ಏರ್ ಇಂಡಿಯಾ ಜುಲೈವರೆಗಿನ ಅಂತಾರಾಷ್ಟ್ರೀಯ ವಿಮಾನ ಹಾರಾಟಗಳ ಸಂಖ್ಯೆಯನ್ನ ಕಡಿತಗೊಳಸುವ ನಿರ್ಧಾರ ಕೈಗೊಂಡಿದೆ.

ಈ ಬಗ್ಗೆ ಏರ್ ಇಂಡಿಯಾ ಸಿಇಒ ಕ್ಯಾಂಪ್ಬೆಲ್ ವಿಲ್ಸನ್ ಅವರು ಮಾಹಿತಿ ಹಂಚಿಕೊಂಡಿದ್ದು, ಏರಿಕೆಯಾಗುತ್ತಿರುವ ವಿಮಾನ ಇಂಧನ ದರ ಹಾಗೂ ವಾಯುಪ್ರದೇಶ ನಿರ್ಬಂಧದಿಂದಾಗಿ ಮಾರ್ಗ ಬದಲಾಯಿಸುವುದು ವಿಮಾನಯಾನ ಸಂಸ್ಥೆಗೆ ದುಬಾರಿಯಾಗುತ್ತಿದೆ. ಈಗಾಗಲೇ ಸಂಸ್ಥೆ ನಷ್ಟದಲ್ಲಿದ್ದು, ಇದರಿಂದ ಸಮಸ್ಯೆ ಇನ್ನಷ್ಟು ಹೆಚ್ಚಾಗುತ್ತಿದೆ. ಹೀಗಾಗಿ ಜುಲೈವರೆಗೆ ಸುಮಾರು 100 ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಕಡಿತಗೊಳಿಸಲಿದೆ ಎಂದು ತಿಳಿಸಿದ್ದಾರೆ.

ಈಗಾಗಲೇ ಏಪ್ರಿಲ್ ಹಾಗೂ ಮೇನಲ್ಲಿ ಕೆಲವು ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಕಡಿಮೆ ಮಾಡಲಾಗಿದೆ. ಇಂಧನ ದರ ಏರಿಕೆಯಿಂದಾಗಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತಿದ್ದು, ಹೀಗಾಗಿ ಜುಲೈವರೆಗೆ ಹೆಚ್ಚುವರಿ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಕಡಿತಗೊಳಿಸಲಾಗುವುದು ಎಂದಿದ್ದಾರೆ.

ದಿನನಿತ್ಯ ಏರ್ ಇಂಡಿಯಾ ಸುಮಾರು 1,100 ವಿಮಾನಗಳ ಹಾರಾಟ ಸೇವೆ ನೀಡುತ್ತಿತ್ತು. ಆದರೆ ಜೂನ್‌ನಲ್ಲಿ ಯುರೋಪ್, ಉತ್ತರ ಅಮೆರಿಕ, ಆಸ್ಟ್ರೇಲಿಯಾ ಹಾಗೂ ಸಿಂಗಾಪುರಕ್ಕೆ ನೀಡುವ ವಿಮಾನಗಳ ಹಾರಾಟ ಸೇವೆಯನ್ನು ಕಡಿತಗೊಳಿಸಲಿದೆ. ಇದರ ಹೊರತಾಗಿ ಸಂಸ್ಥೆಗೆ ಬೇರೆ ದಾರಿಯಿಲ್ಲ ಎಂದಿದೆ.

ಏರ್ ಇಂಡಿಯಾ ಸಂಸ್ಥೆ 2026 ಮಾ.31ರ ಮುಕ್ತಾಯವಾದ ಹಣಕಾಸು ವರ್ಷದಲ್ಲಿ ಸುಮಾರು 22,000 ಕೋಟಿ ರೂ.ಗಳಿಗಿಂತ ಹೆಚ್ಚಿನ ನಷ್ಟ ಅನುಭವಿಸಿದೆ.

RELATED ARTICLES
- Advertisment -
Google search engine

Most Popular