ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಹೊಸ ಚರಿತ್ರೆ ಸೃಷ್ಟಿಸಿರುವ ನಟ ದಳಪತಿ ವಿಜಯ್ ನೇತೃತ್ವದ ಟಿವಿಕೆ ಪಕ್ಷವು ಮೊದಲ, ಚುನಾವಣೆಗೆ ಭಾಗವಹಿಸಿದ ಮೊದಲ ಬಾರಿಯೇ 108 ಕ್ಷೇತ್ರಗಳಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಸರ್ಕಾರ ರಚನೆಗೆ ಮುಂದಾಗಿದೆ. ಈ ಭರ್ಜರಿ ಗೆಲುವಿನ ಬಳಿಕ ವಿಜಯ್ ಮೊದಲ ಬಾರಿ ಪಕ್ಷದ ಸಭೆ ಕರೆದಿದ್ದಾರೆ.
ತಮಿಳುನಾಡಿನ ಪಣಿಯೂರಿನಲ್ಲಿರುವ ಟಿವಿಕೆ ಕಚೇರಿಯಲ್ಲಿ ವಿಜಯ್ ನೇತೃತ್ವದಲ್ಲಿ ಸಭೆ ನಡೆಯಲಿದೆ. ಈಗಾಗಲೇ ವಿಜಯ್ ಪಣಿಯೂರು ಕಚೇರಿಗೆ ಆಗಮಿಸಿದ್ದಾರೆ. ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ನಡೆಸುತ್ತಿರುವ ಮೊದಲ ಸಭೆ ಇದಾಗಿದ್ದು, ಸಭೆಯಲ್ಲಿ ಟಿವಿಕೆ ಪಕ್ಷದಿಂದ ಗೆದ್ದಿರುವ ಎಲ್ಲಾ 107 ಶಾಸಕರು ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.
ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯಾಗಲಿದ್ದು, ಬಹುತೇಕ ದಳಪತಿ ವಿಜಯ್ ಅವರೇ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾಗುವುದು ದಟ್ಟವಾಗಿದೆ. ಟಿವಿಕೆ ಪಕ್ಷಕ್ಕೆ ಇದು ಮೊದಲ ಗೆಲುವು ಹಾಗೂ ಮೊದಲ ಬಾರಿ ಸರ್ಕಾರ ರಚನೆಗೆ ಮುಂದಾಗುತ್ತಿರುವ ಹಿನ್ನೆಲೆಯಲ್ಲಿ ಹಲವಾರು ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆಯಾಗಲಿದೆ.
ಟಿವಿಕೆ ಗೆಲುವಿನ ಬೆನ್ನಲ್ಲೇ ಈಗಾಗಲೇ ವಿಜಯ್ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದು, ಎರಡು ವಾರಗಳ ಕಾಲವಾಕಾಶ ಕೋರಿದ್ದಾರೆ. ಒಟ್ಟಾರೆ ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ಮುಂದಾಗಿರುವ ಟಿವಿಕೆ ಪಕ್ಷದ ಮುಖ್ಯಸ್ಥ ನಟ ವಿಜಯ್ ಆಡಳಿತಕ್ಕಾಗಿ ರಾಜ್ಯದ ಜನತೆ ಕುತೂಹಲದಿಂದ ಕಾಯುತ್ತಿದ್ದಾರೆ.



