Monday, May 11, 2026
Google search engine

Homeರಾಜ್ಯಸುದ್ದಿಜಾಲಮೈಸೂರು ಅರಮನೆಯ ದೀಪಾಲಂಕಾರ ತಾತ್ಕಾಲಿಕ ಸ್ಥಗಿತ

ಮೈಸೂರು ಅರಮನೆಯ ದೀಪಾಲಂಕಾರ ತಾತ್ಕಾಲಿಕ ಸ್ಥಗಿತ

ಮೈಸೂರು : ಸಚಿವ ಸುಧಾಕರ್ ನಿಧನದ ಹಿನ್ನೆಲೆಯಲ್ಲಿ ಮೈಸೂರು ಅರಮನೆಯ ದೀಪಾಲಂಕಾರ ಮತ್ತು ಧ್ವನಿ-ಬೆಳಕು ಕಾರ್ಯಕ್ರಮವನ್ನು ಅರಮನೆ ಮಂಡಳಿಯು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ .

ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಸಚಿವರಾದ ಡಿ. ಸುಧಾಕರ್ ಅವರು ಮೇ 10ರಂದು ಇಹಲೋಕ ತ್ಯಜಿಸಿದ್ದಾರೆ. ಹೀಗಾಗಿ ಅವರ ಗೌರವಾರ್ಥವಾಗಿ ರಾಜ್ಯ ಸರ್ಕಾರವು ಮೂರು ದಿನಗಳ ಕಾಲ ಅಧಿಕೃತ ಶೋಕಾಚರಣೆಯನ್ನು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಮೈಸೂರು ಅರಮನೆ ಮಂಡಳಿಯು ಅರಮನೆಯ ಆವರಣದಲ್ಲಿ ನಡೆಯುವ ಎಲ್ಲಾ ಮನೋರಂಜನಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿದೆ.

ಶೋಕಾಚರಣೆಯ ಭಾಗವಾಗಿ ಈಗಾಗಲೇ ಮೇ 10ರಂದು ಅರಮನೆಯ ಭವ್ಯ ದೀಪಾಲಂಕಾರವನ್ನು ರದ್ದುಗೊಳಿಸಲಾಗಿತ್ತು. ಇಷ್ಟೇ ಅಲ್ಲದೆ, ಪ್ರವಾಸಿಗರ ನೆಚ್ಚಿನ ಧ್ವನಿ ಮತ್ತು ಬೆಳಕು ಕಾರ್ಯಕ್ರಮವನ್ನೂ ಸಹ ಮೇ 11 ಮತ್ತು ಮೇ 12ರಂದು ಎರಡು ದಿನಗಳ ಕಾಲ ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಈ ಬಗ್ಗೆ ಅರಮನೆ ಮಂಡಳಿಯ ಉಪನಿರ್ದೇಶಕರು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಪ್ರವಾಸಿಗರು ನಿರಾಸೆಯಾಗುವ ಅಗತ್ಯವಿಲ್ಲ. ಮೂರು ದಿನಗಳ ಶೋಕಾಚರಣೆಯ ಅವಧಿ ಮುಗಿದ ನಂತರ, ಅಂದರೆ ಮೇ 13ರಿಂದ ಅರಮನೆಯಲ್ಲಿ ಧ್ವನಿ ಮತ್ತು ಬೆಳಕು ಕಾರ್ಯಕ್ರಮವು ಎಂದಿನಂತೆ ನಿಗದಿತ ಸಮಯದಲ್ಲಿ ಪುನಾರಂಭಗೊಳ್ಳಲಿದೆ.

RELATED ARTICLES
- Advertisment -
Google search engine

Most Popular