ಕೆ.ಆರ್.ನಗರ : ತಾಲೂಕಿನ ಹೆಬ್ಬಾಳು ಗ್ರಾಮದಲ್ಲಿ ಶುಕ್ರವಾರ ಗ್ರಾಮ ದೇವತೆ ದೊಡ್ಡಮ್ಮ ತಾಯಿ ಹಬ್ಬವನ್ನು ಅತ್ಯಂತ ವಿಜೃಂಣೆಯಿಂದ ನಡೆಸಲಾಯಿತು. ಪ್ರತಿ ಎರಡು ವರ್ಷಕ್ಕೊಮ್ಮೆ ಆಚರಿಸುವ ಈ ಹಬ್ಬವನ್ನು ಗ್ರಾಮದ ಎಲ್ಲಾ ಕುಟುಂಬದವರು ಸೇರಿ ಅತ್ಯಂತ ಸಂಭ್ರಮ ಮತ್ತು ವಿಜೃಂಭಣೆಯಿಂದ ಆಚರಿಸಿದರು.
ಹಬ್ಬದ ವಿಶೇಷ- ಗ್ರಾಮದ ಪ್ರತಿ ಮನೆಯವರು ಪ್ರತ್ಯೇಕವಾಗಿ ತೋಟದ ವಿವಿದ ಭಾಗಗಳಲ್ಲಿ ಮಾಂಸಹಾರದ ಅಡುಗೆ ಮಾಡಿ ಆನಂತರ ದೊಡ್ಡಮ್ಮ ತಾಯಿಗೆ ನೈವೇಧ್ಯ ಅರ್ಪಿಸಿ ಒಟ್ಟಿಗೆ ಸೇರಿ ಸಹ ಪಂಕ್ತಿ ಬೋಜನ ಸ್ವೀಕರಿಸುವುದು ವಾಡಿಕೆ.
ಜಾತಿ ಧರ್ಮದ ಬೇಧವಿಲ್ಲದೆ ಗ್ರಾಮ ಮತ್ತು ನಾಡಿನ ಒಳಿತಿಗಾಗಿ ಹಬ್ಬ ಮಾಡಿವ ಮೂಲಕ ಉತ್ತಮ ಮಳೆ ಮತ್ತು ಬೆಳೆಗಾಗಿ ಪ್ರಾರ್ಥಿಸುವುದು ಈ ಗ್ರಾಮದ ಸಂಪ್ರದಾಯವಾಗಿದೆ.
ಗ್ರಾಮದ ಹಿರಿಯರ ಸಮ್ಮುಖದಲ್ಲಿ ಕೆರೆಯಿಂದ ಮಣ್ಣು ತಂದು ಅದರಿಂದ ದೊಡ್ಡಮ್ಮ ತಾಯಿಯ ಮೂರ್ತಿಯನ್ನು ತಿದ್ದಿ ದೇವರ ರೂಪ ನೀಡುವ ಮೂಲಕ ಭಕ್ತಿ ಭಾವದಿಂದ ಪೂಜೆ ಸಲ್ಲಿಸಿ ವರ ಬೇಡುವುದು ಇಲ್ಲಿನವರ ಕಟ್ಟಳೆ. ಹೆಬ್ಬಾಳು, ಹೆಬ್ಬಾಳು ಬೋರೆ, ಹೆಬ್ಬಾಳು ಕೊಪ್ಪಲು ಸೇರಿದಂತೆ ಸುತ್ತ ಮುತ್ತಲ ಗ್ರಾಮಗಳ ನೂರಾರು ಮಂದಿ ದೊಡ್ಡಮ್ಮ ತಾಯಿಯ ಪೂಜೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

ಗ್ರಾಮದ ಯಜಮಾನರಾದ ಹೆಚ್.ಹೆಚ್.ನಾಗೇಂದ್ರ, ಹೆಚ್.ಕೆ. ಸುಜಯ್, ಸುಂದ್ರಣ್ಣ, ಕೃಷ್ಣೇಗೌಡ, ದಿನೇಶ್, ಮುಖಂಡರಾದ ಎಲ್ ಡಿ ಶಂಕರ್, ಗ್ರಾ.ಪಂ.ಮಾಜಿ ಸದಸ್ಯ ಹೆಚ್.ಡಿ.ಮನು, ಬಾಲಕೃಷ್ಣ, ಹೆಚ್.ಎಸ್.ಸಂತೋಷ್, ಕಪ್ಪಡಿ ಮಧು, ಹೆಚ್.ಪಿ.ಶಿವಪ್ಪ, ದೀಪು, ಜಿ.ದಾಮೋಧರ, ಹೆಚ್.ಜಿ.ರಮೇಶ್, ಕೋಳಿತಾಜು, ತಮ್ಮಯ್ಯಣ್ಣ ಮತ್ತಿತರರು ಇದ್ದರು.



