Tuesday, May 19, 2026
Google search engine

Homeಸ್ಥಳೀಯಸಹಾಯ ಮಾಡುವ ಗುಣ ಅನುಕರಣೀಯ : ರಾಜಯೋಗಿನಿ ಅಮೃತ

ಸಹಾಯ ಮಾಡುವ ಗುಣ ಅನುಕರಣೀಯ : ರಾಜಯೋಗಿನಿ ಅಮೃತ

ಕೆ.ಆರ್.ನಗರ : ಅಖಿಲ ಭಾರತ ವೀರಶೈವ ಮಹಾ ಸಭಾದ ತಾಲೂಕು ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಚಿಕ್ಕವಡ್ಡರಗುಡಿ ಸಿ.ಪಿ. ರಮೇಶ್ ಕುಮಾರ್ ಅವರು ಸಮಾಜದಲ್ಲಿ ಇತರರಿಗೆ ಮಾದರಿ ಎಂದು ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ರಾಜಯೋಗಿನಿ ಅಮೃತ ಅವರು ಹೇಳಿದರು.
ಪಟ್ಟಣದ ಶ್ರೀರಾಮ ಬಡಾವಣೆಯಲ್ಲಿರುವ ಶಾಖಾ ಕಚೇರಿಯಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು ತಮ್ಮ ಸಂಪಾದನೆಯ ಅಲ್ಪ ಭಾಗವನ್ನು ನೊಂದವರು ಹಾಗೂ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಅವರ ಗುಣ ಅನುಕರಣೀಯ ಎಂದು ತಿಳಿಸಿದರು.
ಅಖಿಲ ಭಾರತ ವೀರಶೈವ ಮಹಾ ಸಭಾದ ತಾಲೂಕು ಘಟಕದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಇವರು ತಮ್ಮ ಸಮುದಾಯದ ಜತೆಗೆ ಇತರ ಸಮಾಜದವರ ಏಳಿಗೆಗೂ ದುಡಿಯಲಿ ಎಂದು ಆಶಿಸಿದರು.
ನಿತ್ಯ ಜೀವನದ ಜಂಜಾಟದಲ್ಲಿ ಮಾನಸಿಕವಾಗಿ ಬಳಲುವವರು ವಾರದಲ್ಲಿ ಒಂದು ದಿನ ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯಕ್ಕೆ ಭೇಟಿ ನೀಡಿ ಮನಶ್ಯಾಂತಿ ಪಡೆದುಕೊಳ್ಳಿ ಎಂದರು.
ಅಖಿಲ ಭಾರತ ವೀರಶೈವ ಮಹಾ ಸಭಾದ ನಿರ್ದೇಶಕ ಕುಪ್ಪೆಮಹದೇವಸ್ವಾಮಿ, ನರಸಿಂಹರಾಜು, ಶಿವಲಿಂಗಯ್ಯ, ಚಂದ್ರಶೇಖರ್, ಮನೋಹರಿನಾಗರಾಜು, ಸೋಮಶೇಖರ್, ಮಾದೇಶ್, ತುಕ್ಕೋಜಿರಾವ್, ಶಿವಕುಮಾರ್, ಧರ್ಮೇಶ್ ಮತ್ತಿತರರು ಇದ್ದರು.

RELATED ARTICLES
- Advertisment -
Google search engine

Most Popular