Tuesday, May 26, 2026
Google search engine

Homeಸ್ಥಳೀಯರೈತರಿಗೆ ತೊಂದರೆಯಾದರೆ ಬೀದಿಗಿಳಿದು ಹೋರಾಟ: ಕುರುಬೂರು ಶಾಂತಕುಮಾರ್‌

ರೈತರಿಗೆ ತೊಂದರೆಯಾದರೆ ಬೀದಿಗಿಳಿದು ಹೋರಾಟ: ಕುರುಬೂರು ಶಾಂತಕುಮಾರ್‌

ಮೈಸೂರು: ಮುಂಗಾರು ಆರಂಭವಾಗಿದೆ ರೈತರಿಗೆ ಬೇಕಾದ ಬೀಜ. ಯೂರಿಯಾ, ಡಿಎಪಿ, ರಸಗೊಬ್ಬರ ಬೆಲೆ ಏರಿಕೆ ಸರಿಯಲ್ಲ. ಕೇಂದ್ರ ರಾಜ್ಯ. ಸರ್ಕಾರಗಳು ಟೀಕೆಯಲ್ಲಿ ರೈತರನ್ನ ಮರೆಮಾಚಬೇಡಿ. ನಿರ್ಲಕ್ಷ್ಯ ಮಾಡಿದರೆ ಬೀದಿಗಿಳಿದು ಹೋರಾಟ ಮಾಡುವುದಾಗಿ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಎಚ್ಚರಿಸಿದರು.

ಕಬ್ಬು ಬೆಳೆಯಲ್ಲಿ ಖರ್ಚು ಕಡಿಮೆ ಮಾಡಿ ಹೆಚ್ಚು ಉತ್ಪಾದನೆ ಮಾಡುವ ಸಾಮರ್ಥ್ಯ ಇರುವ ಏ ಐ ತಂತ್ರಜ್ಞಾನ( ಕೃತಕ ಬುದ್ಧಿಮತ್ತ್ಯ) ಮಹಾರಾಷ್ಟ್ರ ಮಾದರಿಯಲ್ಲಿ ರಾಜ್ಯ ಸರ್ಕಾರ ಜಾರಿಗೆ ತರಬೇಕು. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಕೃಷಿ ಸಚಿವರಿಗೆ ಸಕ್ಕರೆ ಸಚಿವರಿಗೆ ಪತ್ರ ಬರೆದು ಒತ್ತಾಯಿಸಲಾಗಿದೆ. ಪೆಟ್ರೋಲ್, ಡೀಸೆಲ್. ದರ ಪದೇ ಪದೇ ಏರಿಕೆ ಸರಿಯಲ್ಲ. ಇದು ರೈತರ ಕೃಷಿ ಚಟುವಟಿಕೆಯ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ರಸಗೊಬ್ಬರ ಬೀಜ ಡೀಸೆಲ್ ದರ ಏರಿಕೆಯಿಂದ ಕೃಷಿ ಉತ್ಪಾದನೆ ವೆಚ್ಚ ಏರಿಕೆಯಾಗಲಿದೆ. ಮೈಸೂರು ನಗರದಲ್ಲಿ ವೈಟ್ ಟ್ಯಾಪಿಂಗ್ ರಸ್ತೆ ನಿರ್ಮಾಣ ಬೇಡ. ಪರಿಸರಕ್ಕೆ ಧಕ್ಕೆ, ಉಷ್ಣಾಂಶ ಏರಿಕೆಯಾಗುತ್ತದೆ. ವ್ಯವಸ್ಥಿತ ಡಾಂಬರು ರಸ್ತೆ ನಿರ್ಮಾಣವೇ ಒಳ್ಳೆಯದು. ಸಿಮೆಂಟ್ ಉತ್ಪಾದಕ ಕಂಪನಿಗಳ ಒತ್ತಡಕ್ಕೆ ಮಣಿಯುವುದು ಬೇಡ ಎಂದರು.

ಕೃಷಿ ಪಂಪ್ಸೆಟ್ ಗಳಿಗೆ ಉಚಿತ ವಿದ್ಯುತ್ ನಿಲ್ಲಿಸಲು ಉನ್ನಾರ. ವಿದ್ಯುತ್ ಸರಬರಾಜು ಕಂಪನಿಗಳನ್ನು ಖಾಸಗಿಯವರಿಗೆ ವಹಿಸಲು ಟೆಂಡರ್ ಕರೆದಿರುವ ಪ್ರಕ್ರಿಯೆ ರೈತ ವಿರೋಧಿ ನೀತಿ ಕೂಡಲೇ ನಿಲ್ಲಿಸಬೇಕು.

ಪತ್ರಿಕಾಗೋಷ್ಠಿಯಲ್ಲಿ ಹತ್ತಳ್ಳಿ ದೇವರಾಜ್, ಬರಡನಪುರ ನಾಗರಾಜ್, ಪಿ.ಸೋಮಶೇಖರ್, ಕಿರಗಸೂರ್ ಶಂಕರ್, ವರಕೂಡ್ ನಾಗೇಶ್, ಪೈಲ್ವಾನ್ ವೆಂಕಟೇಶ್, ಸಿದ್ದೇಶ್, ವಿಜಯೇಂದ್ರ, ಮೂಕ್ಕಳ್ಳಿ ಮಹದೇವಸ್ವಾಮಿ, ನೀಲಕಂಠಪ್ಪ, ಪಟೇಲ್ ಶಿವಮೂರ್ತಿ, ಸತೀಶ್, ಉಡಿಗಾಲ ರೇವಣ್ಣ, ಸುಂದರಪ್ಪ, ಕೆಂಡಗಣಪ್ಪ, ಪ್ರಸಾದ್ ನಾಯಕ, ಕಾಟೂರು ಮಹದೇವಸ್ವಾಮಿ, ಬಸವರಾಜ, ಪರಶಿವಮೂರ್ತಿ, ಪ್ರದೀಪ್, ಮಂಜುನಾಥ್, ಗೌರಿಶಂಕರ್, ಗುರುಸ್ವಾಮಿ, ಕುಮಾರ್, ನಂಜುಂಡಸ್ವಾಮಿ, ಕಾಟೂರು ನಾಗೇಶ್, ಸಿದ್ಧರಾಮ, ನಾಗೇಂದ್ರ, ಉಮೇಶ್, ಮಹಾದೇವಪ್ಪ, ಕಮಲಮ್ಮ ಮುಂತಾದವರು ಇದ್ದರು.

RELATED ARTICLES
- Advertisment -
Google search engine

Most Popular