Tuesday, June 2, 2026
Google search engine

HomeUncategorizedಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ವೇಳಾಪಟ್ಟಿ ಪ್ರಕಟ- ಜೂನ್ 20ರಿಂದ ಪ್ರಕ್ರಿಯೆ

ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ವೇಳಾಪಟ್ಟಿ ಪ್ರಕಟ- ಜೂನ್ 20ರಿಂದ ಪ್ರಕ್ರಿಯೆ

 ಮಂಡ್ಯ : ಭಾರತ ಚುನಾವಣಾ ಆಯೋಗವು ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ(SIR) ವೇಳಾಪಟ್ಟಿ ಪ್ರಕಟವಾಗಿದ್ದು ಜೂನ್ 20 ರಿಂದ ಅಕ್ಟೋಬರ್ 7 ವರೆಗೆ ನಡೆಯುವ ಪ್ರಕ್ರಿಯೆ ಬಗ್ಗೆ ರಾಜಕೀಯ ಪಕ್ಷಗಳ ಅಧ್ಯಕ್ಷರು/ ಉಪಾಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯ ಬಗ್ಗೆ  ಮಾಹಿತಿಯನ್ನು ನೀಡಿದರು.

  ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ -2026 ರ ಕಾರ್ಯವನ್ನು ಜರುಗಿಸಲು ಭಾರತ ಚುನಾವಣಾ ಆಯೋಗವು ದಿನಾಂಕಃ 14-05-2026ರಂದು ಹೊರಡಿಸಿದ ಹಿನ್ನೆಲೆಯಲ್ಲಿ ಸೋಮವಾರ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ -2026 ಸಂಬಂಧಿಸಿದ ವಿಷಯಗಳ ಕುರಿತು ಸಮಗ್ರ ಮಾಹಿತಿಯನ್ನು ನೀಡಲು ಜಿಲ್ಲೆಯ ನೋಂದಾಯಿತ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ಆಯೋಜಿಸಲಾಗಿದೆ ಎಂದರು.

ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆಯು, ಮತದಾರರು, ರಾಜಕೀಯ ಪಕ್ಷಗಳು ಮತ್ತು ಚುನಾವಣಾ ಸಿಬ್ಬಂದಿ ಒಳಗೊಂಡಂತಹ ಪಾರದರ್ಶಕ ಹಾಗೂ ಪಾಲ್ಗೊಳ್ಳುವಿಕೆಯ ಪ್ರಕ್ರಿಯೆಯಾಗಿದೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು.

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ಮುಖ್ಯ ಉದ್ದೇಶ ಅರ್ಹ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸುವುದು ಮತ್ತು ಅನರ್ಹರರನ್ನು ನಿಯಮಾನುಸಾರ ಮತದಾರರ ಪಟ್ಟಿಯಿಂದ ಕೈಬಿಡುವುದಾಗಿದೆ ಎಂದರು.

ಜೂನ್ 20, 2026 ರಿಂದ ಜೂನ್ 29, 2026 ರವರೆಗೆ ಪೂರ್ವ ಸಿದ್ದತೆ ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ನಡೆಯಲ್ಲಿದೆ. ಜೂನ್ 30, 2026 ರಿಂದ ಜುಲೈ 29, 2026 ವರೆಗೆ ಮತಗಟ್ಟೆ ಅಧಿಕಾರಿಗಳಿಂದ ಮನೆ-ಮನೆ ಸಮಿಕ್ಷೆ ಗಣತಿ ನಮೂನೆಗಳನ್ನು ಮತದಾರರಿಗೆ ಹಂಚುವುದು ಮತ್ತು ಸಂಗ್ರಹಸುವ ಕಾರ್ಯ ನಡೆಯಲ್ಲಿದೆ. ಅಂತರ್ಜಾಲದ ಮೂಲಕ ಮತದಾರರು ಗಣತಿ ನಮೂನೆಯನ್ನು ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಜುಲೈ 29, 2026 ರಂದು ಮತಗಟ್ಟೆ ಪುನರ್ ವಿಂಗಡಣೆ ಸಂಬಂಧ ನಿಯಾಮನುಸಾರ ಪ್ರಸ್ತಾವನೆಯನ್ನು ಮುಖ್ಯ ಚುನಾವಣಾಧಿಕಾರಿಗಳಿಗೆ ಸಲ್ಲಿಸುವುದು.

ಆಗಸ್ಟ್ 5, 2026 ರಂದು ಕರಡು ಮತದಾರರ ಪಟ್ಟಿ ಪ್ರಕಟಣೆ, ಆಗಸ್ಟ್ 5, 2026 ರಿಂದ ಸೆಪ್ಟೆಂಬರ್ 4, 2026 ರವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಆಗಸ್ಟ್ 5, 2026 ರಿಂದ ಅಕ್ಟೋಬರ್ 3, 2026 ರವರೆಗೆ ಹಕ್ಕು ಮತ್ತು ಆಕ್ಷೇಪಣೆ ವಿಲೇವಾರಿ ನಡೆಯಲ್ಲಿದೆ. ಅಕ್ಟೋಬರ್ 7 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗುತ್ತದೆ ಎಂದು ಸಭೆಯಲ್ಲಿ ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಗಣತಿ ನಮೂನೆಯನ್ನು ಸಹಿ ಮಾಡದೆ ಬಿ.ಎಲ್.ಓ., ರವರಿಗೆ ನೀಡದೆ ಇದ್ದಲ್ಲಿ ಕರಡು ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾವಣಿ ಮಾಡಿರುವುದಿಲ್ಲ. ಇಂತಹವರಿಗೆ ನೋಟಿಸನ್ನು ನೀಡಿ ಹಕ್ಕು ಆಕ್ಷೇಪಣೆ ಅವಧಿಯಲ್ಲಿ ಮತದಾರರು ಆಯೋಗವು ನಿಗದಿಪಡಿಸಿರುವ 12 ವಿವಿಧ ದಾಖಲೆಗಳಲ್ಲಿ ಒಂದು ದಾಖಲೆ ನೀಡಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಹೊಸ ಅರ್ಜಿ ನೀಡಬಹುದು ಎಂದು ತಿಳಿಸಿದರು.

ಬಿ.ಎಲ್.ಓ., ಗಳು ಕನಿಷ್ಠ ಮೂರು ಬಾರಿ ಮನೆ ಮನೆಗೆ ಭೇಟಿ ನೀಡಲಿದ್ದು, ಒಂದು ವೇಳೆ ಮತದಾರರು ಸಿಗದಿದ್ದ ಪಕ್ಷದಲ್ಲಿ ಮಹಜರು ಸಿದ್ದಪಡಿಸಿ ವರದಿ ನೀಡಲಿದ್ದಾರೆ. ಮತದಾರರ ಪೈಕಿ ಅವರ ಮನೆಯ 18 ವರ್ಷ ವಯಸ್ಕರು  ಸಹಿ ಮಾಡಲು ಅವಕಾಶ ಕಲ್ಪಿಸಲಾಗಿರುತ್ತದೆ. ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆಗೆ ಮತದಾರರು ಹಾಗೂ ರಾಜಕೀಯ ಪಕ್ಷಗಳು ಅಧಿಕಾರಿಗಳು ಪರಸ್ಪರ ಸಹಕಾರ ನೀಡುವುದರೊಂದಿಗೆ ಸಮಗ್ರ ಪರಿಷ್ಕರಣೆ ಪ್ರಕ್ರಿಯೆನ್ನು ಯಶಸ್ವಿಗೊಳಿಸಬೇಕು ಎಂದರು.

ಪ್ರಸ್ತುತ, ಮಂಡ್ಯ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1823 ಮತಗಟ್ಟೆಗಳಿದ್ದು, ಪುರುಷ ಮತದಾರರು 7,69,931 ಹಾಗೂ 8,05,643 ಮಹಿಳಾ ಮತದಾರರು ಹಾಗೂ 148 ತೃತೀಯ ಲಿಂಗಿ ಮತದಾರರು ಸೇರಿದಂತೆ ಒಟ್ಟು 1,57,522 ಮತದಾರರಿರುತ್ತಾರೆ. ಈ ಎಲ್ಲ ಮತಗಟ್ಟೆಗಳಿಗೆ ಮತಗಟ್ಟೆ ಮಟ್ಟದ ಅಧಿಕಾರಿಗಳನ್ನು ನೇಮಕ ಮಾಡಲಾಗಿರುತ್ತದೆ ಎಂದು ಸಭೆಯಲ್ಲಿ ಮಾಹಿತಿ ನೀಡಿದರು.

ಸಭೆಯಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಪ್ರತೀಕ ಹೆಗ್ಡೆ, ಚುನಾವಣಾ ತಹಶೀಲ್ದಾರ್  ಸಿ.ಜೆ. ರವಿಶಂಕರ್ ಹಾಗೂ ಮಂಡ್ಯ ಜಿಲ್ಲೆಯ ವಿವಿಧ ರಾಜಕೀಯ ಪಕ್ಷದ ಜಿಲ್ಲಾಧ್ಯಕ್ಷ  ಸಿ.ಡಿ. ಗಂಗಾದರ್, ಇಂಡಿಯನ್ ನ್ಯಾಷನಲ್ ಕಾಂಗ್ರೇಸ್  ಪಕ್ಷ, ಡಿ. ರಮೇಶ್, ಜನತಾದಳ (ಎಸ್), ಬೂದನೂರು ಬೊಮ್ಮಯ್ಯ, ಆಮ್ ಅದ್ಮಿ, ಶಿವಶಂಕರ್ , ಬಹುಜನ ಸಮಾಜ ಪಕ್ಷ, ಭಾರತೀಯ ಜನತಾಪಾರ್ಟಿಯ ಮಂಡ್ಯ ನಗರ ಅಧ್ಯಕ್ಷ  ಹೆಚ್ .ಬಿ. ಪ್ರಸನ್ನ ಕುಮಾರ್ ಸಿ.ಪಿ.ಐ.ಎಂ., ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ  ಸಿ. ಕುಮಾರಿ ಹಾಗೂ ಮುಖಂಡರುಗಳು  ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular