Tuesday, June 2, 2026
Google search engine

Homeರಾಜಕೀಯಡಿಕೆ ಸಿಎಂ ಬೆನ್ನಲ್ಲೇ ಸಚಿವ ಸ್ಥಾನ ಆಕಾಂಕ್ಷಿಗಳಿಗೆ ಶಾಕ್ : ಸಚಿವ ಸ್ಥಾನಕ್ಕೆ ಹೊಸ ಏಜ್...

ಡಿಕೆ ಸಿಎಂ ಬೆನ್ನಲ್ಲೇ ಸಚಿವ ಸ್ಥಾನ ಆಕಾಂಕ್ಷಿಗಳಿಗೆ ಶಾಕ್ : ಸಚಿವ ಸ್ಥಾನಕ್ಕೆ ಹೊಸ ಏಜ್ ಫಾರ್ಮುಲಾ

ನವದೆಹಲಿ : ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಅಧಿಕಾರ ಸ್ವೀಕರಿಸಲಿರುವ ಬೆನ್ನಲ್ಲೇ, ದೆಹಲಿಯಲ್ಲಿ ಸಚಿವ ಸಂಪುಟ ರಚನೆಯ ಕಸರತ್ತು ಅಂತಿಮ ಹಂತಕ್ಕೆ ತಲುಪಿದೆ. ನಿರ್ಗಮಿತ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ತಂತಮ್ಮ ಬೆಂಬಲಿಗರನ್ನು ಸಂಪುಟಕ್ಕೆ ಸೇರಿಸಲು ಪ್ರತ್ಯೇಕ ಪಟ್ಟಿ ನೀಡಿ ಕಸರತ್ತು ನಡೆಸುತ್ತಿರುವ ಬೆನ್ನಲ್ಲೇ, ಆಕಾಂಕ್ಷಿಗಳಿಗೆ ಕಾಂಗ್ರೆಸ್ ಹೈಕಮಾಂಡ್ ದಿಢೀರ್ ಬಿಗ್ ಶಾಕ್ ನೀಡಿದೆ. ಸಂಪುಟದಲ್ಲಿ ಯುವಕರು ಮತ್ತು ಹಿರಿಯ ನಾಯಕರ ನಡುವೆ ಸಮತೋಲನ ಕಾಯ್ದುಕೊಳ್ಳಲು ದೆಹಲಿ ನಾಯಕರು ಈ ಬಾರಿ ‘ಏಜ್ ಬೇಸ್ಡ್ ಫಾರ್ಮುಲಾ (ವಯೋಮಿತಿ ಆಧಾರಿತ ಸೂತ್ರ)’ ಎಂಬ ಹೊಸ ಸೂತ್ರವನ್ನು ಜಾರಿಗೆ ತಂದಿದ್ದಾರೆ.

ಹೈಕಮಾಂಡ್‌ನ ಈ ಹೊಸ ಲೆಕ್ಕಾಚಾರದ ಪ್ರಕಾರ, 40 ವರ್ಷದೊಳಗಿನ ಯುವ ಶಾಸಕರಿಗೆ ಸಂಪುಟದಲ್ಲಿ 10 ಸ್ಥಾನಗಳನ್ನು ಮೀಸಲಿಡಲು ನಿರ್ಧರಿಸಲಾಗಿದೆ. ಇನ್ನು 50 ರಿಂದ 70 ವರ್ಷದೊಳಗಿನ ಹಿರಿಯ ಮತ್ತು ಅನುಭವಿ ಶಾಸಕರಿಗೆ 20 ಸ್ಥಾನಗಳನ್ನು ನೀಡಲು ವರಿಷ್ಠರು ಮುಂದಾಗಿದ್ದಾರೆ. ಈ ದಿಢೀರ್ ಸೂತ್ರದಿಂದಾಗಿ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ದೆಹಲಿಗೆ ದಂಡಯಾತ್ರೆ ನಡೆಸಿ ಬೀಡುಬಿಟ್ಟಿರುವ ಅನೇಕ ಮಧ್ಯ ವಯಸ್ಕ ಹಾಗೂ ಹಿರಿಯ ಆಕಾಂಕ್ಷಿಗಳಲ್ಲಿ ತೀವ್ರ ಆತಂಕ ಶುರುವಾಗಿದೆ.

ಪ್ರಭಾವಿ ನಾಯಕರಾದ ಸತೀಶ್ ಜಾರಕಿಹೊಳಿ, ಎಂ.ಬಿ. ಪಾಟೀಲ್, ಡಾ. ಜಿ. ಪರಮೇಶ್ವರ್ ಅವರಂತಹ ಹಿರಿಯರ ಹೆಸರಿನ ಜೊತೆಗೆ ಯುವ ಶಾಸಕರಾದ ಪ್ರದೀಪ್ ಈಶ್ವರ್, ಯತೀಂದ್ರ ಸಿದ್ದರಾಮಯ್ಯ ಮುಂತಾದವರಿಗೂ ಮಂತ್ರಿಭಾಗ್ಯ ಒಲಿಯುವ ಸಾಧ್ಯತೆ ದಟ್ಟವಾಗಿದೆ. ಸದ್ಯ ಈ ಹೊಸ ಸೂತ್ರದ ಬೆನ್ನಲ್ಲೇ ಯಾರಿಗೆ ಸ್ಥಾನ ಸಿಗಲಿದೆ, ಯಾರು ಕೈಬಿಡಲಿದ್ದಾರೆ ಎಂಬ ಹೊಸ ಲೆಕ್ಕಾಚಾರ ಕಾಂಗ್ರೆಸ್ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

RELATED ARTICLES
- Advertisment -
Google search engine

Most Popular