ಕೆ.ಆರ್.ನಗರ : ಪ್ರತಿಯೊಬ್ಬ ಮನುಷ್ಯನು ಪ್ರಕೃತಿಯ ರಕ್ಷಣೆಗೆ ಕಂಕಣ ಬದ್ದವಾಗಿ ಕೆಲಸ ಮಾಡಿ ನಿರಂತರವಾಗಿ ಸಸಿಗಳನ್ನು ನೆಡುವ ಮೂಲಕ ಅರಣ್ಯ ರಕ್ಷಣೆಗೆ ಮುಂದಾಗಬೇಕು ಎಂದು ಹಿರಿಯ ಶ್ರೇಣಿ ನ್ಯಾಯಧೀಶ ಬಿ.ಸಿ.ಅರವಿಂದ್ರ ಹೇಳಿದರು.
ಪಟ್ಟಣದ ಆಂಜನೇಯ ಬಡಾವಣೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಗಿಡಗಳನ್ನು ನೆಟ್ಟು ಅವುಗಳಿಗೆ ನೀರುಣಿಸಿ ಆನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಗತ್ತಿನ ಸಕಲ ಜೀವ ರಾಶಿಗಳು ಬದುಕುಳಿಯಲು ಪ್ರಕೃತಿ ಮತ್ತು ಅರಣ್ಯ ಸಂಪತ್ತು ಅತ್ಯಂತ ಅವಶ್ಯಕವಾಗಿದ್ದು ಇದನ್ನಜ ಅರಿತು ನಾವೆಲ್ಲರೂ ನಡೆದುಕೊಳ್ಳಬೇಕು ಎಂದರು.
ಮನುಷ್ಯನಷ್ಟೆ ಉನ್ನತ ಸ್ಥಾನ ಮತ್ತು ಪರಿಸರ ಕಾಪಾಡುವ ಸ್ಥಾನವನ್ನು ಗಿಡಮರಗಳು ಹೊಂದಿದ್ದು ನಾವು ವೃಕ್ಷಗಳನ್ನು ದೇವರಂತೆ ಪೂಜಿಸಿ ಅವುಗಳ ಪೋಷಣೆ ಮತ್ತು ಉಳಿವಿಗೆ ಕೆಲಸ ಮಾಡುವುದರ ಜತೆಗೆ ಈ ಬಗ್ಗೆ ಇತರರಿಗೆ ಅರಿವು ಮೂಡಿಸಬೇಕೆಂದರು.
ಇತ್ತೀಚಿನ ದಿನಗಳಲ್ಲಿ ಪರಿಸರ ನಾಶದ ಪರಿಣಾಮ ಪ್ರಾಕೃತಿಕ ವಿಕೋಪಗಳು ಹೆಚ್ಚಾಗುತ್ತಿದ್ದು ಅದರ ಪರಿಣಾಮ ಸಕಾಲದಲ್ಲಿ ಮಳೆಯಾದರೆ ಬೆಲೆಯೂ ನಶಿಸಿ ಹೋಗುತ್ತಿದ್ದು ಭವಿಷ್ಯದಲ್ಲಿ ನಾವೆಲ್ಲರೂ ತಪ್ಪುಗಳನ್ನು ತಿದ್ದುಕೊಂಡು ಗಿಡ ಮರಗಳನ್ನು ನೆಟ್ಟು ಪೋಷಿಸಿ ಪರಿಸರದಲ್ಲಿ ಸಮತೋಲನ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನಮ್ಮ ವೈಯುಕ್ತಿಕ ಹಿತಾಸಕ್ತಿ ಮತ್ತು ಆಸೆಗಳನ್ನು ಪೋರೈಸಿಕೊಳ್ಳಲು ಅರಣ್ಯ ನಾಶದಂತಹಾ ಪ್ರಕೃತಿ ವಿರೋಧಿ ನೀತಿಗಳನ್ನು ಅನುಸರಿಸುತ್ತಿರುವುದರಿಂದ ಕಾಡಿನಲ್ಲಿರುವ ಪ್ರಾಣಿಗಳು ಬದುಕಿನ ಆಸರೆಯನ್ನು ಕಳೆದುಕೊಂಡು ನಾಡಿಗೆ ದಾಳಿಯಿಡುತ್ತಿರುವುದರಿಂದ ಮಾನವ ಮತ್ತು ಪ್ರಾಣಿಗಳ ನಡುವೆ ಸಂರ್ಘಷ ನಡೆದು ಸಾವು ನೋವುಗಳು ಸಂಭವಿಸುತ್ತಿದ್ದು ಇದು ಜನರ ಭವಿಷ್ಯ ಮತ್ತು ನಾಶಕ್ಕೆ ಕಾರಣವಾಗುತ್ತಿದೆಂದು ಆತಂಕ ವ್ಯಕ್ತಪಡಿಸಿದರು.
ಬಿಇಒ ಆರ್.ಕೃಷ್ಣಪ್ಪ, ಶಾಲಾ ಮುಖ್ಯಶಿಕ್ಷಕಿ ಲತಾ, ಹಿರಿಯ ವಕೀಲ ಶಿವಮೂರ್ತಿ, ವಲಯ ಅರಣ್ಯಾಧಿಕಾರಿ ಜಿ.ಮಂಜು, ಉಪವಲಯ ಅರಣ್ಯಾಧಿಕಾರಿಗಳಾದ ಮಂಜುನಾಥ್ ಆರಾಧ್ಯ, ಸಂಪತ್ ಕುಮಾರ್, ಪ್ರಸನ್ನಕುಮಾರ್, ಗಸ್ತು ಅರಣ್ಯ ಪಾಲಕ ರಯಾಜ್ ಆಹಮದ್, ಟಿ.ಕೃಷ್ಣ, ಚಾಲಕ ಮಂಜುನಾಥ್, ಸಿಆರ್ ಪಿ ಹೆಚ್.ಎಸ್.ಹರಿಪ್ರಸಾದ್ ಸೇರಿದಂತೆ ಮತ್ತಿತರರು ಇದ್ದರು.



