Saturday, June 27, 2026
Google search engine

Homeರಾಜ್ಯಸುದ್ದಿಜಾಲಸರ್ವಜನಾಂಗದ ಶಾಂತಿ ತೋಟ ಕಂಡಿದ್ದ ಕೆಂಪೇಗೌಡರು: ಶ್ರೀ ಸೋಮೇಶ್ವರನಾಥ ಸ್ವಾಮೀಜಿ

ಸರ್ವಜನಾಂಗದ ಶಾಂತಿ ತೋಟ ಕಂಡಿದ್ದ ಕೆಂಪೇಗೌಡರು: ಶ್ರೀ ಸೋಮೇಶ್ವರನಾಥ ಸ್ವಾಮೀಜಿ

ಮೈಸೂರು: ರಾಷ್ಟ್ರಕವಿ ಕುವೆಂಪು ಅವರ ಸರ್ವಜನಾಂಗದ ಶಾಂತಿಯ ತೋಟವನ್ನು ಕಂಡಿದ್ದವರು ಕೆಂಪೇಗೌಡರು, ಅಂತಹವರನ್ನು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಎಲ್ಲರೂ ಮಾಡಬೇಕೆಂದು ಶ್ರೀ ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಹೇಳಿದರು.

ಜಿಲ್ಲಾಡಳಿತ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ಮಹಾನಗರ ಪಾಲಿಕೆ ಹಾಗೂ ಶ್ರೀ ಕೆಂಪೇಗೌಡ ಜಯಂತೋತ್ಸವ ಸಮಿತಿ ವತಿಯಿಂದ ಕರ್ನಾಟಕ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ನಾಡಪ್ರಭು ಶ್ರೀ ಕೆಂಪೇಗೌಡರ 517ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮೈಸೂರು ಸಾಂಸ್ಕೃತಿಕ ಸುಂದರ ನಗರ. ಮೈಸೂರಿಗೆ ಜಯಚಾಮರಾಜೇಂದ್ರರವರ ಸಂಕಲ್ಪದ ಹಾಗಿಯೇ ಈಗಲೂ ಇದೆ. ಅಂತೆಯೇ 500 ವರ್ಷಗಳ ಹಿಂದೆಯೇ ಬೆಂಗಳೂರನ್ನು ಚಿತ್ರಿಸುವ ಸಂಕಲ್ಪ ಮಾಡಿದವರು ಕೆಂಪೇಗೌಡರು. ಅಂದೇ ಬೆಂಗಳೂರಿಗೆ ಎಲ್ಲರನ್ನೂ ಕರೆತಂದು ನೆಲೆಸುವಂತೆ ಮಾಡಿದವರು. ಅಂತಹ ದಾರ್ಶನಿಕರನ್ನು ಮುಂದಿನ ಪೀಳಿಗೆಗೆ ತೋರಿಸಬೇಕಿದೆ. ಎಲ್ಲಾ ಸಮುದಾಯಗಳಿಗೂ ನೆಲೆ ಕಲ್ಪಿಸುವ ಸಾಧನೆ ಮಾಡಿ ತೋರಿದ್ದಾರೆಂಬುದನ್ನು ಮನವರಿಕೆ ಮಾಡಲು ಜಯಂತಿ ಅತ್ಯವಶ್ಯಕ. 480 ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸುವ ಸುಲಭದ ಮಾತಲ್ಲ. ಆದರೂ ಸಮುದಾಯ ಮಾಡುತ್ತಿದೆ. ಮುಂದೆ ವಿವಿಧ ಕ್ಷೇತ್ರಗಳನ್ನು ಪ್ರವೇಶಿಸಿ ನಾಡನ್ನು ಆಳಿ ಎಂದು ಪ್ರೋತ್ಸಾಹಿಸುವ ಕೆಲಸ ಆಗುತ್ತಿದೆ. ಕೆಂಪೇಗೌಡರಂತಹ ನಾಯಕರು ಆಳಿದ ನಾಡಿನಲ್ಲಿ ಅಂತಹ ದಾರ್ಶನಿಕರನ್ನು ಮಾರ್ಗದರ್ಶಿಗಳನ್ನಾಗಿಸಿಕೊಂಡು ಮುಂದೆ ಸಾಗೋಣ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಕೆ.ಹರೀಶ್ ಗೌಡ ಮಾತನಾಡಿ, ಕೆಂಪೇಗೌಡರು ರಾಜ್ಯದ ದಂತಕಥೆ. ಕೆಂಪೇಗೌಡರು ಬೆಂಗಳೂರನ್ನ ಕಟ್ಟಿದ ರೀತಿ ಎಲ್ಲಾ ಕಾಲಕ್ಕೂ ಮಾದರಿ ಎಂದೆನಿಸಿದೆ. ಸಹಬಾಳ್ವೆಯಲ್ಲಿ ನಂಬಿಕೆಯಿಟ್ಟು ನಾಡನ್ನ ಕಟ್ಟಿದವರು. ಆರಂಭದಲ್ಲಿ ಮೈಸೂರಲ್ಲಿ 70 ಸಾವಿರ ಜನರನ್ನು ಒಗ್ಗೂಡಿಸಿ ಕೆಂಪೇಗೌಡರ ಜಯಂತಿ ಕಾರ್ಯಕ್ರಮ ಮಾಡಿದ್ದೆವು. ಅದನ್ನ ಮನಗಂಡ ಸರ್ಕಾರ ಕೇಪೇಗೌಡರ ಜಯಂತಿಯನ್ನು ಸರ್ಕಾರದವತಿಯಿಂದ ಮಾಡುವಂತೆ ಆದೇಶ ಮಾಡಿತು. ಈಗ ನಮ್ಮ ಸಮುದಾಯದ ನಾಯಕ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಿರುವುದು ಹೆಮ್ಮೆಯ ಸಂಗತಿ. ಸಮುದಾಯದಲ್ಲಿರುವ ಬಡವರಿಗೆ ಅನೂಕೂಲ ಆಗಬೇಕೆಂದು ಹೋಬಳಿಗೊಂಡು ಕೆಂಪೇಗೌಡರ ಭವನ ನಿರ್ಮಾಣ ಮಾಡುವಂತೆ ನೂತನ ಮುಖ್ಯಮಂತ್ರಿಗಳಿಗೆ ಎಲ್ಲರೂ ಮನವಿ ಮಾಡಿದ್ದೇವೆ. ಆದಷ್ಟು ಬೇಗ ಅದು ಜಾರಿಗೊಳ್ಳುವ ವಿಶ್ವಾಸವಿದೆ. ಕೆಂಪೇಗೌಡರು ಯಾವುದೇ ಒಂದು ಸಮುದಾಯಕ್ಕೆ ಸೀಮಿತರಾದವರಲ್ಲ. ಎಲ್ಲಾ ಸಮುದಾಯದವರಿಗೂ ಅನುಕೂಲವಾಗುವಂತೆ ಕೆರೆ, ಕಲ್ಯಾಣಿ ಹಾಗೂ ಪ್ರತ್ಯೇಕ ಬಡಾವಣೆಗಳನ್ನು (ಪೇಟೆಗಳು) ನಿರ್ಮಿಸಿಕೊಟ್ಟಂತಹ ದೂರದರ್ಶಿ ಮತ್ತು ಮಹಾನ್ ಮಾನವತಾವಾದಿ ಆಗಿರುವರೆಂದರು.

ಕುವೆಂಪುನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಹಾ.ವಾಸುಬೋರೇಗೌಡ ಇಡೀ ಬದುಕನ್ನು ಬೇರೆಯವರಿಗಾಗಿಯೇ ಮುಡಿಪಾಗಿಟ್ಟವರು ಕೆಂಪೇಗೌಡರಾಗಿದ್ದು, ಜಾತಿ, ಧರ್ಮ, ಮತ ಭಾಷೆಯ ಸಂಕೀರ್ಣ ಮೀರಿ ದೂರದೃಷ್ಠಿ, ಬಹುತ್ವ ಅವರದ್ದಾಗಿತ್ತು. ಸೊಸೆಯನ್ನು ನೀರಿಗಾಗಿ ಬಲಿಕೊಡಬೇಕೆಂದಾಗಿ ಅದನ್ನು ವಿರೋಧಿಸಿ ಮೌಢ್ಯವನ್ನು ವಿರೋಧಿಸಿದ್ದರು. ಇಂದು ಬೆಂಗಳೂಋಲ್ಲಿ ಗೂಗಲ್‌ ಜಿಪಿಎಸ್ ನಲ್ಲಿ ವಿಳಾಸ ಹುಡುಕುತ್ತಿದ್ದೇವೆ. ಕೆಂಪೇಗೌಡರು ಅಕ್ಕಿಪೇಟೆ, ಬಳೆ ಪೇಟೆಗೆ ಹೆಸರಲ್ಲೇ ವಸ್ತು ಸಿಗುವ ಜಾಗ ಕಾಣುವಂತೆ ಮಾಡಿದ್ದರು. ಸಾವಿರ ಕೆರೆಗಳನ್ನು ನಿರ್ಮಿಸಿದರು. ಅಂದಿನ ಕೆರೆಗಳು ಇಂದು ಅನ್ಯ ವಿಚಾರಗಳಿಗೆ ಬಳಕೆಯಾಗಿವೆ. ದೇಶದಲ್ಲೇ ಎಲ್ಲರೂ ಬೆಂಗಳೂರಿನತ್ತ ತಿರುಗಿ ನೋಡುವಂತೆ ಮಾಡಿದ್ದರೆ ಅದಕ್ಕೆ ಕಾರಣ ಕೆಂಪೇಗೌಡರ ಸಾಧನೆ ಅದಕ್ಕಾಗಿ ಅಂತರಾಷ್ಟ್ರೀಯ ನಿಲ್ದಾಣಕ್ಕೆ ಅವರ ಹೆಸರಿಡಲಾಗಿದ್ದು, ಅವರ ಆದರ್ಶಗಳನ್ನು ಅರಿಯುವ ಕೆಲಸ ಮಾಡಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ 480 ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರದ 36 ಮಂದಿ ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ನ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ರಘು ಕೌಟಿಲ್ಯ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ರಾಮಪ್ಪ, ಜಿಲ್ಲಾಧಿಕಾರಿಗಳಾದ ಜಿ.ಲಕ್ಷ್ಮೀಕಾಂತ ರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಕೆಂಪೇಗೌಡ ಜಯಂತೋತ್ಸವ ಸಮಿತಿಯ ಅಧ್ಯಕ್ಷ ಪ್ರಶಾಂತ್ ಗೌಡ, ರಾಜ್ಯ ಒಕ್ಕಲಿಗರ ಸಂಘದ ಪ್ರದಾನ ಕಾರ್ಯದರ್ಶಿ ಸಿ.ಜಿ.ಗಂಗಾಧರ್‌, ಖಜಾಂಚಿ ಕೆ.ವಿ.ಶ್ರೀಧರ್‌, ನಿರ್ದೇಶಕ ಎಂ.ಬಿ.ಮಂಜೇಗೌಡ, ನಗರಪಾಲಿಕೆ ಮಾಜಿ ಸದಸ್ಯರಾದ ಪ್ರೇಮಾಶಂಕರೇಗೌಡ, ಎಸ್.ಬಿ.ಎಂ.ಮಂಜು, ಮೈಸೂರು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಮರಿಸ್ವಾಮಿ,ಗೌರವಾಧ್ಯಕ್ಷ ಆಲತೂರು ಜಯರಾಮ್ ಉಪಾಧ್ಯಕ್ಷ ರವಿಕುಮಾರ್ ರಾಜಕೀಯ, ಬನ್ನೂರು ಮಹೇಶ್‌, ಪ್ರಧಾನ ಕಾರ್ಯದರ್ಶಿ ಎಂ.ಈ.ಚೇತನ್, ನಿರ್ದೇಶಕರಾದ ಒಂಟಿಕೊಪ್ಪಲು ಗುರುರಾಜ್‌, ರವಿ, ಬಿ.ಪಿ.ಬೋರೇಗೌಡ, ಗಿರೀಶ್‌ ಗೌಡ, ಜಿ.ಕುಮಾರ್‌ ಗೌಡ, ಎಂ.ಸುಶೀಲ ನಂಜಪ್ಪ, ಉಮೇಶ್, ಸಮುದಾಯದ ಮುಖಂಡರಾದ ಬೀಡನಹಳ್ಳಿ ಸತೀಶ್ ಗೌಡ, ಕರ್ನಾಟಕ ಕಾವಲುಪಡೆ ಅಧ್ಯಕ್ಷ ಮೋಹನ್‌ ಕುಮಾರ್‌ ಗೌಡ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯೆ ಲಕ್ಷ್ಮಿದೇವಿ, ಮೈಮುಲ್‌ ನಿರ್ದೇಶಕ ಊಮಾಶಂಕರ್‌, ರಾಕೇಶ್‌ ಗೌಡ, ತಾಲ್ಲೂಕು ಒಕ್ಕಲಿಗರ ಸಂಘದ ಕೃಷ್ಣೇಗೌಡ, ಕೆ.ಜಿ.ಕೊಪ್ಪಲು ರಾಜಣ್ಣ, ಜೆ.ಪಿ.ನಗರ ಕೃಷ್ಣ, ನಿವೃತ್ತ ಪೊಲೀಸ್‌ ಅಧಿಕಾರಿ ಮರಿಗೌಡ, ಮಾಜಿ ಮೇಯರ್ ಆರ್.ಲಿಂಗಪ್ಪ, ಕಾವಲುಪಡೆ ರಾಜ್ಯಧ್ಯಕ್ಷ ಮೋಹನ್ ಕುಮಾರ್ ಗೌಡ, ಮಂಚೇಗೌಡನ ಕೊಪ್ಪಲು ರವಿ, ಸುಮಿತ್ರಾ ರಮೇಶ್, ಹೇಮಾ ನಂದೀಶ್, ತೇಜೇಸ್ ಲೋಕೇಶ್ ಗೌಡ, ಬಿಜೆಪಿ ಮುಖಂಡ ದಿನೇಶಗೌಡ, ಶಿವಶಂಕರ್ ಇನ್ನಿತರರು ಉಪಸ್ಥಿತರಿದ್ದರು.

ಕಲಾತಂಡಗಳ ಮೆರುಗು ಸ್ತಬ್ದಚಿತ್ರಗಳ ಸಾಲು ನಗಾರಿ ಸದ್ದು, ಸಿಂಗಾರಗೊಂಡ ಜೋಡೆತ್ತಿನ ಮೆರವಣಿಗೆ ನಗರದ ರಸ್ತೆಗಳಲ್ಲಿ ಸಂಚರಿಸಿದ ಎತ್ತಿನ ಗಾಡಿ ಮೇಲೆ ನಿಂತಿದ್ದ ಮಹಿಳೆಯರ ಸಂಭ್ರಮದ ಕೆಂಪೇಗೌಡ ಜಯಂತಿ ಮೆರವಣಿಗೆ ಮಿನಿ ದಸರೆಯನ್ನು ನೆನಪಿಸಿತು.
ಕೆಂಪೇಗೌಡರ 517ನೇ ಜಯಂತಿ ಅಂಗವಾಗಿ ಆಲನಹಳ್ಳಿಯ ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬೈಕ್‌ ರ್ಯಾಲಿ ಮೂಲಕ ಕೋಟೆ ಆಂಜನೇಯ ದೇವಾಲಯಕ್ಕೆ ಬಂದು ಸೇರಿದರು. ಅಲ್ಲಿ ಗಣ್ಯರು ಬೆಳ್ಳಿ ರಥದ ಮೇಲಿನ ಕೆಂಪೇಗೌಡರ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ವೈಭವದ ಚಾಲನೆ ನೀಡಿದರು. ಈ ವೇಳೆ ಶಾಸಕ ಕೆ.ಹರೀಶ್‌ ಗೌಡ, ಮಾಜಿ ಸಂಸದ ಪ್ರತಾಪಸಿಂಹ, ಮಾಜಿ ಶಾಸಕ ಎಲ್‌.ನಾಗೇಂದ್ರ, ಜಿಪಂ ಮಾಜಿ ಸದಸ್ಯ ಮಾದೇಗೌಡ ಸೇರಿ ಹಲವರು ಕುಣಿದು ಗಮನ ಸೆಳೆದರು.

ದಸರಾ ಜಂಬೂಸವಾರಿ ನೆನಪಿಸಿದ ಮೆರವಣಿಗೆ

ಕಲಾತಂಡಗಳ ಮೆರುಗು ಸ್ತಬ್ದಚಿತ್ರಗಳ ಸಾಲು ನಗಾರಿ ಸದ್ದು, ಸಿಂಗಾರಗೊಂಡ ಜೋಡೆತ್ತಿನ ಮೆರವಣಿಗೆ ನಗರದ ರಸ್ತೆಗಳಲ್ಲಿ ಸಂಚರಿಸಿದ ಎತ್ತಿನ ಗಾಡಿ ಮೇಲೆ ನಿಂತಿದ್ದ ಮಹಿಳೆಯರ ಸಂಭ್ರಮದ ಕೆಂಪೇಗೌಡ ಜಯಂತಿ ಮೆರವಣಿಗೆ ಮಿನಿ ದಸರೆಯನ್ನು ನೆನಪಿಸಿತು.
ಕೆಂಪೇಗೌಡರ 517ನೇ ಜಯಂತಿ ಅಂಗವಾಗಿ ಆಲನಹಳ್ಳಿಯ ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬೈಕ್‌ ರ್ಯಾಲಿ ಮೂಲಕ ಕೋಟೆ ಆಂಜನೇಯ ದೇವಾಲಯಕ್ಕೆ ಬಂದು ಸೇರಿದರು. ಅಲ್ಲಿ ಗಣ್ಯರು ಬೆಳ್ಳಿ ರಥದ ಮೇಲಿನ ಕೆಂಪೇಗೌಡರ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ವೈಭವದ ಚಾಲನೆ ನೀಡಿದರು. ಈ ವೇಳೆ ಶಾಸಕ ಕೆ.ಹರೀಶ್‌ ಗೌಡ, ಮಾಜಿ ಸಂಸದ ಪ್ರತಾಪಸಿಂಹ, ಮಾಜಿ ಶಾಸಕ ಎಲ್‌.ನಾಗೇಂದ್ರ, ಜಿಪಂ ಮಾಜಿ ಸದಸ್ಯ ಮಾದೇಗೌಡ ಸೇರಿ ಹಲವರು ಕುಣಿದು ಗಮನ ಸೆಳೆದರು.

ಕೆಂಪೇಗೌಡ ಸೇರಿ ಒಕ್ಕಲಿಗರ ಮೂಲ ಇತಿಹಾಸ ಸಾರುವ ಗಂಗ ಸಾಮ್ರಾಜ್ಯ ಕುರಿತು ತಿಳಿಸಿದ ಸ್ತಬ್ಧಚಿತ್ರವೂ ಸೇರಿ ನಾಲ್ಕು ಸ್ತಬ್ಧಚಿತ್ರ ಎಲ್ಲರ ಗಮನ ಸೆಳೆಯಿತು. ದಕ್ಷಿಣ ಕನ್ನಡ ಜಿಲ್ಲೆಯ ಪಟ್ಟೆ ಹುಲಿ ವೇಷಧಾರಿಗಳ ಕುಣಿತ, ಕೇರಳದ ಗೊಂಬೆ ಕುಣಿತ, ಕೇರಳದ ಚಂಡೆ, ಭದ್ರಾವತಿ ಬ್ಯಾಂಡ್‌, ಮಹಿಳೆಯರ ವೀರಗಾಸೆ ಕುಣಿತ, ತಮಟೆ ವಾದ್ಯ, ಹಳ್ಳಿಕಾರ್‌ ಹೋರಿಗಳ ಮೆರವಣಿಗೆ, ಐದಕ್ಕೂ ಹೆಚ್ಚು ಎತ್ತಿನ ಗಾಡಿಯಲ್ಲಿ ಸಾಗಿ ಬಂದ ಮಹಿಳೆಯರು ಬೆಳ್ಳಿಗ್ಗೆ ೯ಕ್ಕೆ ಹೊರ ಮೆರವಣಿಗೆಯೂ ಕೆ.ಆರ್‌.ವೃತ್ತ, ಅರಸು ರಸ್ತೆ, ಮೆಟ್ರೊಪೊಲೊ ವೃತ್ತ ಹಾಗೂ ಹುಣಸೂರು ರಸ್ತೆ ಮಾರ್ಗವಾಗಿ ಮೂರು ತಾಸುಗಳ ಮೆರವಣಿಗೆಯಲ್ಲಿ ಸಾಗಿ ಜಂಬೂ ಸವಾರಿ ಮೆರವಣಿಗೆ ನೆನೆಯುವಂತೆ ಮಾಡಿದ್ದು ವಿಶೇಷ.

RELATED ARTICLES
- Advertisment -
Google search engine

Most Popular