Friday, July 3, 2026
Google search engine

Homeರಾಜಕೀಯರಾಜ್ಯದಲ್ಲಿ 7,925 ಪೊಲೀಸ್ ಹುದ್ದೆಗಳ ನೇಮಕ ; KEA ಮೂಲಕ ಪಾರದರ್ಶಕ ಪ್ರಕ್ರಿಯೆ : ಪ್ರಿಯಾಂಕ್...

ರಾಜ್ಯದಲ್ಲಿ 7,925 ಪೊಲೀಸ್ ಹುದ್ದೆಗಳ ನೇಮಕ ; KEA ಮೂಲಕ ಪಾರದರ್ಶಕ ಪ್ರಕ್ರಿಯೆ : ಪ್ರಿಯಾಂಕ್ ಖರ್ಗೆ

ಬೆಂಗಳೂರು : ರಾಜ್ಯ ಪೊಲೀಸ್ ಇಲಾಖೆಯನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ 2026-27 ನೇ ಸಾಲಿನಲ್ಲಿ ಒಟ್ಟು 7,925 ಪೊಲೀಸ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಈ ನೇಮಕಾತಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮೂಲಕ ಸಂಪೂರ್ಣ ಪಾರದರ್ಶಕವಾಗಿ ನಡೆಸಲಾಗುತ್ತಿದೆ ಎಂದು ಹೇಳಿದ ಅವರು, ಒಟ್ಟು ಹುದ್ದೆಗಳ ಪೈಕಿ 1,639 ಹುದ್ದೆಗಳು ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಮೀಸಲಾಗಿದ್ದು, ಉಳಿದ ಹುದ್ದೆಗಳು ರಾಜ್ಯದ ಇತರೆ ಭಾಗಗಳಿಗೆ ಹಂಚಿಕೆ ಮಾಡಲಾಗಿದೆ.

ಈ ನೇಮಕಾತಿಯಲ್ಲಿ ಡಿಟೆಕ್ಟಿವ್ ಸಬ್‌ ಇನ್‌ಸ್ಪೆಕ್ಟರ್, ಸಶಸ್ತ್ರ ಪೊಲೀಸ್ ಕಾನ್‌ಸ್ಟೆಬಲ್, ನಾಗರಿಕ ಪೊಲೀಸ್ ಕಾನ್‌ಸ್ಟೆಬಲ್, ವಿಶೇಷ ಮೀಸಲು ಪೊಲೀಸ್ (CAR) ಕಾನ್‌ಸ್ಟೆಬಲ್ ಸೇರಿದಂತೆ ವಿವಿಧ ಹುದ್ದೆಗಳು ಒಳಗೊಂಡಿವೆ. ನಾಗರಿಕ ಮತ್ತು ಸಶಸ್ತ್ರ ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅರ್ಹ ಅಭ್ಯರ್ಥಿಗಳು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸುವಂತೆ ಗೃಹ ಸಚಿವರು ಮನವಿ ಮಾಡಿದ್ದಾರೆ.

ಇದೇ ವೇಳೆ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 10 ಹೊಸ ಪೊಲೀಸ್ ಠಾಣೆಗಳ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಯೋಜನೆಗೆ 30 ಕೋಟಿ ರೂಪಾಯಿ ಅನುದಾನ ಮಂಜೂರಾಗಿದೆ. ಉಪ್ಪಿನಂಗಡಿ, ಕುಂದಗೋಳ, ಅರಸೀಕೆರೆ ಗ್ರಾಮಾಂತರ, ಸುರಪುರ, ಮುದ್ದೇಬಿಹಾಳ, ಕುಷ್ಟಗಿ, ಸಿರವಾರ, ಸಕಲೇಶಪುರ ಗ್ರಾಮಾಂತರ, ಬಸವನ ಬಾಗೇವಾಡಿ ಹಾಗೂ ಹುಣಸೂರು ಗ್ರಾಮಾಂತರ ಠಾಣೆಗಳಿಗೆ ಆಧುನಿಕ ಕಟ್ಟಡಗಳು ನಿರ್ಮಿಸಲಾಗುವುದು.

ಈ ಹೊಸ ಮೂಲಸೌಕರ್ಯದಿಂದ ಪೊಲೀಸ್ ಸೇವೆಗಳ ಕಾರ್ಯಕ್ಷಮತೆ ಹೆಚ್ಚಾಗಲಿದೆ ಮತ್ತು ಸಾರ್ವಜನಿಕರಿಗೆ ವೇಗವಾದ ಸೇವೆ ಒದಗಿಸಲು ಸಾಧ್ಯವಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ. ರಾಜ್ಯದಲ್ಲಿ ಭದ್ರತಾ ವ್ಯವಸ್ಥೆಯನ್ನು ಬಲಪಡಿಸಲು ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular