Sunday, July 5, 2026
Google search engine

Homeಸ್ಥಳೀಯಜು.6-7 ಹಲವೆಡೆ ವಿದ್ಯುತ್‌ ವ್ಯತ್ಯಯ

ಜು.6-7 ಹಲವೆಡೆ ವಿದ್ಯುತ್‌ ವ್ಯತ್ಯಯ

ಮೈಸೂರು : ಮೈಸೂರಿನ ಕೆಲವು ಏರಿಯಾದಲ್ಲಿ ಎರಡು ದಿನಗಳ ಕಾಲ ವಿದ್ಯುತ್ ಸಂಪರ್ಕ ಇರುವುದಿಲ್ಲ . ಭೂಗತ ವಿದ್ಯುತ್ ಕೇಬಲ್ ಅಳವಡಿಕೆ ಮತ್ತು ತುರ್ತು ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ವಿದ್ಯುತ್ ಇಲಾಖೆಯು ಪವರ್ ಕಟ್ ಘೋಷಿಸಿದ್ದು, ಇದರಿಂದ ನೂರಾರು ಮನೆಗಳು ಹಾಗೂ ವ್ಯಾಪಾರ ಸಂಸ್ಥೆಗಳ ಮೇಲೆ ಬಿಸಿ ತಟ್ಟಲಿದೆ. ಜುಲೈ 6 ರಿಂದ ಜುಲೈ 7 ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಯಾವ ದಿನ ಯಾವ ಪ್ರದೇಶದಲ್ಲಿ ಕರೆಂಟ್ ಇರುವುದಿಲ್ಲ ಎಂಬವಿವರ ಇಲ್ಲಿದೆ.

ಜುಲೈ 6 (ಕನಕಗಿರಿ ಫೀಡರ್ ವ್ಯಾಪ್ತಿ)
ಕನಕಗಿರಿ, ಸುಯೇಜ್ ಫಾರಂ ರಸ್ತೆ, ಆಟೋ ಸ್ಟ್ಯಾಂಡ್, ರಾಮಕೃಷ್ಣ ಆಸ್ಪತ್ರೆ ರಸ್ತೆ, ಭೈರವೇಶ್ವರ ನಗರ, ದತ್ತನಗರ, ಮುನೇಶ್ವರನಗರ ಮತ್ತು ಗುಂಡುರಾವ್ ನಗರದ ನಿವಾಸಿಗಳು ತೊಂದರೆ ಅನುಭವಿಸಬೇಕಾಗುತ್ತದೆ.

ಜುಲೈ 7 (ಭುವನೇಶ್ವರಿ ಫೀಡರ್ ವ್ಯಾಪ್ತಿ)
ಲಾರಿ ಸ್ಟ್ಯಾಂಡ್, ಚಾಮುಂಡಿಬೆಟ್ಟದ ಪಾದ, ಜಾಕಿ ಕ್ವಾರ್ಟರ್ಸ್, ಚಾಮುಂಡಿ ಬೆಟ್ಟ, ತಾವರೆಕಟ್ಟೆ, ದೇವಿಕೆರೆ ಮತ್ತು ಕಸ್ತೂರಿ ನಿವಾಸ ಹೋಟೆಲ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ.
ವಿದ್ಯುತ್ ಇಲಾಖೆಯು ಕಾಮಗಾರಿಯನ್ನು ಸುಗಮವಾಗಿ ಪೂರ್ಣಗೊಳಿಸಲು ಸಾರ್ವಜನಿಕರ ಸಹಕಾರ ಕೋರಿದೆ.ಕಾಮಗಾರಿ ಮುಗಿಯುತ್ತಿದ್ದಂತೆಯೇ ವಿದ್ಯುತ್ ಮರುಸ್ಥಾಪನೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular