ಮೈಸೂರು: ಮೈಸೂರು ಜಿಲ್ಲೆಯಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026 (SIR) ಪ್ರಕ್ರಿಯೆಯು ಅತ್ಯಂತ ಚುರುಕಿನಿಂದ ಸಾಗಿದ್ದು ಜಿಲ್ಲೆಯಲ್ಲಿ ಜುಲೈ 8 ರವೆರೆಗೆ 23,49,006 ಎನ್ಯುಮರೇಷನ್ ಫಾರ್ಮ್‌ಗಳನ್ನು ವಿತರಿಸಲಾಗಿದ್ದು,ಶೇ 83.90% ರಷ್ಟು ಸಾಧನೆಯಾಗಿರುತ್ತದೆ.
ಜಿಲ್ಲೆಯಲ್ಲಿ ಒಟ್ಟು 27,99,693 ಮತದಾರರಿದ್ದು, 2,915 ಮತಗಟ್ಟೆಗಳು ಇರುತ್ತದೆ. ಜಿಲ್ಲೆಯಲ್ಲಿ ಮತಗಟ್ಟೆಗಳ ಪೈ ಕಿ 927 (31.80%) ಮತಗಟ್ಟೆಗಳಲ್ಲಿ 100% ಫಾರ್ಮ್ ವಿತರಣೆ ಆಗಿದೆ.726 (24.90%) ಮತಗಟ್ಟೆಗಳಲ್ಲಿ 90% ಕ್ಕಿಂತ ಅಧಿಕ ವಿತರಣೆಯಾಗಿದೆ.
11,419 ಮತದಾರರು ಸ್ವತಃ ಆನ್‌ಲೈನ್ ಮೂಲಕ ಫಾರ್ಮ್‌ಗಳನ್ನು ಸಲ್ಲಿಸಿದ್ದಾರೆ.
ಜಿಲ್ಲೆಯಲ್ಲಿ ವಿತರಿಸಲಾದ ಫಾರ್ಮ್‌ಗಳ ಪೈಕಿ ಇದುವರೆಗೆ ಒಟ್ಟು 1,13,643 ನಮೂನೆಗಳನ್ನು ಗಣಕೀಕರಣಗೊಳಿಸಲಾಗಿದೆ.
- ಪಿರಿಯಾಪಟ್ಟಣ ಕ್ಷೇತ್ರದಲ್ಲಿ ಒಟ್ಟು 1,99,706 ಮತದಾರರ ಪೈಕಿ 1,94,998 ನಮೂನೆಗಳನ್ನು ವಿತರಿಸಲಾಗಿದ್ದು, 16,760 ಗಣಕೀಕೃತಗೊಂಡಿವೆ.
- ಕೃಷ್ಣರಾಜನಗರ ಕ್ಷೇತ್ರದಲ್ಲಿ ಒಟ್ಟು 2,20,922 ಮತದಾರರ ಪೈಕಿ 1,99,931 ನಮೂನೆಗಳನ್ನು ವಿತರಿಸಲಾಗಿದ್ದು, 8,323 ಗಣಕೀಕೃತಗೊಂಡಿವೆ.
- ಹುಣಸೂರು ಕ್ಷೇತ್ರದಲ್ಲಿ ಒಟ್ಟು 2,53,248 ಮತದಾರರ ಪೈಕಿ 2,46,013 ನಮೂನೆಗಳನ್ನು ವಿತರಿಸಲಾಗಿದ್ದು, 16,288 ಗಣಕೀಕೃತಗೊಂಡಿವೆ.
- ಹೆಚ್.ಡಿ. ಕೋಟೆ ಕ್ಷೇತ್ರದಲ್ಲಿ ಒಟ್ಟು 2,34,521 ಮತದಾರರ ಪೈಕಿ 2,21,159 ನಮೂನೆಗಳನ್ನು ವಿತರಿಸಲಾಗಿದ್ದು, 16,258 ಗಣಕೀಕೃತಗೊಂಡಿವೆ.
- ನಂಜನಗೂಡು ಕ್ಷೇತ್ರದಲ್ಲಿ ಒಟ್ಟು 2,23,279 ಮತದಾರರ ಪೈಕಿ 2,09,745 ನಮೂನೆಗಳನ್ನು ವಿತರಿಸಲಾಗಿದ್ದು, 11,945 ಗಣಕೀಕೃತಗೊಂಡಿವೆ.
- ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಒಟ್ಟು 3,57,327 ಮತದಾರರ ಪೈಕಿ 2,95,876 ನಮೂನೆಗಳನ್ನು ವಿತರಿಸಲಾಗಿದ್ದು, 8,864 ಗಣಕೀಕೃತಗೊಂಡಿವೆ.
- ಕೃಷ್ಣರಾಜ ಕ್ಷೇತ್ರದಲ್ಲಿ ಒಟ್ಟು 2,63,632 ಮತದಾರರ ಪೈಕಿ 1,73,510 ನಮೂನೆಗಳನ್ನು ವಿತರಿಸಲಾಗಿದ್ದು, 2,300 ಗಣಕೀಕೃತಗೊಂಡಿವೆ.
- ಚಾಮರಾಜ ಕ್ಷೇತ್ರದಲ್ಲಿ ಒಟ್ಟು 2,64,045 ಮತದಾರರ ಪೈಕಿ 1,76,266 ನಮೂನೆಗಳನ್ನು ವಿತರಿಸಲಾಗಿದ್ದು, 2,514 ಗಣಕೀಕೃತಗೊಂಡಿವೆ.
- ನರಸಿಂಹರಾಜ ಕ್ಷೇತ್ರದಲ್ಲಿ ಒಟ್ಟು 3,27,898 ಮತದಾರರ ಪೈಕಿ 2,14,468 ನಮೂನೆಗಳನ್ನು ವಿತರಿಸಲಾಗಿದ್ದು, 7,424 ಗಣಕೀಕೃತಗೊಂಡಿವೆ.
- ವರುಣಾ ಕ್ಷೇತ್ರದಲ್ಲಿ ಒಟ್ಟು 2,42,363 ಮತದಾರರ ಪೈಕಿ 2,26,474 ನಮೂನೆಗಳನ್ನು ವಿತರಿಸಲಾಗಿದ್ದು, 13,964 ಗಣಕೀಕೃತಗೊಂಡಿವೆ.
- ಟಿ. ನರಸೀಪುರ ಕ್ಷೇತ್ರದಲ್ಲಿ ಒಟ್ಟು 2,12,752 ಮತದಾರರ ಪೈಕಿ 1,90,566 ನಮೂನೆಗಳನ್ನು ವಿತರಿಸಲಾಗಿದ್ದು, 9,003 ಗಣಕೀಕೃತಗೊಂಡಿವೆ.
ಮನೆ ಮನೆ ಭೇಟಿಯ ಸಂದರ್ಭದಲ್ಲಿ ಮತದಾರರ ಪಟ್ಟಿಯಲ್ಲಿದ್ದ ದೋಷಗಳನ್ನು ಗುರುತಿಸಲಾಗುತ್ತಿದ್ದು, ಗೈರುಹಾಜರಾದ ಮತದಾರರು- 2,873, ಶಾಶ್ವತವಾಗಿ ಸ್ಥಳಾಂತರಗೊಂಡವರು-1,033, ಮರಣ ಹೊಂದಿದ ಮತದಾರರು- 362, ಈಗಾಗಲೇ ಹೆಸರು ನೋಂದಾಯಿತವಾಗಿರುವವರು -51, ಇತರ ಪ್ರಕರಣಗಳು- 8 ಸೇರಿವೆ. ಜಿಲ್ಲೆಯಾದ್ಯಂತ ಒಟ್ಟು 4,327 ಜನರನ್ನು ‘ASDDO’ ಪಟ್ಟಿಗೆ ಗುರುತಿಸಲಾಗಿದೆ.



