Saturday, July 11, 2026
Google search engine

Homeದೇಶಬಡ ರೋಗಿಗಳಿಗೆ ಕೇಂದ್ರದ ಸಿಹಿಸುದ್ದಿ: 39 ಅಗತ್ಯ ಔಷಧಿಗಳ ಬೆಲೆ ಇಳಿಕೆ

ಬಡ ರೋಗಿಗಳಿಗೆ ಕೇಂದ್ರದ ಸಿಹಿಸುದ್ದಿ: 39 ಅಗತ್ಯ ಔಷಧಿಗಳ ಬೆಲೆ ಇಳಿಕೆ

ನವದೆಹಲಿ : ಬಡ ಹಾಗೂ ಸಾಮಾನ್ಯ ರೋಗಿಗಳಿಗೆ ನೆರವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರ 39 ಅಗತ್ಯ ಔಷಧಿಗಳ ಬೆಲೆಯನ್ನು ಇಳಿಕೆ ಮಾಡಿ ಹೊಸ ದರವನ್ನು ನಿಗದಿಪಡಿಸಿದ್ದು, ಈ ಕುರಿತು ರಾಷ್ಟ್ರೀಯ ಔಷಧ ದರ ನಿಯಂತ್ರಣ ಪ್ರಾಧಿಕಾರ (NPPA) ಅಧಿಕೃತ ಆದೇಶ ಹೊರಡಿಸಿದೆ.

ಇನ್ನೂ ಹೊಸ ಆದೇಶದ ಪ್ರಕಾರ, ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳು, ಸೋಂಕುಗಳು, ಕಣ್ಣಿನ ತೊಂದರೆಗಳು ಹಾಗೂ ಉಸಿರಾಟದ ಸಮಸ್ಯೆಗಳ ಚಿಕಿತ್ಸೆಗೆ ಬಳಸುವ ಹಲವು ಅಗತ್ಯ ಔಷಧಿಗಳ ಗರಿಷ್ಠ ಚಿಲ್ಲರೆ ದರವನ್ನು ನಿಗದಿಪಡಿಸಲಾಗಿದೆ.

ಅಲ್ಲದೆ ಇದರ ಜೊತೆಗೆ, ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಔಷಧಿಗಳನ್ನು ಮಾರಾಟ ಮಾಡದಂತೆ ಔಷಧ ಕಂಪನಿಗಳು ಹಾಗೂ ಮಾರಾಟಗಾರರಿಗೆ ಎಚ್ಚರಿಕೆ ನೀಡಲಾಗಿದ್ದು, ನಿಗದಿತ ಬೆಲೆಗಿಂತ ಹೆಚ್ಚು ವಸೂಲಿ ಮಾಡಿದರೆ, ಹೆಚ್ಚುವರಿ ಮೊತ್ತವನ್ನು ಬಡ್ಡಿ ಸಮೇತ ಮರುಪಾವತಿಸಬೇಕಾಗುತ್ತದೆ.

ಜೊತೆಗೆ ಔಷಧ ಬೆಲೆ ನಿಯಂತ್ರಣ ಆದೇಶ–2013 ಹಾಗೂ ಅಗತ್ಯ ಸರಕುಗಳ ಕಾಯ್ದೆ–1955ರ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎನ್‌ಪಿಪಿಎ ತಿಳಿಸಿದೆ.

ಅದರಂತೆ ಪ್ರಮುಖ ಔಷಧಿಗಳ ಹೊಸ ಗರಿಷ್ಠ ದರಗಳನ್ನೂ ನಿಗದಿಪಡಿಸಲಾಗಿದ್ದು,

  • ಮಧುಮೇಹ ಔಷಧಿಗಳು (ಎಂಪಾಗ್ಲಿಫ್ಲೋಜಿನ್, ಸಿಟಾಗ್ಲಿಪ್ಟಿನ್, ಮೆಟ್‌ಫಾರ್ಮಿನ್ ಹೈಡ್ರೋಕ್ಲೋರೈಡ್): ₹14.88 ರಿಂದ ₹17.17
  • ರಕ್ತದೊತ್ತಡ ಔಷಧಿಗಳು (ಆಮ್ಲೋಡಿಪೈನ್, ಬಿಸೊಪ್ರೊಲೊಲ್, ಟೆಲ್ಮಿಸಾರ್ಟನ್): ₹14.74
  • ಕಣ್ಣಿನ ಸೋಂಕಿನ ಡ್ರಾಪ್ಸ್ (ನೆಪಾಫೆನಾಕ್, ಮೊಕ್ಸಿಫ್ಲೋಕ್ಸಾಸಿನ್): ಪ್ರತಿ ಮಿಲಿಲೀಟರ್‌ಗೆ ₹68.64
  • ಹೃದ್ರೋಗ ಔಷಧಿಗಳು (ಕ್ಲೋಪಿಡೋಗ್ರೆಲ್, ಆಸ್ಪಿರಿನ್, ಅಟೊರ್ವಸ್ಟಾಟಿನ್): ಪ್ರತಿ ಮಾತ್ರೆಗೆ ₹6
  • ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ3 ಮಾತ್ರೆಗಳು: ಪ್ರತಿ ಮಾತ್ರೆಗೆ ಗರಿಷ್ಠ ₹8
  • ಆಂಟಿ-ರೇಬಿಸ್ ಇಮ್ಯುನೊಗ್ಲೋಬ್ಯುಲಿನ್ ಇಂಜೆಕ್ಷನ್: ₹119.48
  • ಟೆನೆಕ್ಟೆಪ್ಲೇಸ್ ಇಂಜೆಕ್ಷನ್ (ಹೃದಯಾಘಾತದ ವೇಳೆ ಬಳಸುವ ಪ್ರಾಣರಕ್ಷಕ ಔಷಧ): ₹60,238.27

ಈ ಕ್ರಮದಿಂದ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವ ಲಕ್ಷಾಂತರ ರೋಗಿಗಳಿಗೆ ಔಷಧ ವೆಚ್ಚದಲ್ಲಿ ಪರಿಹಾರ ದೊರೆಯುವ ನಿರೀಕ್ಷೆ ವ್ಯಕ್ತವಾಗಿದೆ ಎನ್ನಲಾಗಿದೆ.

RELATED ARTICLES
- Advertisment -
Google search engine

Most Popular