Tuesday, February 17, 2026
Google search engine

Homeರಾಜ್ಯಬೆಂಗಳೂರು: ಬೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಲೈನ್​ ಮ್ಯಾನ್​ ಬಲಿ

ಬೆಂಗಳೂರು: ಬೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಲೈನ್​ ಮ್ಯಾನ್​ ಬಲಿ

ಬೆಂಗಳೂರು: ಬೆಸ್ಕಾಂ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಲೈನ್​ ಮ್ಯಾನ್​ ಬಲಿಯಾಗಿರುವ ಘಟನೆ ಬೆಂಗಳೂರು ಪೂರ್ವ ತಾಲೂಕಿನ ಚೀಮಸಂದ್ರ ಬಳಿ ನಡೆದಿದೆ.

ಫ್ಯೂಸ್‌ ಬದಲಾವಣೆ ಮಾಡುತ್ತಿದ್ದಾಗ ವಿದ್ಯುತ್ ಪ್ರವಹಿಸಿ ಸಿದ್ದರಾಜು (32) ಮೃತಪಟ್ಟಿದ್ದಾರೆ.

ಲೈನ್‌ ಮ್ಯಾನ್ ಸಿದ್ದರಾಜು ಮಧ್ಯಾಹ್ನ ಲೈನ್ ಸರಿಪಡಿಸಲು ಹೋಗಿದ್ದರು. ಲೈನ್ ಸರಿಪಡಿಸುವುದಕ್ಕಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸಬೇಕು ಎಂದು ಹೇಳಿದ್ದರು. ಬೆಸ್ಕಾಂ ಕಚೇರಿ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಆದರೆ, ಸಿದ್ದರಾಜು ಅವರು ದುರಸ್ತಿ ಮಾಡಲಿರುವ ಲೈನ್‌ ಬದಲಾಗಿ ಬೇರೆ ಲೈನ್ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು ಎಂಬ ಅನುಮಾನ ವ್ಯಕ್ತವಾಗಿದೆ. ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆಂದು ಕಂಬ ಹತ್ತಿದ್ದ ಲೈನ್‌ ಮ್ಯಾನ್, ವಿದ್ಯುತ್‌ ಶಾಕ್‌ನಿಂದ ಲೈನ್‌ ಮ್ಯಾನ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬಿದರಹಳ್ಳಿಯ ಈಸ್ಟ್ ಪಾಯಿಂಟ್ ಆಸ್ಪತ್ರೆಗೆ ಮೃತದೇಹ ಸ್ಥಳಾಂತರಗೊಳಿಸಲಾಗಿದೆ. ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

RELATED ARTICLES
- Advertisment -
Google search engine

Most Popular