Thursday, May 22, 2025
Google search engine

HomeUncategorizedರಾಷ್ಟ್ರೀಯಮಹಾತ್ಮ ಗಾಂಧಿ ‘ಮಹಾಪುರುಷ’, ಮೋದಿ ‘ಯುಗಪುರುಷ’: ಉಪ ರಾಷ್ಟ್ರಪತಿ ಧನ್​ ಕರ್​

ಮಹಾತ್ಮ ಗಾಂಧಿ ‘ಮಹಾಪುರುಷ’, ಮೋದಿ ‘ಯುಗಪುರುಷ’: ಉಪ ರಾಷ್ಟ್ರಪತಿ ಧನ್​ ಕರ್​

ನವದೆಹಲಿ: ಮಹಾತ್ಮ ಗಾಂಧಿ ಮಹಾಪುರುಷ, ನರೇಂದ್ರ ಮೋದಿ ಯುಗಪುರುಷ ಎಂದು ಉಪ ರಾಷ್ಟ್ರಪತಿ ಜಗದೀಪ್ ಧನ್ ​ಕರ್ ಬಣ್ಣಿಸಿದ್ದಾರೆ.

ಜೈನ ಚಿಂತಕ ಹಾಗೂ ದಾರ್ಶನಿಕ ಶ್ರೀಮದ್ ರಾಜಚಂದ್ರಜಿ ಅವರ ಜನ್ಮ ದಿನಾಚರಣೆಯಲ್ಲಿ ಮಾತನಾಡಿದ ಧನ್​ ಕರ್, ಮಹಾತ್ಮ ಗಾಂಧಿ ಅವರು ಸತ್ಯಾಗ್ರಹ ಮತ್ತು ಅಹಿಂಸೆಯ ಮೂಲಕ ಬ್ರಿಟಿಷರ ಗುಲಾಮಗಿರಿಯಿಂದ ನಮ್ಮನ್ನು ಮುಕ್ತಗೊಳಿಸಿದರು.

ಭಾರತದ ಯಶಸ್ವಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಾವು ಯಾವಾಗಲೂ ಹೋಗಲು ಬಯಸಿದ ಹಾದಿಗೆ ನಮ್ಮನ್ನು ಕರೆದೊಯ್ದರು. ನಾನು ನಿಮಗೆ ಒಂದು ವಿಷಯ ಹೇಳಲು ಬಯಸುತ್ತೇನೆ. ಮಹಾತ್ಮ ಗಾಂಧಿ ಕಳೆದ ಶತಮಾನದ ಮಹಾನ್ ವ್ಯಕ್ತಿ. ನರೇಂದ್ರ ಮೋದಿ ಈ ಶತಮಾನದ ಪ್ರಬುದ್ಧ ವ್ಯಕ್ತಿ ಎಂದು ಹೇಳಿದ್ದಾರೆ. ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ಪಿಎಂ ಮೋದಿ ಅವರಲ್ಲಿ ಒಂದು ಸಾಮಾನ್ಯ ಅಂಶವಿದೆ.

ಈ ರಾಷ್ಟ್ರದ ಅಭಿವೃದ್ಧಿಯನ್ನು ವಿರೋಧಿಸುವ ಶಕ್ತಿಗಳು ಮತ್ತು ಈ ದೇಶದ ಉದಯವನ್ನು ಅರಗಿಸಿಕೊಳ್ಳಲಾಗದ ಶಕ್ತಿಗಳು ಒಂದಾಗುತ್ತಿವೆ. ದೇಶದಲ್ಲಿ ಏನಾದರೂ ಒಳ್ಳೆಯದಾಗಲಿ, ಈ ಜನರು ವಿಭಿನ್ನ ಮನಸ್ಥಿತಿಗೆ ಬರುತ್ತಾರೆ. ಹಾಗಾಗಬಾರದು ಎಂದರು.

RELATED ARTICLES
- Advertisment -
Google search engine

Most Popular