Thursday, May 22, 2025
Google search engine

Homeಅಪರಾಧಲಿಂಗಸೂಗೂರು ಪಟ್ಟಣದಲ್ಲಿ ಮಹಿಳೆಯ ಬರ್ಬರ ಹತ್ಯೆ

ಲಿಂಗಸೂಗೂರು ಪಟ್ಟಣದಲ್ಲಿ ಮಹಿಳೆಯ ಬರ್ಬರ ಹತ್ಯೆ

ರಾಯಚೂರು: ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಲಿಂಗಸೂಗೂರು ಪಟ್ಟಣದ ಬಸ್ ನಿಲ್ದಾಣ ಹಿಂದುಗಡೆ ಇರುವ ಎನ್.ಜಿ.ಒ. ಬಡಾವಣೆಯಲ್ಲಿ ಭಾನುವಾರ ರಾತ್ರಿ ನಡೆದಿದೆ.

ಯರಡೋಣ ನಿವಾಸಿ ವಿಜಯಲಕ್ಷ್ಮೀ ಸೋಮಪ್ಪ (32) ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ.

ಲಿಂಗಸೂಗೂರು ತಾಲೂಕಿನ ಅಂಕುಶದೊಡ್ಡಿ ಗ್ರಾಮದ ವ್ಯಕ್ತಿಗೆ ವಿಜಯಲಕ್ಷ್ಮೀ ವಿವಾಹ ಮಾಡಿಕೊಡಲಾಗಿತ್ತು. ಆದರೆ ಕಳೆದ ಎರಡು ವರ್ಷಗಳ ಹಿಂದೆ ಪತಿ ಮೃತಪಟ್ಟಿದ್ದ. ಹೀಗಾಗಿ, ತವರು ಮನೆ ಯರಡೋಣ ಗ್ರಾಮದಲ್ಲಿ ಮಹಿಳೆ ವಾಸಿಸುತ್ತಿದ್ದಳು. ಆದರೆ, ಭಾನುವಾರ ರಾತ್ರಿ ಕಲ್ಲಿನಿಂದ ಜಜ್ಜಿ ಮಹಿಳೆಯನ್ನ ಹತ್ಯೆ ಮಾಡಲಾಗಿದೆ. ಘಟನೆಯಿಂದ ಸುತ್ತಮುತ್ತಲಿನ ಪ್ರದೇಶದ ಜನರಲ್ಲಿ ಆತಂಕ ಮೂಡಿದೆ.

ಘಟನಾ ಸ್ಥಳಕ್ಕೆ ಲಿಂಗಸೂಗೂರು ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಲಿಂಗಸೂಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

RELATED ARTICLES
- Advertisment -
Google search engine

Most Popular