Tuesday, February 17, 2026
Google search engine

Homeಸಿನಿಮಾಕ್ರಿಶ್ಚಿಯನ್ ಸಂಪ್ರದಾಯದಂತೆ ಸೆ.1ರಂದು ಸೋನಲ್, ತರುಣ್ ಮದುವೆ

ಕ್ರಿಶ್ಚಿಯನ್ ಸಂಪ್ರದಾಯದಂತೆ ಸೆ.1ರಂದು ಸೋನಲ್, ತರುಣ್ ಮದುವೆ

ಸ್ಯಾಂಡಲ್‌ವುಡ್ ನಿರ್ದೇಶಕ ತರುಣ್ ಸುಧೀರ್ ಮತ್ತು ಸೋನಲ್ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇದೇ ಸೆ.1ರಂದು ಕ್ರಿಶ್ಚಿಯನ್ ಸಂಪ್ರದಾಯದಂತೆ ತರುಣ್‌ ದಂಪತಿ ಮದುವೆಯಾಗಲಿದ್ದಾರೆ.

ಸೋನಲ್ ಕ್ರೈಸ್ತ ಧರ್ಮದವರಾಗಿದ್ದು, ಇದೀಗ ಅವರ ಸಂಪ್ರದಾಯದಂತೆ ಸೆ.1ರಂದು ಮಂಗಳೂರಿನಲ್ಲಿ ಅದ್ಧೂರಿಯಾಗಿ ಮದುವೆ ನಡೆಯಲಿದೆ. ಮದುವೆ ಆರತಕ್ಷತೆ ಕೂಡ ನಡೆಯಲಿದೆ. ಈ ಕಾರ್ಯಕ್ರಮಗಳಿಗೆ ಕುಟುಂಬಸ್ಥರು, ಆಪ್ತರಿಗಷ್ಟೇ ಆಹ್ವಾನ ನೀಡಿದ್ದಾರೆ.

ಇನ್ನೂ ಇದೇ ಆ.11ರಂದು ತರುಣ್ ಮತ್ತು ಸೋನಲ್ ಹಿಂದೂ ಪದ್ಧತಿಯಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆದ ಈ ಮದುವೆಗೆ ಸ್ಯಾಂಡಲ್‌ವುಡ್ ನಟ, ನಟಿಯರು ಸಾಕ್ಷಿಯಾಗಿದ್ದರು.

RELATED ARTICLES
- Advertisment -
Google search engine

Most Popular