Wednesday, July 1, 2026
Google search engine

Homeಸಿನಿಮಾವಿಕ್ರಾಂತ್ ಮ್ಯಾಸ್ಸೆ ಅಭಿನಯದ 'ಮುಸಾಫಿರ್ ಕೆಫೆ' ಬಿಡುಗಡೆಗೆ ದಿನಾಂಕ ನಿಗದಿ

ವಿಕ್ರಾಂತ್ ಮ್ಯಾಸ್ಸೆ ಅಭಿನಯದ ‘ಮುಸಾಫಿರ್ ಕೆಫೆ’ ಬಿಡುಗಡೆಗೆ ದಿನಾಂಕ ನಿಗದಿ

ಮುಂಬೈ : ಬಾಲಿವುಡ್‌ ನ ಜನಪ್ರಿಯ ನಟ ವಿಕ್ರಾಂತ್ ಮ್ಯಾಸ್ಸೆ, ವೇದಿಕಾ ಪಿಂಟೊ ಮತ್ತು ಮಹಿಮಾ ಮಕ್ವಾನಾ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ರೋಮ್ಯಾಂಟಿಕ್ ಡ್ರಾಮಾ ಸರಣಿ ‘ಮುಸಾಫಿರ್ ಕೆಫೆ’ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಈ ಸರಣಿಯು ಇದೇ ಜುಲೈ 24 ರಂದು ಒಟಿಟಿ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ ನಲ್ಲಿ ಪ್ರಸಾರವಾಗಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ.

ಈ ಸರಣಿಯು ಲೇಖಕ ದಿವ್ಯ ಪ್ರಕಾಶ್ ದುಬೆಯವರ ಇದೇ ಹೆಸರಿನ ಜನಪ್ರಿಯ ಕಾದಂಬರಿಯನ್ನು ಆಧರಿಸಿ ನಿರ್ಮಿಸಲಾಗಿದೆ. ಭೋಪಾಲ್ ಮತ್ತು ಮಸ್ಸೂರಿಯಲ್ಲಿ ನಡೆಯುವ ಕಥೆ ಇದಾಗಿದೆ. ತಮ್ಮದೇ ಆದ ಬದುಕು ಹುಡುಕುತ್ತಿರುವ ಚಂದರ್ ಮೋಹನ್ ಶರ್ಮಾ (ವಿಕ್ರಾಂತ್ ಮ್ಯಾಸ್ಸೆ), ಸ್ವಂತ ಭವಿಷ್ಯ ರೂಪಿಸಿಕೊಳ್ಳಲು ಬಯಸುವ ಸುಧಾ (ವೇದಿಕಾ ಪಿಂಟೊ) ಮತ್ತು ಶಾಂತ ಸ್ವಭಾವದ ಪ್ರೀತಿ (ಮಹಿಮಾ ಮಕ್ವಾನಾ) ಎಂಬ ಮೂವರು ಅಪರಿಚಿತರು ಹೇಗೆ ಭೇಟಿಯಾಗುತ್ತಾರೆ ಎನ್ನುವದರ ಜೊತೆಗೆ ಅವರ ಜೀವನದಲ್ಲಿ ಸಂಭವಿಸುವ ಅನಿರೀಕ್ಷಿತ ಬದಲಾವಣೆಗಳೇ ಈ ಸರಣಿಯ ತಿರುಳು.

ಮುಖ್ಯ ನಟರಲ್ಲದೆ ಆದಿಲ್ ಹುಸೇನ್, ರಾಜೀವ್ ಸಿದ್ಧಾರ್ಥ, ಅನುಭಾ ಫತೇಪುರಿಯಾ, ಲವ್ಲೀನ್ ಮಿಶ್ರಾ ಮತ್ತು ಸಾದಿಯಾ ಸಿದ್ದಿಕಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಸರಣಿಯನ್ನು ಶರಣ್ಯ ರಾಜಗೋಪಾಲ್ ಅವರು ಸೃಷ್ಟಿಸಿ ಬರೆದಿದ್ದು, ರುಚಿರ್ ಅರುಣ್ ನಿರ್ದೇಶಿಸಿದ್ದಾರೆ. ‘ಟೆರಿಬ್ಲಿ ಟೈನಿ ಟೇಲ್ಸ್’ (TTT) ನಿರ್ಮಾಣ ಸಂಸ್ಥೆಯು ಹೋಮ್‌ಮೇಡ್ ಸ್ಟೋರೀಸ್ ಸಹಯೋಗದೊಂದಿಗೆ ನಿರ್ಮಿಸಿದೆ.

ಒಟ್ಟು 8 ಸಂಚಿಕೆಗಳನ್ನು ಹೊಂದಿರುವ ಈ ರೋಮ್ಯಾಂಟಿಕ್ ಸರಣಿಯು ಪ್ರೀತಿ, ಸ್ನೇಹ ಮತ್ತು ಜೀವನದ ನಿರ್ಣಾಯಕ ಕ್ಷಣಗಳನ್ನು ತೆರೆದಿಡಲಿದೆ.

‘ಮುಸಾಫಿರ್ ಕೆಫೆ’ ಹೊರತಾಗಿ, ವಿಕ್ರಾಂತ್ ಮ್ಯಾಸ್ಸೆ ಅವರು ನಿರ್ದೇಶಕ ರಾಜಕುಮಾರ್ ಹಿರಾನಿಯವರ ಚೊಚ್ಚಲ ವೆಬ್ ಶೋ ‘ಪ್ರೀತಮ್ ಅಂಡ್ ಪೆಡ್ರೊ’ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಈ ಸರಣಿಯಲ್ಲಿ ಅರ್ಷದ್ ವಾರ್ಸಿ, ವಿರ್ ಹಿರಾನಿ, ಮೋನಾ ಸಿಂಗ್ ಮತ್ತು ಬೊಮನ್ ಇರಾನಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. (ಏಜೆನ್ಸಿಸ್)

RELATED ARTICLES
- Advertisment -
Google search engine

Most Popular