Wednesday, June 18, 2025
Google search engine

Homeಅಪರಾಧಮಹಿಳೆಯರ ಹೆಸರಿನಲ್ಲಿ 10 ನಕಲಿ ಖಾತೆ, 13,500 ಅಶ್ಲೀಲ ಚಿತ್ರ : ಸೈಬರ್ ಕಾಮುಖನ ಸೆರೆ!

ಮಹಿಳೆಯರ ಹೆಸರಿನಲ್ಲಿ 10 ನಕಲಿ ಖಾತೆ, 13,500 ಅಶ್ಲೀಲ ಚಿತ್ರ : ಸೈಬರ್ ಕಾಮುಖನ ಸೆರೆ!

ಬಳ್ಳಾರಿ: ಮಹಿಳೆಯರ ಹೆಸರಿನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ, ಅವುಗಳ ಮೂಲಕ ಅಶ್ಲೀಲ ಚಿತ್ರ ಮತ್ತು ವಿಡಿಯೋಗಳನ್ನು ಅಪ್ಲೋಡ್ ಮಾಡಿ ಮಾನಹಾನಿಗೆ ಕಾರಣವಾಗುತ್ತಿದ್ದ 25 ವರ್ಷದ ಯುವಕನನ್ನು ಮುಂಬೈ ಪೊಲೀಸರಿಂದ ಬಂಧಿಸಲಾಗಿದೆ. ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಆರೋಪಿ ಬಂಧನಕ್ಕೊಳಗಾಗಿದ್ದಾನೆ.

ಬಂಧಿತನನ್ನು ಶುಭಂ ಕುಮಾರ್ ಮನೋಜ್ ಪ್ರಸಾದ್ ಸಿಂಗ್ (25) ಎಂದು ಗುರುತಿಸಲಾಗಿದ್ದು, ದೆಹಲಿಯ ಕಂಪ್ಯೂಟರ್ ಸಾಫ್ಟ್‌ಸ್ಟಿಲ್ಸ್‌ನಲ್ಲಿ ಡಿಪ್ಲೋಮಾ ಪಡೆದವನು. ಬಂಧಿತನು ಸಂಡೂರಿನ ಖಾಸಗಿ ಸಂಸ್ಥೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದನು. ತನ್ನ ತಾಂತ್ರಿಕ ಜ್ಞಾನವನ್ನು ದುರುಪಯೋಗ ಮಾಡಿಕೊಂಡ ಈ ಯುವಕನ ಕೃತ್ಯಗಳು ಇದೀಗ ಬೆಳಕಿಗೆ ಬರುತ್ತಿವೆ.

ಶುಭಂ ಮಹಿಳೆಯರ ಹೆಸರಿನಲ್ಲಿ ಒಟ್ಟು 10 ನಕಲಿ ಸಾಮಾಜಿಕ ಮಾಧ್ಯಮ ಖಾತೆಗಳನ್ನು ತೆರೆದಿದ್ದು, 90ಕ್ಕೂ ಹೆಚ್ಚು ಇ-ಮೇಲ್ ಖಾತೆಗಳ ಮೂಲಕ ಅಶ್ಲೀಲ ವಿಷಯವನ್ನು ಹರಡುತ್ತಿದ್ದನು. ಮಹಿಳೆಯರಿಗೆ ನಗ್ನ ವಿಡಿಯೋ ಕಾಲ್‌ಗಳನ್ನು ಮಾಡುತ್ತಿದ್ದನು ಮತ್ತು ಸ್ಪಂದನೆ ಸಿಗದಾಗ ಅವರನ್ನು ತಿರಸ್ಕರಿಸುವ ರೀತಿಯಲ್ಲಿ ನಕಲಿ ಖಾತೆಗಳಿಂದ ಅವಮಾನ ಮಾಡುತ್ತಿದ್ದನು.

ಈ ಬಗ್ಗೆ ವಿದ್ಯಾರ್ಥಿನಿಯೊಬ್ಬಳು ನೀಡಿದ ದೂರಿನ ಆಧಾರದ ಮೇಲೆ ಮುಂಬೈ ಪೊಲೀಸರು ತನಿಖೆ ಆರಂಭಿಸಿದರು. ಗೂಗಲ್‌ನಿಂದ ತಾಂತ್ರಿಕ ಮಾಹಿತಿ ಸಂಗ್ರಹಿಸಿ ಆಧಾರದ ಮೇಲೆ ಆರೋಪಿಯನ್ನು ಪತ್ತೆಹಚ್ಚಿ ಸಂಡೂರಿನಲ್ಲಿ ಬಂಧಿಸಲಾಯಿತು.

ತನಿಖೆಯ ವೇಳೆ ಆರೋಪಿ ಬಳಸುತ್ತಿದ್ದ ಮೊಬೈಲ್‌ ಪರಿಶೀಲಿಸಿದಾಗ, ಮತ್ತೊಂದು ಭೀಕರ ಅಂಶ ಬೆಳಕಿಗೆ ಬಂದಿದೆ. ಶುಭಂನ ಮೊಬೈಲ್‌ನಲ್ಲಿ 13,500ಕ್ಕೂ ಹೆಚ್ಚು ಅಶ್ಲೀಲ ಚಿತ್ರಗಳು ಮತ್ತು ಸ್ಕ್ರೀನ್‌ಶಾಟ್‌ಗಳು ಪತ್ತೆಯಾಗಿದ್ದು, ಇವುಗಳಲ್ಲಿ ಹೆಚ್ಚಿನವು ಮಹಿಳೆಯರ ಖಾಸಗಿ ಕ್ಷಣಗಳನ್ನು ಒಳಗೊಂಡಿವೆ.

ಪೊಲೀಸರ ಪ್ರಕಾರ, ಶುಭಂ ಕಾಮುಕ ಮನಸ್ಥಿತಿಯ ವ್ಯಕ್ತಿಯಾಗಿದ್ದು, ಸಾಮಾಜಿಕ ಜಾಲತಾಣಗಳನ್ನು ತನ್ನ ಅಶ್ಲೀಲ ಕೃತ್ಯಗಳ ವೇದಿಕೆಯಾಗಿಸಿಕೊಂಡಿದ್ದನು. ಅವನು ತನ್ನ ಟಾರ್ಗೆಟ್ ಮಹಿಳೆಯರೊಂದಿಗೆ ಪ್ರೇಮದ ಮಾತುಗಳ ಮೂಲಕ ನಿಕಟತೆಯನ್ನು ಬೆಳೆಸುತ್ತಿದ್ದನು, ನಂತರ ಅವರ ಖಾಸಗಿ ಚಿತ್ರಗಳನ್ನು ಅಶ್ಲೀಲವಾಗಿ ಬದಲಾಯಿಸಿ ನಕಲಿ ಖಾತೆಗಳ ಮೂಲಕ ಪ್ರಕಟಿಸುತ್ತಿದ್ದನು.

RELATED ARTICLES
- Advertisment -
Google search engine

Most Popular