Wednesday, June 18, 2025
Google search engine

Homeರಾಜ್ಯಅನಧಿಕೃತ ಶಾಲೆಗಳಿಗೆ ಸಕ್ರಮಗೊಳ್ಳಲು ಅರ್ಜಿ ಸಲ್ಲಿಸಲು ಜೂ. 30ರವರೆಗೆ ಅವಕಾಶ

ಅನಧಿಕೃತ ಶಾಲೆಗಳಿಗೆ ಸಕ್ರಮಗೊಳ್ಳಲು ಅರ್ಜಿ ಸಲ್ಲಿಸಲು ಜೂ. 30ರವರೆಗೆ ಅವಕಾಶ

ಬೆಂಗಳೂರು: 2025-26ನೇ ಸಾಲಿಗೆ ಹೊಸದಾಗಿ ಖಾಸಗಿ ಅನುದಾನ ರಹಿತ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢಶಾಲೆ ನೋಂದಾವಣಿಗೆ ಹಾಗೂ ಉನ್ನತೀಕರಿಸಿದ ತರಗತಿಗಳನ್ನು ಪ್ರಾರಂಭಿಸಲು ಉದ್ದೇಶಿಸಿರುವ ಸಂಸ್ಥೆಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಜೂನ್‌ 30ರ ವರೆಗೆ ಅಂತಿಮ ಸಮಯಾವಕಾಶ ನೀಡಿ ಶಾಲಾ ಶಿಕ್ಷಣ ಇಲಾಖೆಯ ಆಯಕ್ತರು ಅಧಿಸೂಚನೆ ಹೊರಡಿಸಿದ್ದಾರೆ.

ಈ ಮೊದಲು ಫೆ. 28ರ ವರೆಗೆ ಸಮಯಾವಕಾಶ ನೀಡಲಾಗಿತ್ತು. ಇದೀಗ ಶಾಲೆಗಳು ಆರಂಭಗೊಂಡು ಪಠ್ಯ ಚಟುವಟಿಕೆಗಳು ನಡೆಯುತ್ತಿರುವ ಹೊತ್ತಿನಲ್ಲಿ ಅನಧಿಕೃತ ಶಾಲೆಗಳಿಗೆ ಸಕ್ರಮಗೊಳ್ಳಲು ಮತ್ತು ಹೊಸದಾಗಿ ಶಾಲೆ ಆರಂಭಿಸಲು ಅವಕಾಶ ನೀಡಿ ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶ ಶಿಕ್ಷಣ ತಜ್ಞರಲ್ಲಿ ಅಚ್ಚರಿಗೆ ಕಾರಣವಾಗಿದೆ.

ಈಗಾಗಲೇ 2025-26ನೇ ಶೈಕ್ಷಣಿಕ ಸಾಲಿಗೆ ಶಾಲಾ ನೋಂದಾವಣಿ ಮತ್ತು ಉನ್ನತೀಕರಿಸಿದ ತರಗತಿಗಳನ್ನು ಪ್ರಾರಂಭಿಸಲು ಅರ್ಜಿ ಸಲ್ಲಿಸಿ ತಿರಸ್ಕೃತಗೊಂಡ ಆಡಳಿತ ಮಂಡಳಿಗಳಿಗೆ ಮತ್ತು ಹೊಸದಾಗಿ ಅರ್ಜಿ ಸಲ್ಲಿಸುವ ಆಡಳಿತ ಮಂಡಳಿಗೆಳಿಗೆ ಈ ಅವಕಾಶ ಅನ್ವಯವಾಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

RELATED ARTICLES
- Advertisment -
Google search engine

Most Popular