Saturday, January 10, 2026
Google search engine

Homeರಾಜ್ಯಹೆಚ್‌ಡಿ ಕುಮಾರಸ್ವಾಮಿ ಟ್ವೀಟ್‌ ಗೆ ಡಿಕೆ ಶಿವಕುಮಾರ್‌ ತಿರುಗೇಟು

ಹೆಚ್‌ಡಿ ಕುಮಾರಸ್ವಾಮಿ ಟ್ವೀಟ್‌ ಗೆ ಡಿಕೆ ಶಿವಕುಮಾರ್‌ ತಿರುಗೇಟು

ಬೆಂಗಳೂರು : ಶೀಘ್ರವೇ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಿದೆ. ಈ ಮೈತ್ರಿಯಾದರೆ ರಾಜ್ಯ ರಾಜಕೀಯದಲ್ಲಿ ಕೇವಲ ಎರಡು ಪಕ್ಷಗಳಷ್ಟೇ ಉಳಿಯುತ್ತವೆ ಎಂಬ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆಗೆ ಟ್ವೀಟ್ ಮೂಲಕ ಕೇಂದ್ರ ಸಚಿವ ಹಾಗೂ ಜೆಡಿಎಸ್ ವರಿಷ್ಠ ಕುಮಾರಸ್ವಾಮಿ ತಿರುಗೇಟು ನೀಡಿದ್ದರು.

ಈ ಕುರಿತು ಟ್ವೀಟ್‌ ಮಾಡುವ ಮೂಲಕ ನಮ್ಮ ವಿಲೀನದ ಚಿಂತೆ ಪಕ್ಕಕ್ಕಿಡಿ. ನನ್ನ, ನಿಮ್ಮ ಆಡಳಿತಾನುಭವದ ಬಗ್ಗೆ ಮಾತನಾಡೋಣ. ನಿಮಗೇನು ಕೊಂಬು, ಕೋಡು ಇಲ್ಲ ಎನ್ನುತ್ತಾ ಡಿಕೆಶಿಯನ್ನ ಕುಟುಕಿದ್ದರು.

ಇದೀಗ ಕುಮಾರಸ್ವಾಮಿ ಟ್ವೀಟ್​ಗೆ ಡಿಸಿಎಂ ಡಿಕೆಶಿವಕುಮಾರ್ ತಮ್ಮದೇ ಸ್ಟೈಲ್​ನಲ್ಲಿ‌ ಟಾಂಗ್ ನೀಡಿದ್ದು, ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು ಕುಮಾರಸ್ವಾಮಿ ಟ್ವೀಟ್​ಗೆ ಸೈಲೆಂಟ್ ಆಗಿಯೇ ತಿರುಗೇಟು ನೀಡಿದ್ದಾರೆ.

ಡಿಸಿಎಂಗೇ ಕೊಂಬು ಇದ್ಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅಯ್ತಪ್ಪ, ಅವರ ಎಂಎಲ್​ಎಗಳು ಇದ್ದಾರಲ್ವಾ?, ಅಸೆಂಬ್ಲಿಯಲ್ಲಿ ಕರೆಯುತ್ತೇವೆ, ಅಲ್ಲಿ ಚರ್ಚೆ ಮಾಡೋಕೆ‌ ಹೇಳಿ ಎಂದಿದ್ದಾರೆ. ಬಳ್ಳಾರಿ ಗಲಾಟೆ ಸಂಬಂಧ ಜಿಲ್ಲೆಗೆ ಹೋಗಿ ಅಧಿಕಾರಿಗಳ ಜೊತೆ ಡಿಸಿಎಂ ಡಿಕೆಶಿ ನಡೆಸಿದ ಸಭೆ ಬಗ್ಗೆ ಹೆಚ್​ಡಿಕೆ ಪ್ರಶ್ನೆ ಮಾಡಿದ್ದರೂ ಗೃಹ ಇಲಾಖೆಯನ್ನೇ ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನುವ ಆರೋಪ ಮಾಡಿದ್ದರೂ ಈ ವಿಚಾರದ ಪ್ರಶ್ನೆಗೆ ಡಿಸಿಎಂ ಡಿಕೆ ಶಿವಕುಮಾರ್ ಯಾವುದೇ ಉತ್ತರ ನೀಡದೆ ತೆರಳಿದ್ದಾರೆ.

RELATED ARTICLES
- Advertisment -
Google search engine

Most Popular