Wednesday, January 21, 2026
Google search engine

Homeಅಪರಾಧಮಗು ಹುಟ್ಟಿದ ಕೂಡಲೇ ಅನುಮಾನಾಸ್ಪದ ಹತ್ಯೆ, ತನಿಖೆ ಆರಂಭ

ಮಗು ಹುಟ್ಟಿದ ಕೂಡಲೇ ಅನುಮಾನಾಸ್ಪದ ಹತ್ಯೆ, ತನಿಖೆ ಆರಂಭ

ಚಿಕ್ಕಮಗಳೂರು : ಮದುವೆಗೆ ಮುಂಚೆಯೇ ಗರ್ಭಿಣಿಯಾಗಿದ್ದ ಸ್ಟಾಫ್​​ ನರ್ಸ್​ವೊಬ್ಬರು, ಮಗುವಿಗೆ ಜನ್ಮ ನೀಡುತ್ತಿದ್ದಂತೆ ಕತ್ತು ಹಿಸುಕಿ ಕೊಂದಿರುವ ಆರೋಪ ಲಕ್ಕವಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಕೇಳಿ ಬಂದಿದೆ.

ಸ್ಟಾಫ್ ನರ್ಸ್ ಆಗಿ ಕೆಲಸ ಮಾಡ್ತಿದ್ದ ಯುವತಿ, ತನ್ನ ತಂದೆ, ತಾಯಿ, ಅಜ್ಜಿ ಹಾಗೂ ಮೂವರು ಮಹಿಳೆಯರ ಸಹಾಯದಿಂದ ಮನೆಯಲ್ಲೇ ಹೆರಿಗೆ ಮಾಡಿಕೊಂಡಿದ್ದಾಳೆ. ಗಂಡು ಮಗು ಜನಿಸುತ್ತಿದ್ದಂತೆಯೇ ಅಪ್ಪ, ಅಮ್ಮ ಹಾಗೂ ಅಜ್ಜಿ ಸೇರಿ ಒಂದೇ ನಿಮಷದಲ್ಲಿ ಕೊಂದು, ತಿಪ್ಪೆಯಲ್ಲಿ ಹೂತು ಬಂದಿದ್ದಾರೆ. 15 ದಿನಗಳ ಹಿಂದೆ ಈ ಪ್ರಕರಣ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಪಕ್ಕದ ಮನೆ ಯುವಕನಿಂದ ಈ ಪ್ರಕರಣ ಬೆಳಕಿಗೆ ಬಂದಿದೆ. ಮಗು ಹುಟ್ಟಿದ ಕೂಡಲೇ ಅನುಮಾನಾಸ್ಪದ ಸಾವು ಎಂದು ಲಕ್ಕವಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.

RELATED ARTICLES
- Advertisment -
Google search engine

Most Popular