Tuesday, February 3, 2026
Google search engine

Homeರಾಜ್ಯಬೆಂಗಳೂರು ಆಸ್ತಿ ಮಾಲೀಕರಿಗೆ ಜಿಬಿಎ ಶಾಕ್: 437 ಕೋಟಿ ರೂ. ತೆರಿಗೆ ಬಾಕಿ; ಫೆ. 17ಕ್ಕೆ...

ಬೆಂಗಳೂರು ಆಸ್ತಿ ಮಾಲೀಕರಿಗೆ ಜಿಬಿಎ ಶಾಕ್: 437 ಕೋಟಿ ರೂ. ತೆರಿಗೆ ಬಾಕಿ; ಫೆ. 17ಕ್ಕೆ 7,000 ಆಸ್ತಿಗಳ ಹರಾಜು!

ಬೆಂಗಳೂರು: ನಗರದಲ್ಲಿ ಅತಿ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಮಾಲೀಕರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಬಿಸಿ ಮುಟ್ಟಿಸಿದೆ. ಸುಮಾರು 7,000 ಆಸ್ತಿಗಳ ಹರಾಜಿಗೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದು, ಒಟ್ಟು 437 ಕೋಟಿ ರೂಪಾಯಿಗೂ ಅಧಿಕ ತೆರಿಗೆ ವಸೂಲಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.

ಜಿಬಿಎ ವ್ಯಾಪ್ತಿಯ ಐದು ವಲಯಗಳಲ್ಲಿ ನೋಟಿಸ್ ನೀಡಿದರೂ ತೆರಿಗೆ ಪಾವತಿಸದ ಕಾರಣ, ಮುಂದಿನ ಹಂತವಾಗಿ ಆಸ್ತಿ ಜಪ್ತಿ ಮತ್ತು ಹರಾಜು ಪ್ರಕ್ರಿಯೆ ಆರಂಭಿಸಲಾಗಿದೆ. ಫೆಬ್ರವರಿ 17ರಂದು ಆಯಾ ವಲಯಗಳ ಜಂಟಿ ಆಯುಕ್ತರ ಕಚೇರಿಗಳಲ್ಲಿ ಈ ಹರಾಜು ಪ್ರಕ್ರಿಯೆ ನಡೆಯಲಿದೆ. ಮುಖ್ಯವಾಗಿ ಪೂರ್ವ ವಲಯದಲ್ಲಿ ಅತಿ ಹೆಚ್ಚು (90 ಕೋಟಿ ರೂ.) ತೆರಿಗೆ ಬಾಕಿಯಿದೆ. ಉಳಿದಂತೆ ಪಶ್ಚಿಮ (84 ಕೋಟಿ), ಕೇಂದ್ರ (81 ಕೋಟಿ), ಉತ್ತರ (79 ಕೋಟಿ) ಮತ್ತು ದಕ್ಷಿಣ ವಲಯದಲ್ಲಿ 72 ಕೋಟಿ ರೂಪಾಯಿ ಬಾಕಿ ಉಳಿಸಿಕೊಳ್ಳಲಾಗಿದೆ.

ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಮಾತನಾಡಿ, “ಜಿಬಿಎ ಕಾಯ್ದೆಯಡಿ ತೆರಿಗೆ ಪಾವತಿಸದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಹರಾಜು ಮಾಡಲು ಅವಕಾಶವಿದೆ. ಹರಾಜಿನ ಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದ್ದು, ಮಾಲೀಕರು ತಕ್ಷಣವೇ ಆನ್‌ಲೈನ್ ಮೂಲಕ ಬಾಕಿ ಪಾವತಿಸಿ ಹರಾಜಿನಿಂದ ತಪ್ಪಿಸಿಕೊಳ್ಳಬಹುದು,” ಎಂದು ತಿಳಿಸಿದ್ದಾರೆ. ಪಾಲಿಕೆಗೆ ಬರಬೇಕಾದ ಬೃಹತ್ ಮೊತ್ತದ ವಂಚನೆಯನ್ನು ತಡೆಗಟ್ಟಲು ಈ ಕಠಿಣ ಕ್ರಮ ಅನಿವಾರ್ಯವಾಗಿದೆ ಎಂದು ಅವರು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular