ಜೇವರ್ಗಿ : ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾಜದ ಸುಸಂಸ್ಕೃತ ಬದುಕು ಕಟ್ಟಿಕೊಡುವುದರಿಂದ ಇಂತಹ ಚಟುವಟಿಕೆ ಸಂಘಟಿಸುವವರನ್ನು ಸಮಾಜ ಪೋಷಿಸಬೇಕು ಎಂದು ಕೆಕೆಆರ್ ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್ ಹೇಳಿದರು.
ಪಟ್ಟಣದ ಬಸವೇಶ್ವರ ಸರ್ಕಲ್ ಹತ್ತಿರದ ಕದಂಬ ಕಾಲೇಜು ಬಳಿ ಆರ್.ಕೆ.ಪಿ ಗ್ರೂಪ್ ವತಿಯಿಂದ ಆಯೋಜಿಸಿದ್ದ ಬಸವ ಚೇತನ, ಸಮಾಜಸೇವಾ ರತ್ನ ಪ್ರಶಸ್ತಿ ಪ್ರದಾನ ಹಾಗೂ ಹಾಸ್ಯ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಾಲಾ ಕಾಲೇಜುಗಳಲ್ಲಿ ಕಲಿತ ಶಿಕ್ಷಣಕ್ಕಿಂತ ಮಿಗಿಲಾದ ಜೀವನ ಶಿಕ್ಷಣವನ್ನು ಸಾಂಸ್ಕೃತಿಕ ಚಟುವಟಿಕೆಗಳು ಕಲಿಸುತ್ತವೆ.
ಮುಂದುವರೆದು, ಶ್ರೀಮಂತಿಕೆ ನೆಮ್ಮದಿ ಕೊಡುವುದಿಲ್ಲ. ಎಲ್ಲ ನೋವು, ಸಂಕಷ್ಟ ಮರೆಸುವ ಶಕ್ತಿ ಸಂಗೀತ, ನಾಟಕ ಸಾಹಿತ್ಯಗಳಿಗಿದೆ. ನಮ್ಮ ಮಕ್ಕಳ ಬದುಕು ಬರಡಾಗದೆ. ಸಂಸ್ಕೃತಿ ಸಂಪನ್ನರಾಗಬೇಕೆಂದರೆ ಸಾಂಸ್ಕೃತಿಕ ಚಟುವಟಿಕೆಗಳನ್ನು ನಾವು ಉತ್ತೇಜಿಸಬೇಕು. ಆ ಕಾರಣದಿಂದಲೇ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸುವರನ್ನು ನಾವು ಬೆಂಬಲಿಸುವುದು ಅದು ನಮ್ಮ ಹೊಣೆಗಾರಿಕೆಯಾಗಿದೆ ಎಂದರು.
ಕಳೆದ ೨೫ ವರ್ಷಗಳಿಂದ ಆರ್.ಕೆ.ಪಿ ಗ್ರೂಪ್ ಪಟ್ಟಣದಲ್ಲಿ ನಿರಂತರವಾಗಿ ನಗೆಹಬ್ಬ, ಜಾದು ಕಾರ್ಯಕ್ರಮ, ರಸಮಂಜರಿ ಸೇರಿದಂತೆ ಪ್ರತಿ ವರ್ಷ ಒಂದಿಲ್ಲೊಂದು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡುತ್ತಾ ಬರುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಬಳಿಕ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಮಾತನಾಡಿ, ಸಾಂಸ್ಕೃತಿಕ ಅಭಿರುಚಿ ಬೆಳೆಸಿಕೊಳ್ಳುವುದರಿಂದ ಮಾನಸಿಕ ನೆಮ್ಮದಿ ಕಂಡುಕೊಳ್ಳಲು ಸಾಧ್ಯ ಎಂದರು.
ಸೊನ್ನ ವಿರಕ್ತ ಮಠದ ಡಾ.ಶಿವಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಬಿಜೆಪಿ ಮುಖಂಡ ಶಿವರಾಜ ಪಾಟೀಲ ರದ್ದೇವಾಡಗಿ ಅಧ್ಯಕ್ಷತೆ ವಹಿಸಿದ್ದರು. ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಗದ್ದುಗೆ ಕನ್ನಡ ನಾಡು ಚೆನ್ನ, ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಎರಡು ಹಾಡುಗಳನ್ನು ಹಾಡುವ ಮೂಲಕ ರಂಜಿಸಿದರು. ಆರ್.ಕೆ.ಪಿ ಗ್ರೂಪ್ ಮುಖ್ಯಸ್ಥ ಅನೀಲ ರಾಂಪೂರ ನೇತೃತ್ವ ವಹಿಸಿದ್ದರು.
ಇದೇ ವೇಳೆ ಅಖಿಲ ಭಾರತ ವೀರಶೈವ ಸಮಾಜದ ರಾಜ್ಯ ಕಾರ್ಯದರ್ಶಿ ರಾಜಶೇಖರ ಸಾಹು ಸೀರಿ, ಬ್ರಾಹ್ಮಣ ಸಮಾಜದ ಅಧ್ಯಕ್ಷ ರಮೇಶ ಬಾಬು ವಕೀಲ, ಗ್ಯಾರಂಟಿ ಸಮಿತಿ ಅಧ್ಯಕ್ಷ ಶೌಕತ್ ಅಲಿ ಆಲೂರ, ಪೀಕಾರ್ಡ ಬ್ಯಾಂಕ್ ಅಧ್ಯಕ್ಷ ಪ್ರತಾಪ ಕಟ್ಟಿ, ಪ್ರಕಾಶ ಕೂಡಲಗಿ, ರೆಡ್ಡಿ ಸಮಾಜದ ಅಧ್ಯಕ್ಷ ಶಿವರೆಡ್ಡಿ ಐನಾಪುರ, ಟಿಎಪಿಸಿಎಂಎಸ್ ಅಧ್ಯಕ್ಷ ಭಗವಂತ್ರಾಯಗೌಡ ಪಾಟೀಲ, ಬಹಾದ್ದೂರ ರಾಠೋಡ, ಮಲ್ಲಿಕಾರ್ಜುನ ಬೂದಿಹಾಳ, ವಿಜಯಲಕ್ಷ್ಮೀ ಆಂದೋಲಾ, ಶಾಂತಗೌಡ ನರಿಬೋಳ, ಭೀಮಾಶಂಕರ ಯಲಗೋಡ, ಸಂಗಣಗೌಡ ದಂಡೀನ್, ಮೈಲಾರಿ ಗುಡೂರ, ಮಹಿಬೂಬ್ ಮನಿಯಾರ, ಪ್ರಮೋದ್ ದೊರೆ ಅವರಿಗೆ ಬಸವಚೇತನ ಪ್ರಶಸ್ತಿ, ತಾಲೂಕು ಮಟ್ಟದ ವಿವಿಧ ಅಧಿಕಾರಿಗಳಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಗಾಯಕ ಸುರೇಶ ಇಂಚಗೇರಿ ನೇತೃತ್ವದ ಶಂಕರ ಮೆಲೋಡೀಸ್ ತಂಡದವರಿಂದ ಹಾಸ್ಯ ರಸಮಂಜರಿ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. ನೆರೆದ ಪ್ರೇಕ್ಷಕರ ಜತೆ ಕಲಾವಿದರು ನೃತ್ಯ ಹಾಗೂ ಹಾಡು ಹಾಡುವ ಮಾಡುವ ಮೂಲಕ ರಂಜಿಸಿದರು.
ಆರ್.ಕೆ.ಪಿ ಗ್ರೂಪ್ ನ ರವಿಚಂದ್ರ ಗುತ್ತೇದಾರ, ನಿಂಗಣ್ಣ ರದ್ದೇವಾಡಗಿ, ಅಂಬರೀಶ್ ಪತಂಗೆ, ಸಿದ್ದು ಗಜ, ರಾಜು ಪಾಟೀಲ, ವಿಶಾಲ ಪವಾರ, ಶ್ರೀಶೈಲಗೌಡ ಪಾಟೀಲ, ಪ್ರವೀಣ ಪಾಟೀಲ, ಚಂದ್ರು ಸೀರಿ, ಮರೆಪ್ಪ ಬೇಗಾರ, ಮನೋಹರ ಕೊಂಬಿನ್, ಶರಣು ಕೋಳಕೂರ, ಭಗವಂತ್ರಾಯ ಶಿವಣ್ಣಿ, ಬಿ.ಸಿ.ಗದ್ದಗಿಮಠ ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.



