ಬೆಂಗಳೂರು : ನಂದಿನಿ ಬಮುಲ್ ಉತ್ಪನ್ನಗಳ ರಾಯಭಾರಿಯಾಗಿ ಹಿರಿಯ ನಟಿ ಸುಧಾರಾಣಿ ಅವರು ನೇಮಕವಾಗಿಕದ್ದು,ಈ ಬಗ್ಗೆ ಸಹಕಾರ ಹಾಲು ಒಕ್ಕೂಟದ ಅಧ್ಯಕ್ಷ ಡಿ.ಕೆ.ಸುರೇಶ್ ಮಾಹಿತಿ ಹಂಚಿಕೊಂಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಡಿ.ಕೆ ಸುರೇಶ್ ಅವರು ನಮ್ಮ ಬಮುಲ್ ಕುಟುಂಬಕ್ಕೆ ಹಿರಿಯ ನಟಿ ಸುಧಾರಾಣಿ ಆತ್ಮೀಯ ಸ್ವಾಗತ ಬಯಸಿದ್ದಾರೆ. ಈ ಬಗ್ಗೆ ಸದಾಶಿವನಗರದ ನಿವಾಸದಲ್ಲಿ ಡಿ.ಕೆ.ಸುರೇಶ್ ಅವರನ್ನು ಔಪಚಾರಿಕವಾಗಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಅವರನ್ನು ಗೌರವಿಸಿ ಸತ್ಕರಿಸಲಾಯಿತು. ಆ ವೇಳೆ ಡಿ.ಕೆ.ಸುರೇಶ ಅವರು ರೈತರ ಏಳಿಗಗೆ ನಿರ್ಮಿತವಾದ ಮತ್ತು ಲಕ್ಷಾಂತರ ಗ್ರಾಹಕರ ನಂಬಿಕೆಗೆ ಪಾತ್ರವಾದ ಬಮುಲ್ ನಂದಿನಿಯ ಬ್ರಾಂಡ್ ಅಂಬಾಸಿಡರ್ ಆಗಿ ಶ್ರೀಮತಿ ಸುಧಾರಾಣಿ ಅವರನ್ನ ಸ್ವಾಗತಿಸುತ್ತಿರುವುದು ಸಂತೋಷದ ವಿಚಾರ. ಸ್ಯಾಂಡಲ್‌ವುಡ್‌ನ ದಿಗ್ಗಜರಾದ ಡಾ.ರಾಜ್‌ಕುಮಾರ್ ಹಾಗೂ ಶಿವರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಅವರ ಹಾದಿಯಲ್ಲಿ ಈ ಸಹಕಾರ ಕರ್ನಾಟಕದ ಜನರೊಂದಿಗೆ ನಂದಿನಿಯ ಭಾವನಾತ್ಮಕ ಬಾಂಧವ್ಯವನ್ನು ಹಾಗೂ ರೈತರ ಮೇಲನಿನ ನಮ್ಮ ಬದ್ಧತೆಯನ್ನ ಇನಷ್ಟು ಗಟ್ಟಿಗೊಳಿಸುತ್ತದೆ ಎಂದಿದ್ದಾರೆ.
ಈ ವೇಳೆ ಬಮುಲ್ ಜತೆ ಒಡಗೂಡುವ ಅವಕಾಶ ಅತ್ಯಂತ ಗೌರವದ ವಿಷಯವಾಗಿದೆ ಹಾಗಾಗಿ ನಟಿ ಸುಧಾರಾಣಿ ನಂದಿನಿ ಬಮುಲ್ ಉತ್ಪನ್ನಗಳ ರಾಯಭಾರಿಯಾಗಿ ತಮ್ಮನ್ನು ನೇಮಕ ಮಾಡಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸಹಕಾರ ಹಾಲು ಒಕ್ಕೂಟಕ್ಕೆ ನಟಿ ಸುಧಾರಾಣಿ ಧನ್ಯವಾದ ತಿಳಿಸಿದ್ದಾರೆ. ತಲೆಮಾರುಗಳಿಂದ ಪ್ರತಿಯೊಬ್ಬ ಕನ್ನಡಿಗನ ನಂಬಿಕೆಯ ಪ್ರತೀಕ ನಂದಿನಿ. ರೈತರ ಸಹಕಾರಿ ಸಂಸ್ಥೆಯಾದ ಬಮುಲ್ ನಂದಿನಿ ಜತೆ ಒಡಗೂಡುವ ಅವಕಾಶ ನನಗೆ ಅತ್ಯಂತ ಗೌರವದ ವಿಷಯ ಎಂದಿದ್ದಾರೆ.



