ಮಂಗಳೂರು: ಮಾರ್ಚ್ 27 ಮತ್ತು 28 ರಂದು ನಡೆಯಲಿರುವ ದ.ಕ ಜಿಲ್ಲಾ 28ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೃತಿ ಬಿಡುಗಡೆಗೆ ಅವಕಾಶ ಕಲ್ಪಿಸಿದ್ದು ಆಸಕ್ತ ಲೇಖಕರು / ಪ್ರಕಾಶಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಸಮ್ಮೇಳನವು ಸ್ಪರ್ಶಾ ಕಲಾಮಂದಿರ ಬಂಟ್ವಾಳ, ಬಿ.ಸಿ ರೋಡ್ ಇಲ್ಲಿ ನಡೆಯಲಿದ್ದು ಯಾವುದೇ ಪ್ರಕಾರದ ಕನ್ನಡ ಪುಸ್ತಕಗಳ ಬಿಡುಗಡೆಗೆ ಅವಕಾಶವಿದೆ. ಆಸಕ್ತರು ವಿವರಗಳಿಗೆ ಶ್ರೀಮತಿ ಗೀತಾ ಎಸ್. ಕೊಂಕೋಡಿ 9480367856 ಅಥವಾ ಶ್ರೀಮತಿ ರಜನಿ ಚಿಕ್ಕಯ್ಯ ಮಠ 7022183946 ಇವರನ್ನು 25 .2.2026 ರ ಮುಂಚಿತವಾಗಿ ಸಂಪರ್ಕಿಸಬಹುದು ಎಂದು ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ.ಪಿ ಶ್ರೀನಾಥ ಇಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ಶಂಶೀರ್ ಬುಡೋಳಿ



